ಹೆಗ್ಗಣ ಕಲಿಸಿದ ಪಾಠ

Team Udayavani, Oct 24, 2019, 4:03 AM IST

q-10

ಒಂದು ದಟ್ಟ ಕಾಡಿತ್ತು. ಅ ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅ ಮರ ಬಹಳ ವರ್ಷಗಳಿಂದ ಜೀವಿಸಿದ್ದರಿಂದ ಹಿರಿಯನಂತೆ ವರ್ತಿಸುತ್ತಿತ್ತು. ಅದೇ ವಿಷಯವಾಗಿ ಅದಕ್ಕೆ ತುಂಬಾ ಜಂಬವಿತ್ತು. ಕಾಡಿಗೆ ತಾನೇ ಹಿರಿದಾದ ಮರ, ತನ್ನಷ್ಟು ಹಿರಿಯ ಮರ ಎಲ್ಲೂ ಇಲ್ಲ, ಆದ್ದರಿಂದ ಎಲ್ಲರೂ ತನ್ನ ಮಾತು ಕೇಳಬೇಕು ಎಂದು ಮೆರೆಯುತ್ತಿತ್ತು. ತನ್ನ ನೆರಳಿನ ಆಶ್ರಯಕ್ಕೆ ಬಂದ ಪ್ರಾಣಿಗಳ ಬಳಿ “ಇಷ್ಟು ವಯಸ್ಸಾಗಿದ್ದರೂ ನನ್ನ ರೆಂಬೆ ಕೊಂಬೆಗಳು ಹಸಿರಿನಿಂದ ನಳನಳಿಸುತ್ತಿದೆ ನೋಡಿ’ ಎಂದು ನಲಿಯುತ್ತಿತ್ತು.

ಒಂದು ದಿನ ಪುಟ್ಟ ಗುಬ್ಬಿ ಮರದ ಮೇಲೆ ಕುಳಿತಿತು. ಹಿರಿಯ ಮರ ಮಾತ್ರ ಮಾತಾಡಲೇ ಇಲ್ಲ. ಯಾವತ್ತೂ ತಾನಾಗಿಯೇ ಮಾತು ಶುರುಮಾಡುತ್ತಿದ್ದ ಮರ ಇವತ್ತೇಕೆ ಸುಮ್ಮನಿದೆ ಎಂದು ಗುಬ್ಬಿ ಆಶ್ಚರ್ಯ ವ್ಯಕ್ತಪಡಿಸಿತು. ತುಂಬಾ ಹೊತ್ತು ಸುಮ್ಮನಿದ್ದ ಗುಬ್ಬಿ “ನೀನು ಯಾವಾಗಲೂ ಸಂತೋಷದಿಂದ ಇರುತ್ತಿದ್ದೆಯಲ್ಲಾ. ಇಂದು ಯಾಕೆ ಬೇಸರದಿಂದ ಇದ್ದೀಯಾ?’ ಎಂದು ಕೇಳಿತು. ಮರ “ನನ್ನ ಬೇರು ನೋಡಿದ್ದೀಯ? ಎಷ್ಟು ಕೊಳಕಾಗಿದೆ. ನನ್ನ ಎತ್ತರ, ನನ್ನ ಸೌಂದರ್ಯ ಇಷ್ಟು ಬೃಹತ್ತಾಗಿದ್ದರೂ ಬೇರುಗಳು ಮಾತ್ರ ಕೊಳಕಾಗಿದ್ದರೆ ಏನು ಚೆನ್ನ?!’.

