ಕೆಳಕ್ಕೆ ಬೀಳದ ನೋಟು!
Team Udayavani, Nov 8, 2018, 7:00 AM IST
ಹಗ್ಗದ ಮೇಲೆ ನಡೆಯಲೂ, ಯಾವುದೇ ವಸ್ತು ಕೈಯಿಂದ ಜಾರಿ ಬೀಳದಂತೆ ತಡೆಯಲು ಬೇಕಾಗುವುದು ಬ್ಯಾಲೆನ್ಸ್. ಬ್ಯಾಲೆನ್ಸ್‌ಅನ್ನು ಕರಗತ ಮಾಡಿಕೊಳ್ಳಲು ಅಭ್ಯಾಸ ಮತ್ತು ತಂತ್ರ ಗೊತ್ತಿರಬೇಕು. ಅವೆರಡನ್ನೂ ಒಳಗೊಂಡ ಮ್ಯಾಜಿಕ್ ಇಲ್ಲಿದೆ. ಹಣದ ನೋಟನ್ನು ಕೈ ಮೇಲೆ ಬ್ಯಾಲೆನ್ಸ್ ಮಾಡುವ ಮ್ಯಾಜಿಕ್ ಇದು.
ಪ್ರದರ್ಶನ –
ನೋಟನ್ನು ಉದ್ದವಾಗಿ ಮೂರು ಮಡಿಕೆ ಮಡಚಿ, ಅದರ ಒಂದು ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ಇಟ್ಟು ನಿಲ್ಲಿಸಲು ಅಸಾಧ್ಯ. ಆದರೆ ಏನಾಶ್ಚರ್ಯ! ನೋಡು ನೋಡುತಿದ್ದಂತೆಯೇ ನೋಟು ಬೆರಳ ಮೇಲೆ ಸಲೀಸಾಗಿ ತನ್ನ ಸಮತೋಲನವನ್ನು ಕಾಯ್ದು ಕೊಂಡಿದೆ!!
ಬೇಕಾಗುವ ಪರಿಕರಗಳು
1. ಒಂದು ನೋಟು
2. ಒಂದು ನಾಣ್ಯ
ಮಾಡುವ ವಿಧಾನ –
ನೋಟೊಂದನ್ನು ಉದ್ದದ್ದವಾಗಿ ಚಿತ್ರದಲ್ಲಿ ತೋರಿಸಿರುವಂತೆ ಮಡಚಿ. ನೀವು ಯಾವ ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ನಿಲ್ಲಿಸಲಿದ್ದೀರೋ ಆ ತುದಿಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದು ನಾಣ್ಯವನ್ನು ಸೇರಿಸಿ. ಈಗ ಸಲೀಸಾಗಿ ನಿಮ್ಮ ನೋಟು ಅÇÉಾಡದೆ ಬೆರಳ ಮೇಲೆ ನಿಲ್ಲುತ್ತದೆ. ಒಳಗಡೆ ಇರುವ ನಾಣ್ಯ ಮಾತ್ರ ಇರೋದು ಯಾರಿಗೂ ಗೊತ್ತಾಗಬಾರದು. ಎಷ್ಟು ಸುಲಭ ಅಲ್ಲವೇ? ಎಲ್ರೂ ಮಾಡಿ ನೋಡ್ತೀರಾ!
ಮ್ಯಾಜಿಕ್ ಟ್ರಿಕ್‌ಗೆ ವಿಡಿಯೋ ಕೊಂಡಿ – goo.gl/8GRzWf
( ನಿರೂಪಣೆ: ಗಾಯತ್ರಿ ಯತಿರಾಜ್ )
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.