ಮಲೇಶಿಯಾದ ಮುಳುಗು ಮನುಷ್ಯರು
Team Udayavani, Jan 31, 2019, 12:30 AM IST
ಒಂದು ಮುತ್ತಿನ ಕಥೆ ಚಿತ್ರದಲ್ಲಿ ಒಂದು ದೃಶ್ಯವಿದೆ. ಡಾ. ರಾಜ್‌ಕುಮಾರ್ ಎಂಟು ತೋಳಿನ ದೈತ್ಯ ಆಕ್ಟೋಪಸ್ ಎದುರು ಕಾದಾಡುವ ದೃಶ್ಯವದು. ಈ ಚಿತ್ರೀಕರಣ ನಡೆಯುವ ಹೊತ್ತಿನಲ್ಲಿ ಡಾ. ರಾಜ್ ಯಾವುದೇ ಡೂಪ್ ಬಳಸದೇ, ಹಲವು ನಿಮಿಷಗಳ ಕಾಲ ಉಸಿರು ಹಿಡಿದು ನೀರಿನಡಿಯಲ್ಲಿದ್ದರಂತೆ. ಈ ರೀತಿ ದೀರ್ಘ ಕಾಲ ಉಸಿರು ಬಿಗಿಹಿಡಿಯಬಲ್ಲ ಸಾಮರ್ಥ್ಯವನ್ನು ಮನುಷ್ಯ ಪಡೆದುಕೊಂಡಿರುವುದು ವಿಸ್ಮಯವೇ ಸರಿ. ಸಮುದ್ರ ತಟದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಲ್ಲಿ ಈ ಸಾಮರ್ಥ್ಯ ಕಂಡುಬರುತ್ತದೆ.
ನಾವು ಎಷ್ಟು ಹೊತ್ತು ಉಸಿರಾಡದೇ ನೀರಿನಲ್ಲಿ ಮುಳುಗಬಲ್ಲೆವು? ಅಬ್ಬಬ್ಟಾ ಅಂದರೆ ಒಂದು ನಿಮಿಷ ಅಷ್ಟೇ. ಪ್ರಾಣಾಯಾಮದಂತಹ ಯೋಗಾಭ್ಯಾಸ ಮಾಡಿದ್ದರೆ ಕೆಲವು ನಿಮಿಷಗಳವರೆಗೆ ಉಸಿರು ಬಿಗಿ ಹಿಡಿಯಬಹುದು. ಅತಿ ಹೆಚ್ಚು ಹೊತ್ತು ನೀರಿನಡಿ ಮುಳುಗಬಲ್ಲ ಗುಣವನ್ನು ಅಲೆಮಾರಿ ಜನಾಂಗವೊಂದರ ಮಂದಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದಾರೆ. ಪಿಲಿಪ್ಪೀನ್ಸ್, ಇಂಡೋನೇಶಿಯಾ ಮತ್ತು ಮಲೇಶಿಯಾದಲ್ಲಿ ಕಂಡುಬರುವ “ಬಜಾವು’ ಮಂದಿ ಈ ವಿಶೇಷ ಗುಣವನ್ನು ಹೊಂದಿದ್ದು ವಿಶ್ವದಲ್ಲಿ ಎಲ್ಲರಿಗೆ ಅಚ್ಚರಿ ಉಂಟು ಮಾಡಿದ್ದಾರೆ. ಇವರು 200 ಅಡಿ ಆಳದವರೆಗೂ ನೀರಿನಲ್ಲಿ ಮುಳುಗಬಲ್ಲವರಾಗಿದ್ದು, 13 ನಿಮಿಷಗಳಷ್ಟು ಹೊತ್ತು ನೀರಿನಡಿ ಉಸಿರಾಡದೆ, ಮೀನುಗಳ ಬೇಟೆಯಾಡುತ್ತಾರೆ. ಅದರ ಜೊತೆಗೆ ಕಡಲಾಳದಲ್ಲಿ ಸಿಗುವ ಮುತ್ತು, ಚಿಪ್ಪುಗಳನ್ನು ಹೊರತೆಗೆಯುತ್ತಾರೆ.
ಇದು ಹೇಗೆ ಸಾಧ್ಯ?
ಈ ಕುರಿತು ಅಚ್ಚರಿಗೊಂಡ ವಿಜ್ಞಾನಿಗಳು, ಸಂಶೋಧಕರು ಬಜಾವು ಜನರನ್ನು ಅಧ್ಯಯನಕ್ಕೊಳಪಡಿಸಿದರು. ಆಗ ಅನೇಕ ಆಶ್ಚರ್ಯಕಾರಿ ಮಾಹಿತಿ ಸಿಕ್ಕಿದ್ದವು. ಸಾಮಾನ್ಯ ಜನರಿಗೆ ಹೋಲಿಸಿದರೆ ಬಜಾವು ಬುಡಕಟ್ಟಿನ ಮಂದಿ ಸುಮಾರು ಒಂದೂವರೆ ಪಟ್ಟು ದೊಡ್ಡದಾದ ತೊರಳೆ (spleen) ಹೊಂದಿದ್ದು, ಇದರಿಂದಾಗಿಯೇ ನೀರಿನಲ್ಲಿ ಹೆಚ್ಚು ಹೊತ್ತು ಮುಳುಗಬಲ್ಲವರಾಗಿದ್ದಾರೆ ಎಂಬುದು ಕೆಲ ಸಂಶೋಧನೆಗಳಿಂದ ತಿಳಿದುಬಂದಿದೆ. ಈ ತೊರಳೆಗಳ ಬಹುಮುಖ್ಯ ಕೆಲಸ, ಕೆಂಪು ನೆತ್ತರ ಕಣಗಳನ್ನು ಹುಟ್ಟುಹಾಕುವುದು ಮತ್ತು ಉಸಿರು ಕಟ್ಟದಂತೆ ತಡೆಯುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕವೇ ಬಜಾವು ಮನುಷ್ಯ ನೀರಿನ ಒಳಗೆ ಜಾಸ್ತಿ ಹೊತ್ತು ಉಸಿರಾಡದೇ ಇರಬಲ್ಲ ಎನ್ನುವುದು ಹಲವರ ವಾದ. ನೀರಿನಡಿ ಬದುಕುವ ಬಹುತೇಕ ಪ್ರಾಣಿಗಳು ಸಹ ದೊಡ್ಡ ಸ್ಪ್ಲೀನ್ ಹೊಂದಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.