ಸಮುದ್ರ ತಟದ ಏಲಿಯನ್ ಕಲ್ಲುಗಳು!
Team Udayavani, May 2, 2019, 11:30 AM IST
ಡೈನೋಸಾರ್ ಮೊಟ್ಟೆಯಂತೆ, ಅನ್ಯಲೋಕದಿಂದ ಬಂದು ಬಿದ್ದ ಅವಶೇಷಗಳಂತೆ ಕಾಣುವ ಇವು ವಾಸ್ತವದಲ್ಲಿ ಅವ್ಯಾವುವೂ ಅಲ್ಲ…
ನ್ಯೂ ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದ ಒಟಾಗೋ ಕರಾವಳಿಯಲ್ಲಿರುವ ಕೊಕೊಹೇ ಬೀಚಿನಲ್ಲಿ ದೊಡ್ಡ ದೊಡ್ಡ ಗೋಲಾಕಾರದ ಬಂಡೆಗಳಿವೆ. ಇವು ಅನಾದಿ ಕಾಲದಿಂದಲೂ ಸಂಶೋಧಕರ ಕುತೂಹಲವನ್ನು ಕೆರಳಿಸುತ್ತಿವೆ. ಈ ಬಂಡೆಗಳು ಅಸಂಖ್ಯ ಪ್ರವಾಸಿಗರನ್ನೂ ಆಕರ್ಷಿಸುತ್ತಿವೆ. ಪಕ್ಕನೆ ನೋಡಿದರೆ ಒಡೆದ ಡೈನೋಸಾರ್ ಮೊಟ್ಟೆಯಂತೆ ಕಾಣುವ ಇವು ವಿವಿಧ ಬಣ್ಣ, ಮತ್ತು ವಿನ್ಯಾಸಗಳನ್ನು ಹೊಂದಿವೆ. ಇವುಗಳ ಎದುರು ನಿಂತು ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಇಷ್ಟಪಡುತ್ತಾರೆ. ಈ ಬಂಡೆಗಳ ಸಮೂಹ “ಮೊರಾಕಿ ಬೌಲ್ದೆರ್ಸ್’ ಎಂದೇ ಪ್ರಖ್ಯಾತಿ ಪಡೆದಿದೆ. ಬೌಲ್ದೆರ್ಸ್ ಎಂದರೆ “ಬಂಡೆ’ ಎಂದರ್ಥ.
ರಚನೆ ಹೇಗಾಯ್ತು?
ಪ್ರಕೃತಿಯಲ್ಲಿ ದುಂಡಗಿರುವ ಬಂಡೆಗಳು ಸಾಮಾನ್ಯ. ಮೊರಾಕಿ ಬೌಲ್ದೆರ್ಸ್ ಬಂಡೆಗಳು ಬೃಹತ್ ಗಾತ್ರ ಮತ್ತು ವಿಭಿನ್ನವಾದ ಮೇಲ್ಮೈ ಹೊಂದಿವೆ. ಕೆಸರು, ಖನಿಜಗಳ ಸಮ್ಮಿಶ್ರಣದಿಂದ ರೂಪಿಸಲ್ಪಟ್ಟಿವೆ. ಕೆಸರಿನ ಪದರಗಳು ಒಂದರ ಜೊತೆಗೆ ಇನ್ನೊಂದು ಸೇರಿ, ಬೆರೆಯುತ್ತಾ ಬೆರೆಯುತ್ತಾ ಗಟ್ಟಿಗೊಂಡು, ಕಾಲ ಕ್ರಮೇಣ ದೊಡ್ಡ ಬಂಡೆಗಳಾಗಿವೆ. ಅವುಗಳಲಿ ಕೆಲವು ಕಡಲಕೊರೆತದಿಂದ ಟೊಳ್ಳಾಗಿವೆ. ಅದರ ಮೇಲಿನ ಗೀರು ಮತ್ತು ವಿನ್ಯಾಸಗಳಿಗೂ ಅದೇ ಕಾರಣ. ಇವುಗಳ ರಚನೆ ರೂಪುಗೊಂಡಿದ್ದು ಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಎಂದು ನಂಬಲಾಗಿದೆ.
ಗೋಲಾಕಾರ ಹೇಗಾಯ್ತು? ಇಂದಿಗೂ ವಿಜ್ಞಾನಿಗಳನ್ನು ಕುತೂಹಲಕ್ಕೆ ತಳ್ಳಿರುವ ಸಂಗತಿ ಎಂದರೆ, ಈ ಬಂಡೆಗಳು ಗೋಲಾಕಾರವನ್ನು ಹೇಗೆ ಪಡೆದವು ಎಂಬುದು. ಸಮುದ್ರದ ಅಲೆಗಳು, ಗುರುತ್ವಾಕರ್ಷಣೆ ಮತ್ತು ವಾತಾವರಣದ ಒತ್ತಡ ಕೂಡಾ ಇದಕ್ಕೆ ಕಾರಣವಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಅದಕ್ಕೆ ಪುರಾವೆಗಳಿನ್ನೂ ಸಿಕ್ಕಿಲ್ಲ.
— ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.