ಉದ್ದ ಉದ್ದ ಮೂಗು
Team Udayavani, Feb 27, 2020, 5:12 AM IST
ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು.
ಆ ಹುಡುಗ ಸುಂದರವಾಗಿದ್ದ. ಆದರೆ ಕಂಡವರನ್ನೆಲ್ಲ ಉದ್ದ ಮುಖ ಮಾಡಿಕೊಂಡು ತನ್ನ ಮೂಗಿನ ಮೇಲೆ ತೋರು ಬೆರಳಿಟ್ಟು ಹಾಸ್ಯ ಮಾಡುತ್ತಿದ್ದ. ಎಲ್ಲರನ್ನೂ “ಗೊಗ್ಗ ಗೊಗ್ಗ’ ಎನ್ನುತ್ತಿತ್ತು. ಪರಿಣಾಮ- ಎಲ್ಲರೂ ಆ ಮಗುವನ್ನೇ “ಗೊಗ್ಗಯ್ಯ’ ಎಂದು ಕರೆಯಲು ಆರಂಭಿಸಿದರು. ಅಮ್ಮ ಅಪ್ಪ ಎಷ್ಟು ಬೇಡವೆಂದರೂ ಗೊಗ್ಗಯ್ಯ ತನ್ನ ಚಾಳಿ ಬಿಡಲಿಲ್ಲ.
ಒಂದು ದಿನ ಗೊಗ್ಗಯ್ಯ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಿದ್ದ. ಆತನ ಮೂಗೇ ಅವನಿಗೆ ಚೆನ್ನಾಗಿ ಕಾಣಿಸಲಿಲ್ಲ. ತನ್ನ ಮೂಗು ಮೊಂಡು ಎನಿಸಿತು. ತನ್ನ ಮೂಗು ಇನ್ನೂ ಉದ್ದ ಇರಬೇಕೆಂದುಕೊಂಡ. ಮೂಗನ್ನು ಎಳೆದೆಳೆದು ನೋಡಿದ. ಏನೂ ವ್ಯತ್ಯಾಸವಾಗಲಿಲ್ಲ. ತನ್ನ ಅಂತರಂಗದಲ್ಲೆ ಒಬ್ಬ ಪುಟಾಣಿ ದೇವರಿದ್ದಾನೆ ಎಂಬ ಅಮ್ಮನ ಮಾತು ನೆನಪಾಯಿತು. ಕಣ್ಣುಮುಚ್ಚಿ ಧ್ಯಾನಿಸಿದ. “ದೇವರೇ ನನ್ನ ಮೂಗನ್ನು ಉದ್ದ ಮಾಡು’ ಎಂದು ಕೇಳಿಕೊಂಡ. ಅವನ ಅಂತರ್ಯದಿಂದ ಒಂದು ದನಿ ಕೇಳಿಸಿತು. “ಈಗಿರೋ ಮೂಗು ಚೆನ್ನಾಗಿಯೇ ಇದೆಯಲ್ಲ’. “ಇಲ್ಲ ನನಗೆ ಇನ್ನೂ ಉದ್ದದ ಮೂಗು ಬೇಕು’ ಎಂದ ಗೊಗ್ಗಯ್ಯ. ಎಷ್ಟು ಹೇಳಿದರೂ ಕೇಳಲಿಲ್ಲ. ಆಗ ಆಂತರ್ಯದ ದನಿ “ಹಾಗೇ ಆಗಲಿ. ನಿನ್ನ ಮೂಗನ್ನು ಯಾರು ಮೃದುವಾಗಿ ಚಿವುಟುತ್ತಾರೋ ಆಗ ನಿನ್ನ ಮೂಗು ಒಂದಿಂಚು ಬೆಳೆಯುತ್ತದೆ’ ಎಂದ ಹಾಗೆ ಕೇಳಿಸಿತು. ಗೊಗ್ಗಯ್ಯ ಖುಷಿಯಾದ. ತನ್ನ ಮೂಗನ್ನು ತಾನೇ ಚಿವುಟಿಕೊಂಡ. ಒಂದಿಂಚು ಮೂಗು ಉದ್ದವಾಯಿತು! ಮತ್ತೂಮ್ಮೆ ಚಿವುಟಿದ. ಮೂಗು ಮತ್ತೂ ಉದ್ದವಾಯಿತು. ಶಾಲೆಯಲ್ಲಿ ಸ್ನೇಹಿತರೆಲ್ಲ ಗೊಗ್ಗಯ್ಯನ ಮೂಗನ್ನು ಕಂಡು ವಿಸ್ಮಿತರಾದರು. ಪ್ರೀತಿಯಿಂದ ಒಬ್ಬೊಬ್ಬರೇ ಬಂದು ಗೊಗ್ಗಯ್ಯನ ಮೂಗನ್ನು ಮೃದುವಾಗಿ ಚಿವುಟಿದರು? ಒಬ್ಬೊಬ್ಬರು ಚಿವುಟಿದಂತೆಲ್ಲ ಗೊಗ್ಗಯ್ಯನ ಮೂಗು ಉದ್ದವಾಯಿತು! ಎಷ್ಟು ಉದ್ದವಾಯಿತೆಂದರೆ ಆನೆಯ ಸೊಂಡಿಲಿನಂತೆ ಉದ್ದವಾಯಿತು! ಮೂಗಿನ ಭಾರವನ್ನು ತಡೆದುಕೊಳ್ಳಲಾರದೆ ಗೊಗ್ಗಯ್ಯ ಒದ್ದಾಡಿದ. ಆದರೆ ಶಾಲೆಯ ಮಕ್ಕಳಿಗಂತೂ ಅದೊಂದು ತಮಾಷೆಯ ಆಟವಾಗಿತ್ತು. ಬಂದವರೆಲ್ಲ ಗೊಗ್ಗಯ್ಯನ ಮೂಗನ್ನು ಚಿವುಟಿ ಚಿವುಟಿ ಉದ್ದ ಮಾಡುತ್ತಿದ್ದರು. ಮೂಗು ಉದ್ದುದ್ದವಾಗಿ ದಾರಿಯಲ್ಲಿ ಹರಡಿ ಊರಿನ ಮೈದಾನವನ್ನು ತಲುಪಿತು! ಗೊಗ್ಗಯ್ಯನ ಪರಿಸ್ಥಿತಿಯನ್ನು ಕಂಡು ಅಪ್ಪ ಅಮ್ಮ ನೊಂದುಕೊಂಡರು. ಅವನಿಗೆ ಆಹಾರ ಸೇವಿಸಲೂ ಕಷ್ಟವಾಯಿತು. ಸಹಿಸಲಾರದಷ್ಟು ಉದ್ದ ಮೂಗಾದಾಗ ಗೊಗ್ಗಯ್ಯನಿಗೆ ಅಳುವೇ ಬಂದಿತು. ಮೊದಲಿನ ಮೂಗೇ ಚೆನ್ನಾಗಿತ್ತೆಂದು ಎನಿಸಿತು.