ಅದನ್ನು ಕೇಳಿ ಪುಟ್ಟ ಗುಬ್ಬಿ ನಕ್ಕು “ಅಯ್ಯೋ ಮರವೇ… ನಿನ್ನ ಎತ್ತರ, ಸೌಂದರ್ಯ ಇವೆಲ್ಲವಕ್ಕೂ ಮುಖ್ಯ ಕಾರಣ ಇವೇ ಇದೇ ಕೆಸರು ಮೆತ್ತಿದ ಬೇರು. ಅದಿಲ್ಲದೇ ಇರುತ್ತಿದ್ದರೆ ನೀನು ಬೆಳೆಯುವುದಕ್ಕೆ ಪೋಷಕಾಂಶ ಎಲ್ಲಿಂದ ಬರಬೇಕು? ಈಗ ಅದನ್ನೇ ದೂಷಿಸುತ್ತಿರುವೆಯಲ್ಲ. ಇದು ಸರಿಯೇ?’ ಎಂದು ಕೇಳಿತು. ಆದರೆ ಮರಕ್ಕೆ ಅದು ನಾಟಲಿಲ್ಲ. ಅದು ತನ್ನ ಮೊಂಡುವಾದವನ್ನೇ ಹಿಡಿಯಿತು. “ಆದರೂ ಈ ಬೇರುಗಳು ಮಣ್ಣು ಮೆತ್ತಿಕೊಂಡಿರದೇ ಇದ್ದರೇ ಚೆಂದವಿತ್ತು’ ಎಂದು ಮತ್ತೆ ಬೇಸರಪಟ್ಟುಕೊಂಡಿತು. ಇದಕ್ಕೆ ಎಷ್ಟು ಹೇಳಿದರೂ ಅಷ್ಟೆ ಎಂದು ಅರಿತ ಗುಬ್ಬಿ ಮತ್ತೆ ಏನನ್ನೂ ಹೇಳದೆ ಅಲ್ಲಿಂದ ಹಾರಿಹೋಯಿತು.

ಕೆಲವು ದಿನಗಳ ನಂತರ ಕಾಡಿನಲ್ಲಿ ಹೊಸದೊಂದು ಸಮಸ್ಯೆ ಪ್ರಾರಂಭವಾಗಿತ್ತು. ಅದೆಲ್ಲಿಂದಲೋ ಹೆಗ್ಗಣದ ಸೈನ್ಯ ಕಾಡಿಗೆ ನುಗ್ಗಿಬಿಟ್ಟಿತು. ಸಿಕ್ಕ ಸಿಕ್ಕ ಮರಗಳನ್ನೆಲ್ಲಾ ಕಡಿದು ಹಾಕುತ್ತಿದ್ದವು. ಅವು ಕಾಡಿನ ನೆಲದಲ್ಲಿ ಬಿಲ ತೋಡಲು ಸೂಕ್ತವಾದ ಮರವನ್ನು ಹುಡುಕುತ್ತಿದ್ದವು. ಅದೇ ಸಮಯಕ್ಕೆ ಹಿರಿಯ ಮರ ಹೆಗ್ಗಣಗಳನ್ನು ತನ್ನ ಬಳಿಗೆ ಕರೆಯಿತು. ಅವುಗಳಿಂದ ತನ್ನ ಬೇರನ್ನು ಸ್ವತ್ಛ ಮಾಡಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು. ಆ ಹಿರಿಯ ಮರದ ಎತ್ತರ ಮತ್ತು ಬೃಹತ್‌ ಗಾತ್ರ ನೋಡಿದ ಹೆಗ್ಗಣಗಳ ಸೈನ್ಯದ ಮುಖಂಡ “ಈ ಮರದ ಕೆಳಗೆ ಬಿಲ ತೋಡಿದರೆ ತಮ್ಮ ಸೈನ್ಯದ ಸದಸ್ಯರೆಲ್ಲರೂ ವಾಸಿಸಬಹುದು’ ಎಂದಿತು. ತಮ್ಮ ಮುಖಂಡ ಹಾಗೆ ಹೇಳಿದ್ದೇ ತಡ ಹೆಗ್ಗಣಗಳು ಮರದ ಬುಡದ ಮೇಲೆ ಮುಗಿಬಿದ್ದವು. ಸ್ವಲ್ಪ ಹೊತ್ತಿನಲ್ಲಿ ಮರಕ್ಕೆ ನೋವಾಗತೊಡಗಿತು. ಬಹಳ ಬೇಗ ಹೆಗ್ಗಣಗಳು ಹಿರಿಯ ಮರದ ಬೇರನ್ನು ಕಡಿದು ಕಡಿದು ಸಡಿಲ ಮಾಡಿದವು. ಮರ ದೊಪ್ಪನೆ ಉರುಳಿಬಿತ್ತು. ತನ್ನ ಬೆಳವಣಿಗೆಗೆ ಕಾರಣವಾದ ಬೇರನ್ನೇ ದ್ವೇಷಿಸಿದ ಮರಕ್ಕೆ ತಕ್ಕ ಶಾಸ್ತಿಯಾಗಿತ್ತು.

– ಯು. ಎಚ್‌. ಎಮ್‌. ಗಾಯತ್ರಿ

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.