ಮಲೇರಿಯ ಹೋಗಲಾಡಿಸುವ ಮಂತ್ರ!
Team Udayavani, Aug 29, 2019, 5:38 AM IST
ರೋಮನ್ನರು ಆಧುನಿಕ ಜಗತ್ತಿಗೆ ಅನೇಕ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ರಸ್ತೆಗಳು, ಚರಂಡಿ ವ್ಯವಸ್ಥೆ, ಸ್ನಾನಗೃಹಗಳು ಹೀಗೆ ಬಹಳಷ್ಟು ನಾಗರಿಕ ಸವಲತ್ತುಗಳನ್ನು ಶತಮಾನಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿದವರು ಅವರು. ಇಂಥವರು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ತಿಳಿದರೆ ನಂಬುವುದು ಕಷ್ಟ. ಅದೆಂಥಾ ಕೆಲಸ ಎನ್ನುತ್ತೀರಾ? ಇಲ್ಲಿದೆ ನೋಡಿ…
ಜಗತ್ತಿನ ಹಳೆಯ ಖಾಯಿಲೆ ಎಂದರೆ ಮಲೇರಿಯಾ. ಕ್ರಿ.ಪೂ. 2700ನೇ ಇಸವಿಯಲ್ಲೇ ಆ ರೋಗವನ್ನು ಇತಿಹಾಸಕಾರನೊಬ್ಬ ದಾಖಲಿಸಿದ್ದಾನೆ. ರೋಮ್‌ನಲ್ಲೂ ಮಲೇರಿಯಾ ತನ್ನ ಕರಾಳ ಹಸ್ತವನ್ನು ಚಾಚಿತ್ತು. ಆ ಸಮಯದಲ್ಲಿ ಅಲ್ಲಿನ ವೈದ್ಯಕೀಯ ಕ್ಷೇತ್ರ ಒಂದಷ್ಟು ಬೆಳವಣಿಗೆ ಕಂಡಿದ್ದರೂ, ಜನರು ಹೆಚ್ಚಾಗಿ ದೇವರು, ಮಾಟ ಮಂತ್ರಗಳಿಗೆ ಮೊರೆ ಹೋಗುತ್ತಿದ್ದರು. ಹೀಗಾಗಿ ವೈದ್ಯರಿಗಿಂತ ಹೆಚ್ಚಾಗಿ ಪೂಜಾರಿಗಳು, ಮಾಟಗಾರರಿಗೆ ಹೆಚ್ಚಿನ ಮನ್ನಣೆ, ಪ್ರಾಮುಖ್ಯತೆ ದೊರೆಯುತ್ತಿತ್ತು. ಮಲೇರಿಯಾ ಪೀಡಿತರಿಗೆ ಔಷಧ ನೀಡುವ ಬದಲಾಗಿ ಸರ ಒಂದನ್ನು ನೀಡಲಾಗುತ್ತಿತ್ತು. ಅದರಲ್ಲಿ “ಅಬ್ರಕಡಬ್ರ’ ಎಂದು ಬರೆಯಲಾಗಿರುತ್ತಿತ್ತು. ಮ್ಯಾಜಿಕ್ ಮಾಡುವಾಗ ಸಾಮಾನ್ಯವಾಗಿ “ಅಬ್ರಕಡಬ್ರ’ ಎಂಬ ಪದವನ್ನು ಯಕ್ಷಿಣಿಗಾರ ಉಚ್ಛರಿಸುವುದನ್ನು ನೀವು ಗಮನಿಸಿರಬಹುದು. ಅದರಲ್ಲೂ ಯಾವುದಾದರೂ ವಸ್ತುವನ್ನು ಮಾಯ ಮಾಡುವಾಗ ಮ್ಯಾಜಿಕ್ ಮಾಡುವಾತ ತಪ್ಪದೇ “ಅಬ್ರಕಡಬ್ರ’ ಎನ್ನುತ್ತಾನೆ. ಪ್ರಾಚೀನ ರೋಮ್‌ನಲ್ಲಿ, ಜನರು ಮಲೇರಿಯಾ ರೋಗವನ್ನು ಇಲ್ಲವಾಗಿಸಲು ಅಬ್ರಕಡಬ್ರ ಮಂತ್ರವನ್ನು ಬಳಸುತ್ತಿದ್ದರು ಎನ್ನುವ ಸಂಗತಿ ಸೋಜಿಗವೇ ಸರಿ!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
Toxic: ಯಶ್ ಬರ್ತ್ ಡೇಗೆ ʼಟಾಕ್ಸಿಕ್ʼನಿಂದ ಸಿಗಲಿದೆ ಬಿಗ್ ಅಪ್ಡೇಟ್; ಫ್ಯಾನ್ಸ್ ಥ್ರಿಲ್
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.