ಬೆನ್ನ ಹಿಂದೆಯೂ ನೋಡುತ್ತೆ ಮೊಲ
Team Udayavani, May 30, 2019, 8:00 PM IST
ಬೆನ್ನಿನಲ್ಲಿ ಯಾವ ಪ್ರಾಣಿಗೂ ಕಣ್ಣುಗಳಿಲ್ಲ. ಹಾಗಿದ್ದೂ ಈ ಪ್ರಾಣಿ ಬೆನ್ನ ಹಿಂದಿರುವುದನ್ನು ನೋಡಬಲ್ಲುದು. ಮನುಷ್ಯ ಸುಮಾರು 120 ಡಿಗ್ರಿಯಷ್ಟನ್ನು ನೋಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದರೆ ಈ ಪ್ರಾಣಿ 360 ಕೋನಗಳ ದೃಷ್ಟಿಯನ್ನು ಹೊಂದಿದೆ. ಆ ಪ್ರಾಣಿ ಬೇರಾವುದೂ ಅಲ್ಲ ನಾವು ಬೋನಿನಲ್ಲಿ ನೋಡಲಿಚ್ಚಿಸುವ, ಉದ್ಯಾನಗಳಲ್ಲಿ ಬಂಧಿಸಿಡುವ ಮುದ್ದಾದ ಮೊಲ. ಪ್ರಕೃತಿ ಇವುಕ್ಕೆ ಬೆನ್ನ ಹಿಂದೆಯೂ ನೋಡಬಲ್ಲ ಸಾಮರ್ಥ್ಯವನ್ನು ನೀಡಿವೆ. ಈ ಸಸ್ಯಾಹಾರಿ ಮತ್ತು ನಿರುಪದ್ರವಿ ಜೀವಿ ಬಹಳಷ್ಟು ಪ್ರಾಣಿಗಳಿಗೆ ಆಹಾರವಾಗಿದೆ. ಹೀಗಾಗಿ ಇವು ಸದಾ ಕಾಲ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಒಂದು ಚಿಕ್ಕ ಸಪ್ಪಳವಾದರೂ ಅವು ಅಪಾಯವನ್ನು ಗ್ರಹಿಸಿ ಮರೆಯಾಗುತ್ತವೆ. 360 ಡಿಗ್ರಿ ದೃಷ್ಟಿಕೋನವನ್ನು ಅವು ನೋಡಬಲ್ಲವಾದರೂ ಒಎದು ಭಾಗ ಅವಕ್ಕೆ ಮರೆಯಾಗಿ ಉಳಿಯುತ್ತದೆ. ಅದನ್ನು ಇಂಗ್ಲಿಷ್‌ನಲ್ಲಿ “ಬ್ಲೆ„ಂಡ್ ಸ್ಪಾಟ್’ ಎಂದು ಕರೆಯುತ್ತಾರೆ. ಮೂಗಿನ ನೇರಕ್ಕಿರುವ ದೃಶ್ಯಾವಳಿ ಅವುಗಳಿಗೆ ಕಾಣದು. ಆಗ ಅವು ಕತ್ತನ್ನು ತಿರುಗಿಸುವುದರ ಮೂಲಕ ಆ ಭಾಗವನ್ನು ಕವರ್ ಮಾಡುತ್ತವೆ.
ಮೊಲಗಳ ಜಾಗೃತ ಮನಸ್ಥಿತಿಗೆ ಉದಾಹರಣೆಯೊಂದು ಇಲ್ಲಿದೆ. ಮೊಲಗಳಿಗೆ ಪರಿಚಿತವಾಗಿರುವ ಯಜಮಾನ ಎದುರಿನಿಂದ ಬಂದರೆ ನಲಿಯುತ್ತಾ ಅವನ ಬಳಿಗೆ ಓಡುತ್ತವೆ. ಆದೇ ಯಜಮಾನ ಹಿಂದಿನಿಂದ ಬಂದರೆ ಶತ್ರು ಬರುತ್ತಿದ್ದಾನೆ ಎಂದುಕೊಂಡು ಓಟ ಕೀಳುತ್ತವೆ. ಹಿಂದಿನಿಂದ ಬರುವವನು ಯಾವತ್ತೂ ಶತ್ರುವಾಗಿರುತ್ತಾನೆ ಎನ್ನುವ ಸತ್ಯ ಅವುಗಳಿಗೂ ತಿಳಿದಿರುವುದು ಸೋಜಿಗ ಅಲ್ಲವೇ?
