ಪಕ್ಷಿಲೋಕದ ಮಿಮಿಕ್ರಿ ಕಲಾವಿದ

Team Udayavani, Aug 16, 2018, 11:54 AM IST

pakshiloka.jpg

ಇತರರ ಮಿಮಿಕ್ರಿಯನ್ನು ಕೇಳಲು ತುಂಬಾ ಮಜಭರಿತವಾಗಿರುತ್ತೆ. ಅದರಲ್ಲೂ ಕಲಾವಿದರು ಮತ್ತು ರಾಜಕಾರಣಗಳ ಮಿಮಿಕ್ರಿಯಾದರೆ ನಗು ಉಕ್ಕುತ್ತದೆ. ಮಿಮಿಕ್ರಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಮನುಷ್ಯರು ಮಾತ್ರವಲ್ಲ ಎಂದರೆ ಆಶ್ಚರ್ಯ ಆಗುತ್ತಲ್ವಾ? 

ಮನುಷ್ಯನ ಧ್ವನಿಯಿಂದ ಹಿಡಿದು ತನ್ನ ಸುತ್ತಮುತ್ತಲಿನ ಎಲ್ಲಾ ಪ್ರಾಣಿಪಕ್ಷಿಗಳ ಧ್ವನಿಯನ್ನೂ ಅನುಕರಿಸುವ ಹಕ್ಕಿಯೊಂದು ನಮ್ಮ ನಡುವೆ ಇದೆ. ಅದರ ಹೆಸರು “ಲೈರ್‌’. ಈ ಲೈರ್‌ ಆಸ್ಟ್ರೇಲಿಯಾ ಮೂಲದ್ದು, ಮಿಮಿಕ್ರಿ ಮಾಡುವುದಕ್ಕೇ ಈ ಪ್ರಸಿದ್ಧಿ ಪಡೆದಿದೆ. 

ಈ ಪಕ್ಷಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡುಬರುವ ಇತರ ಪ್ರಾಣಿ- ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ. ಆ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಯೆಂದರೆ, ಖುದ್ದು ಆ ಪ್ರಾಣಿ, ಪಕ್ಷಿಗಳೇ ಕೂಗಿದಂತಿರುತ್ತದೆ..! ಲೈರ್‌ ಹಕ್ಕಿಯು ಕೊಳಲಿನ ಧ್ವನಿಯನ್ನು ಹೊರಡಿಸಬಲ್ಲದು ಎಂಬ ಸಂಗತಿಯನ್ನು ಪಕ್ಷಿತಜ್ಞರು 1930ರಲ್ಲಿಯೇ ಗುರುತಿಸಿದ್ದರು.

ಲೈರ್‌ ಹಕ್ಕಿಗಳ ಬಾಲ ಪುರಾತನ ಗ್ರೀಕರ ತಂತಿವಾದ್ಯ “ಲಯರ್‌’ ಅನ್ನು ಹೋಲುವುದರಿಂದ ಇವುಗಳಿಗೆ “ಲೈರ್‌ ಹಕ್ಕಿ’ಗಳೆಂದು ಹೆಸರು ಬಂದಿದೆ. ಗಂಡು ಹಾಗೂ ಹೆಣ್ಣು ಲೈರ್‌ ಹಕ್ಕಿಗಳೆರಡರಲ್ಲಿಯೂ ಧ್ವನಿಯನ್ನು ಅನುಕರಿಸುವ ಸಾಮರ್ಥ್ಯದೆಯಾದರೂ, ಹೆಚ್ಚಾಗಿ ಕೇಳಿಬರುವ ಧ್ವನಿ ಗಂಡು ಲೈರ್‌ ಹಕ್ಕಿಯದು ಮಾತ್ರ. 

ಮಿಮಿಕ್ರಿ ಹೇಗೆ ಸಾಧ್ಯ?: ಈ ವಿಶಿಷ್ಟ ಸಾಮರ್ಥ್ಯವನ್ನು ಲೈರ್‌ ಹಕ್ಕಿಗಳು ಪಡೆದದ್ದಾದರೂ ಹೇಗೆ? ಈ ಪ್ರಶ್ನೆಗೆ ಪಕ್ಷಿತಜ್ಞರು ಉತ್ತರ ಕಂಡುಕೊಳ್ಳಲು ಸತತ ಪ್ರಯತ್ನ ನಡೆಸಿ ಕೊನೆಗೆ ಯಶಸ್ವಿಯೂ ಆದರು. ನಮಗೆ ಧ್ವನಿಪೆಟ್ಟಿಗೆ ಇರುವಂತೆಯೇ ಪಕ್ಷಿಗಳಲ್ಲಿಯೂ “ಸಿರಿಂಕ್ಸ್‌’ ಎಂಬ ತಂತುಗಳಿಂದ ರಚನೆಯಾದ ಭಾಗರುತ್ತದೆ.

ಸಿರಿಂಕ್ಸ್‌ ರಚನೆ ಹಾಗೂ ಅದು ಪಕ್ಷಿಗಳಲ್ಲಿ ಇರುವ ಸ್ಥಾನದಿಂದಾಗಿ ಪಕ್ಷಿಗಳು ಸುಮಧುರವಾದ ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ಆದರೆ ಲೈರ್‌ ಹಕ್ಕಿಗಳಲ್ಲಿ ಇರುವ ಸಿರಿಂಕ್ಸ್‌ ಅತೀ ಸಂಕೀರ್ಣವಾದ ಸ್ನಾಯುಗಳಿಂದ ಕೂಡಿದೆ. ಇದರಿಂದಲೇ ಅದಕ್ಕೆ ಇತರೆ ಪ್ರಾಣಿ-ಪಕ್ಷಿಗಳ ಧ್ವನಿಯನ್ನು ಲೀಲಾಜಾಲವಾಗಿ ಅನುಕರಿಸಲು ಸಾಧ್ಯವಾಗಿದೆ. ಕೆಲವೊಮ್ಮೆ ಲೈರ್‌ ಹಕ್ಕಿಯು ತನ್ನ ಮಿಮಿಕ್ರಿ ಕಲೆಯನ್ನು ಬಳಸಿ ಶತ್ರುಗಳಿಂದ ಪಾರಾಗುವುದೂ ಇದೆ. 

ಅಳುವನ್ನೂ ಅನುಕರಿಸುತ್ತೆ: ಲೈರ್‌ ಹಕ್ಕಿ ಬಟ್ಟೆಗಿರಣಿ ಹೊಮ್ಮಿಸುವ ಶಬ್ದ, ಕಾರ್‌ ಇಂಜಿನ್‌ ಶಬ್ದ, ಕಾರಿನ ಹಾರ್ನ್, ಪಿಸ್ತೂಲಿನಿಂದ ಗುಂಡು ಹೊಡೆದಾಗ ಬರುವ ಶಬ್ದ, ನಾಯಿ ಬೊಗಳುವ ಶಬ್ದ, ಅಷ್ಟೇ ಯಾಕೆ ಚಿಕ್ಕ ಮಕ್ಕಳ ಅಳುವನ್ನು ಅನುಕರಿಸುವುದರ ಮೂಲಕ ನಿಮ್ಮನ್ನೂ ದಂಗು ಬಡಿಸಬಲ್ಲದು. 

* ಪ.ನಾ.ಹಳ್ಳಿ ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.