ಹಳೇ ಬೇರು ಹೊಸ ಉಗುರು


Team Udayavani, Jul 25, 2019, 5:00 AM IST

q-4

ಉಗುರು ಅಲಂಕಾರಕ್ಕಷ್ಟೇ ಅಲ್ಲ. ಪ್ರಕೃತಿ ಮನುಷ್ಯನಿಗೆ ಉಗುರುಗಳನ್ನು ದಯಪಾಲಿಸಿರುವುದರ ಹಿಂದೆ ಒಂದು ಉದ್ದೇಶವಿದೆ. ಅದರದ್ದೇ ಆದ ಮಿಲಿಯ ವರ್ಷಗಳ ವಿಕಾಸ ಪಥದಲ್ಲಿ ನಾವೆಲ್ಲರೂ ಬಲು ದೂರ ಸಾಗಿ ಬಂದಿದ್ದೇವೆ. ಅದರತ್ತ ಒಂದು ನೋಟ…

ಬೆರಳುಗಳ ಸೌಂದರ್ಯ ಹೆಚ್ಚಿಸುವಲ್ಲಿ ಉಗುರು ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಉಗುರುಗಳಿಗೆ ಆಕರ್ಷಕ ಬಣ್ಣಗಳನ್ನು ಹಚ್ಚಿಕೊಂಡು ತಮ್ಮ ಸೌಂದರ್ಯವನ್ನು ಉಗುರುಗಳಿಂದ ಮತ್ತಷ್ಟು ಮೆರುಗುಗೊಳಿಸಿಕೊಳ್ಳುತ್ತಾರೆ. ಆದರೆ ಉಗುರುಗಳ ಮಹತ್ವ ಕೇವಲ ಅಲಂಕಾರಕ್ಕೆ ಸೀಮಿತವಾಗುವುದಿಲ್ಲ. ಪ್ರಾಚೀನ ಕಾಲದ ಮಾನವ ಉಗುರುಗಳನ್ನು ಆಯುಧವಾಗಿ ಬಳಸಿಕೊಳ್ಳುತ್ತಿದ್ದ. ಅಷ್ಟು ಮಾತ್ರವಲ್ಲ, ಮರ ಏರಲು, ವಸ್ತುಗಳನ್ನು ಹಿಡಿದುಕೊಳ್ಳಲು ಉಗುರುಗಳು ಸಹಕರಿಸುತ್ತಿದ್ದವು. ಆ ಕಾಲಘಟ್ಟದಿಂದ ಮಾವನ ಬಹಳ ದೂರ ಸಾಗಿ ಬಂದಿದ್ದಾನೆ.

ಗರ್ಭದಲ್ಲಿ ಮಗುವಿನ ಬೆಳವಣಿಗೆ ಕಾಣಿಸಿಕೊಂಡ 20 ವಾರದಲ್ಲೇ ಸಣ್ಣ ಸಣ್ಣ ಉಗುರಿನ ಅಂಕೆಗಳು ಚಿಗುರುತ್ತವಂತೆ. ಮಗು ಹುಟ್ಟುವ ಹೊತ್ತಿಗೆ ಕೈ ಬೆರಳುಗಳು ಹಾಗೂ ಕಾಲ್ಬೆರಳುಗಳು ಸಂಪೂರ್ಣವಾಗಿ ರೂಪುಗೊಂಡು, ಉಗುರುಗಳ ಕಿರೀವನ್ನೇ ಹೊಂದಿರುತ್ತವೆ. ಒಮ್ಮೆ ಮೂಡಿದ ಉಗುರುಗಳು ಜೀವನ ಪರ್ಯಂತ ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದು ಅಚ್ಚರಿಯೇ ಸರಿ. ಏಕೆಂದರೆ, ದೇಹದ ಅನೇಕ ಭಾಗಗಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯನ್ನು ಸ್ಥಗಿತಗೊಳಿಸಿದರೆ, ಉಗುರು ಮಾತ್ರ ಕಡೆಯವರೆಗೂ ಬೆಳೆಯುತ್ತಲೇ ಇರುತ್ತದೆ. ಚಿವುಟಿದಷ್ಟೂ ಮತ್ತೆ ಮತ್ತೆ ಚಿಗುರುತ್ತಲಿರುತ್ತವೆ.