ಮರುದಿನ ಭಾನುವಾರ. ಬೆಳಗಿನಿಂದಲೇ ಮಕ್ಕಳು ಬಯಲಲ್ಲಿ ಕ್ರಿಕೆಟ್ ಆಡುತ್ತಿದ್ದರು. ಗೊಗ್ಗಯ್ಯನಿಗೆ ಅಮ್ಮ ಹೇಳಿದ ಮಾತು ಮತ್ತೂಮ್ಮೆ ನೆನಪಾಯಿತು. ತನ್ನ ಅಂತರ್ಯದ ಸ್ವಾಮಿಯನ್ನು ಕಣ್ಣುಮುಚ್ಚಿ ಪ್ರಾರ್ಥಿಸಿದ. ಏನಾದರೂ ಮಾಡಬೇಕೆಂದು ಕೋರಿದ. ಒಂದು ದನಿ ಕೇಳಿಸಿತು. “ನಿನ್ನ ಪರಿಸ್ಥಿತಿ ಕಂಡು ಅಯ್ಯೋ ಎನಿಸುತ್ತಿದೆ. ಹೋದ ಬಾರಿಯೇ ನಾ ಹೇಳಿದ್ದೆ. ನೀ ಕೇಳಲಿಲ್ಲ ಈಗೇನು ಬೇಕು ನಿನಗೆ?’ “ನನಗೆೆ ನನ್ನ ಹಳೆಯ ಮೂಗೇ ಬೇಕು’ “ಹಾಗೇ ಆಗಲಿ… ನಿನ್ನ ಮೂಗು ಉದ್ದವಾದಂತೆ ಚಿಕ್ಕದೂ ಆಗುತ್ತದೆ. ನಿನ್ನ ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದಾಗ ನಿನ್ನ ಮೂಗಿನ ತುದಿಯನ್ನು ಲಘುವಾಗಿ ಬ್ಯಾಟ್‌ನಿಂದ ತಟ್ಟಿದರೆ ಅದು ಸಾಧ್ಯ’ ಎಂದಿತು ದನಿ.
ಕ್ರಿಕೆಟ್ ಆಡುತ್ತಿದ್ದ ಬಾಲಕರು ಗೊಗ್ಗಯ್ಯನ ಮೂಗನ್ನು ಚಿವುಟಿ ಚಿವುಟಿ ಉದ್ದ ಮಾಡಿದ್ದರಷ್ಟೆ. ಕ್ರಿಕೆಟ್ ಆಡುತ್ತಿದ್ದಾಗ ಒಮ್ಮೆ ಬ್ಯಾಟು ಮೂಗಿನ ತುದಿಗೆ ತಗುಲಿತು. ಮೂಗು ಒಂದಿಂಚು ಚಿಕ್ಕದಾಯಿತು! ಮಕ್ಕಳಿಗೆ ಕುತೂಹಲ ಹೆಚ್ಚಾಯ್ತು. ಎಲ್ಲರೂ ಬಂದು ಬಂದು ಬ್ಯಾಟಿನಿಂದ ತಟ್ಟಿದರು. ಹಾಗೆ ಮಾಡಿದಂತೆಲ್ಲ ಮೂಗು ಚಿಕ್ಕದಾಯಿತು. ಪಕ್ಕದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳೂ ಅಲ್ಲಿಗೆ ಬಂದು ಬ್ಯಾಟ್‌ನಿಂದ ಗೊಗ್ಗಯ್ಯನ ಮೂಗನ್ನು ತಟ್ಟಿದರು. ಇದರಿಂದಾಗಿ ಉದ್ದವಿದ್ದ ಮೂಗು ಕಡೆಗೂ ಮೊಟಕಾಯಿತು. ಮೂಗು ಮೊದಲಿದ್ದಂತೆಯೇ ಆದಾಗ ಇನ್ನು ಬ್ಯಾಟ್‌ನಿಂದ ತಟ್ಟದಂತೆ ಗೊಗ್ಗಯ್ಯ ಎಚ್ಚರಿಸಿದ. ಗೊಗ್ಗಯ್ಯನನ್ನು ಮೊದಲಿನಂತೆ ಕಂಡು ಸ್ನೇಹಿತರೆಲ್ಲ ಕುಣಿ ಕುಣಿದಾಡಿದರು!
– ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.