ತಲೆ ಕೆಳಗು ಮಾಡುತ್ತೆ ನೋಟು
Team Udayavani, Jan 3, 2019, 12:30 AM IST
ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್ ರೀಡಿಂಗ್, ಸಮ್ಮೊಹಿನಿ, ಇಲ್ಯೂಶನ್, ಇತ್ಯಾದಿ… ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾ ತಂತ್ರಗಳು ಪ್ರಾರಂಭಿಕ ಹಂತದ್ದು ಮತ್ತು ಯಾವುದೇ ಅಪಾಯವಿಲ್ಲದೆ, ಯಾರ ನೆರವಿಲ್ಲದೆ, ಸರಳವಾಗಿ ನೀವೇ ಮಾಡಬಹುದಾದಂಥ ತಂತ್ರಗಳು. ಬಹಳ ಸುಲಭ ಅನ್ನಿಸಿದರೂ ನಿಮ್ಮ ಪ್ರಾರಂಭಿಕ ಕೈ ಚಳಕದ ಅಭ್ಯಾಸಕ್ಕಾಗಿ ಇಂತಹ ಟ್ರಿಕಳನ್ನು ಕಲಿಯೋದು ಅವಶ್ಯ. ಹಾಗಾಗಿ ನಿಮಗೆ ಈ ಬಾರಿ ನಾನು ನೋಟಿನಲ್ಲಿರೋ ಗಾ0ಧೀ ತಾತನನ್ನಾ ಉಲ್ಟಾ ಮಾಡೋದು ಹೇಗೆ ಅಂತ ತಿಳಿಸಲಿದ್ದೀನಿ.
ಪ್ರದರ್ಶನ:
ಜಾದೂಗಾರ 100 ರುಪಾಯಿ (ಗಾಂಧೀಜಿ ಚಿತ್ರವಿರುವ ಯಾವುದೇ ನೋಟು ಆಗುತ್ತದೆ) ನೋಟೊಂದನ್ನು ಪ್ರೇಕ್ಷಕರಿಗೆಲ್ಲಾ ತೋರಿಸಿ, ಗಾಂಧಿ ತಾತನ ಚಿತ್ರವನ್ನು ಗಮನಿಸಲು ತಿಳಿಸುತ್ತಾನೆ. ಈಗ ನೋಟನ್ನು ಮಡಚಿ, ಜಾದೂ ಮಂತ್ರವನ್ನು ಉತ್ಛರಿಸುತ್ತಾ ನಿಧಾನವಾಗಿ ನೋಟನ್ನು ಓಪನ್ ಮಾಡಿದರೆ, ಸೀದಾ ಇದ್ದ ಗಾಂಧೀ ತಾತ ತಲೆ ಕೆಳಗಾಗಿರುತ್ತದೆ! ಪ್ರೇಕ್ಷಕರಿಗೆ ನೋಟಿನಲ್ಲಿ ಏನೂ ಮೋಸ ಅಡಗಿಲ್ಲ ಎನ್ನುವುದನ್ನು ಖಚಿತ ಪಡಿಸಲು ಜಾದೂಗಾರ ನೋಟನ್ನು ಪ್ರೇಕ್ಷಕನೊಬ್ಬನ ಕೈಗೆ ನೀಡುತ್ತಾನೆ. ಪ್ರೇಕ್ಷಕ ಅದನ್ನು ಮುಟ್ಟಿ ಪರೀಕ್ಷಿಸಿ ವಾಪಸ್ ಮಾಡುತ್ತಾನೆ. ಜಾದೂಗಾರ ಮತ್ತೂಮ್ಮೆ ಮ್ಯಾಜಿಕ್ಕನ್ನು ಪುನರಾವರ್ತಿಸುತ್ತಾನೆ.
ಬೇಕಾಗುವ ವಸ್ತು:
ಗಾಂಧೀಜಿ ಚಿತ್ರವಿರುವ ಯಾವುದೇ ಕರೆನ್ಸಿ ನೋಟು
ಮಾಡುವ ವಿಧಾನ:
ಮೊದಲಿಗೆ ಗಾಂಧೀಜಿ ಮುಖ ಮೇಲಿರುವಂತೆ ಹಿಡಿದುಕೊಳ್ಳಿ. ನಂತರ ಅಡ್ಡಡ್ಡವಾಗಿ ಗಾಂಧೀಜಿಯ ಚಿತ್ರ ಕೆಳಮುಖವಾಗುವಂತೆ ಹಾಗೂ ಮಡಚಿದ ಮಡಿಕೆ ನಿಮ್ಮೆಡೆಗೆ ಬರುವಂತೆ ಮಡಚಿ (ಚಿತ್ರಗಳನ್ನು ಗಮನಿಸಿ). ಈಗ ಎರಡನೆಯ ಮಡಿಕೆ ಹಿಂಬಾಗಕ್ಕೆ ತಳ್ಳಿ ಮಡಚಿ. ಅದೇ ಮಡಿಕೆಯನ್ನು ಮತ್ತೂಮ್ಮೆ ನಿಮ್ಮ ಕಡೆಗೆ ಬರುವಂತೆ ಮಡಚಿ. ಈಗ ಜಾದೂ ಮಂತ್ರವನ್ನು ಪಠಿಸುತ್ತಾ ಮುಂದಿನಿಂದಲೇ ಎಲ್ಲಾ ಮಡಚಿದ್ದ ಮಡಿಕೆಯನ್ನು ತೆರೆದು ತೋರಿಸಿದರೆ ಗಾಂಧೀಜಿ ಚಿತ್ರ ತಲೆಕೆಳಗಾಗಿರುತ್ತೆ. ಈ ಮ್ಯಾಜಿಕನ್ನು ಸುಲಭವಾಗಿ ಮಾಡಲು ಕೆಳಗಿನ ವಿಡಿಯೊ ಕೊಂಡಿಗೆ ಭೇಟಿ ನೀಡಿ.
ವಿಡಿಯೊ ಕೊಂಡಿ- goo.gl/dZGg4e
ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.