ಅವು ಏಕೆ ಬೆಳೆಯುತ್ತವೆ!?
ಉಗುರುಗಳು ಕೆರಾಟಿನ್‌ ಎಂಬ ವಸ್ತುವಿನಿಂದ ರೂಪಿಸಲ್ಪಟ್ಟಿದೆ. ಅದೇ ಕೆರಾಟಿನ್‌ನಿಂದ ನಮ್ಮ ಕೂದಲು ಕೂಡಾ ರೂಪಿಸಲ್ಪಟ್ಟಿದೆ. ಕೆರಾಟಿನ್‌ ಎನ್ನುವುದು ಜೀವರಹಿತವಾದ ವಸ್ತು ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಇವು ಶುರುವಿನಲ್ಲಿ ಜೀವವುಳ್ಳ ಕೋಶಗಳೇ ಆಗಿರುತ್ತವೆ. ಈ ಕೋಶಗಳೇ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಂಡು ಮುಂದೆ ಉಗುರುಗಳಾಗಿ ಮಾರ್ಪಾಡಾಗುತ್ತವೆ. ಇವುಗಳು ನರಮಂಡಲದೊಂದಿಗೆ ಸಂಪರ್ಕ ಹೊಂದಿರುತ್ತವೆ. ಅದರಿಂದಲೇ ಉಗುರು ತನ್ನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುವುದು. ಅಂದ ಹಾಗೆ ಉಗುರು ಬೆಳೆಯಲು ಬೇಕಾದ ಅಗತ್ಯ ಪೋಷಕಾಂಶ ಎಂದರೆ ಗ್ಲುಕೋಸ್‌. ದಿನಕ್ಕೆ 0.1 ಮಿಲಿಮೀಟರ್‌ನಷ್ಟು ಬೆಳೆವುದಂತೆ.

ಸತ್ತ ನಂತರವೂ ಉಗುರು ಬೆಳೆಯುತ್ತಾ?
ನಮ್ಮಲ್ಲಿ ಅದೊಂದು ನಂಬಿಕೆ ಇದೆ. ಸತ್ತ ನಂತರವೂ ಉಗುರು ಬೆಳೆಯುತ್ತದೆ ಎಂದು. ಆದರೆ, ಅದು ಸುಳ್ಳು ಎಂದು ಸಂಶೋಧಕರು ದೃಢಪಡಿಸಿದ್ದಾರೆ. ಭೂಮಿಯಲ್ಲಿ ಹೂತು ಹಾಕಿದ್ದ ದೇಹದ ಉಗುರುಗಳು ನೀಳವಾಗಿರುವಂತೆ ಕಂಡದ್ದರಿಂದಲೇ ಉಗುರು ಬೆಳೆಯುತ್ತೆ ಎಂಬ ಪುಕಾರು ಹರಡಿತ್ತು. ಆದರೆ ವಸ್ತುಸ್ಥಿತಿಯೇ ಬೇರೆ. ಮೃತ ದೇಹ ದಿನ ಕಳೆದಂತೆ ಕೃಶವಾಗುತ್ತಾ, ಚಪ್ಪಟೆಯಾಗುತ್ತಾ ಹೋಗುತ್ತದೆ. ಆಗ ಚರ್ಮದ ಅಡಿ ಸೇರಿ ಹೋಗಿದ್ದ ಉಗುರಿನ ಭಾಗ ಹೊರಗೆ ಕಾಣಲು ಶುರುವಾಗುತ್ತದೆ. ಇದರಿಂದಾಗಿ ಉಗುರು ಬೆಳೆಯುತ್ತಿರುವಂತೆ ತೋರುತ್ತದೆ. ಅಲ್ಲದೆ ಅದರ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸತ್ತ ನಂತರ ಸಿಗದಿರುವುದರಿಂದ ಉಗುರು ಬೆಳೆಯಲು ಸಾಧ್ಯವೇ ಇಲ್ಲ ಎಂದು ತಜ್ಞರು ಖಡಾಖಂಡಿತವಾಗಿ ಹೇಳುತ್ತಾರೆ.

– ಯೋಗೇಶ್‌ ಎಂ. ಜಿ.

ಟಾಪ್ ನ್ಯೂಸ್

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.