ಆನೆಗಳ ಸೀಕ್ರೆಟ್ ವಿ.ಐ.ಪಿ ಕೋಡ್
ನಮ್ಮಲ್ಲಿ ಕೆಲ ದೇವಸ್ಥಾನಗಳಲ್ಲಿ ವಿ.ಐ.ಪಿ(ಪ್ರಮುಖ ವ್ಯಕ್ತಿ)ಗಳಿಗೆಂದೇ ಪ್ರತ್ಯೇಕ ಸರದಿ ಇರುವುದನ್ನು ಗಮನಿಸಿರಬಹುದು. ಇಷ್ಟೂದ್ದದ ಸರದಿಯಲ್ಲಿ ನಿಂತು ಕಂಟೆಗಟ್ಟಲೆ ವ್ಯಯ ಮಾಡುವುದಕ್ಕೆ ಸಮಯ ಇರುವುದಿಲ್ಲವೆಂಬ ಕಾರಣಕ್ಕೆ ಈ ವ್ಯವಸ್ಥೆ. ವಿದೇಶಗಳಲ್ಲಿ ಆ್ಯಂಬುಲೆನ್ಸ್‌ಗಳಿಗೆಂದೇ ಪ್ರತ್ಯೇಕ ಲೇನುಗಳನ್ನು ಮಾಡಿರುತ್ತಾರೆ. ಕಾರ್ಯಕ್ರಮಗಳಲ್ಲಿ ಮುಂದಿನ ಆಸನಗಳನ್ನು ಪ್ರಮುಖ ವ್ಯಕ್ತಿಗಳಿಗಾಗಿ ಕಾದಿರಿಸಿರುತ್ತಾರೆ. ಒಟ್ಟಿನಲ್ಲಿ ಈ “ಪ್ರತ್ಯೇಕ’ ಅನ್ನುವುದು “ಮುಖ್ಯ’ ಎನ್ನುವುದರ ಜೊತೆ ಅಂಟಿಕೊಂಡಿರುವುದು ಸ್ಪಷ್ಟವಾಗುತ್ತದೆ. ಭೂಮಿ ಮೇಲಿನ ವಿ.ಐ.ಪಿಗಳನ್ನು ಪಟ್ಟಿ ಮಾಡುವುದಾದರೆ ಮೊದಲ ಸ್ಥಾನ ಮನುಷ್ಯನಿಗೆ. ಈ ವಿಚಾರ ಆನೆಗಳಿಗೂ ಗೊತ್ತು. ಅದಕ್ಕೆಂದೇ ಮನುಷ್ಯನಿಗಾಗಿ ಪ್ರತ್ಯೇಕ ಬಗೆಯ àಳನ್ನು ಅವು ಮೀಸಲಿಟ್ಟಿವೆ. ಸೀಕ್ರೆಟ್ ಕೋಡ್ ಥರ! ಪರಿವಾಗಿಲ್ವೇ ಆನೆಗಳಿಗೂ ನಮ್ಮ ಪ್ರಾಮುಖ್ಯತೆ ಗೊತ್ತಾಯಿತಲ್ಲ ಎಂದು ಇಷ್ಟು ಬೇಗ ಖುಷಿಪಡದಿರಿ. ಆನೆಗಳು ನಮ್ಮನ್ನು ಯಾವ ಲೆಕ್ಕದಲ್ಲಿ ವಿ.ಐ.ಪಿ ಎಂದು ಪರಿಗಣಿಸಿವೆ ಎಂದು ಮೊದಲು ತಿಳಿದುಕೊಳ್ಳಿರಿ. ನಮ್ಮನ್ನು ಅವು ಅಪಾಯಕಾರಿ ಎಂದು ಪರಿಗಣಿಸುತ್ತವೆ. ಹೀಗಾಗಿ ಮನುಷ್ಯನನ್ನು ಕಂಡ ಕೂಡಲೆ ವಿಭಿನ್ನ ಬಗೆಯ ಸದ್ದನ್ನು ಹೊರಡಿಸುತ್ತವೆ, ಇತರೆ ಆನೆಗಳು ಎಚ್ಚೆತ್ತುಕೊಳ್ಳಲಿ ಎಂದು.
-ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.