ಕಣ್‌ ತೆರೆದು ನೋಡಿ


Team Udayavani, Mar 7, 2019, 12:30 AM IST

s-3.jpg

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

ಭಗ್ನಪ್ರೇಮಿ ಸೀಗಡಿ ತಲೆ ಕೆರೆದುಕೊಳ್ಳುವುದೇಕೆ?
ಹೃದಯ ಮತ್ತು ತಲೆ ಎರಡಕ್ಕೂ ನಾವು ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ. ಇದು ಇಂದು ನೆನ್ನೆಯಿಂದಲ್ಲ, ಪುರಾಣ ಕಾಲದಿಂದಲೂ ಇದು ಮುಂದುವರಿದಿದೆ. ಹೃದಯಕ್ಕೆ ಅಂತಃಕರಣದ ಲೇಬಲ್‌ಅನ್ನು ಹಚ್ಚಿಬಿಟ್ಟಿದ್ದೇವೆ. ತಲೆಗೆ ಬುದ್ಧಿವಂತಿಕೆಯ ಲೇಬಲ್‌ ಹಚ್ಚಿಬಿಟ್ಟಿದ್ದೇವೆ. ಇದೇ ಕಾರಣಕ್ಕೆ ಶಾಲೆಗಳಲ್ಲಿ ಟೀಚರ್‌ ಬೈಯುವಾಗ “ಲೆಕ್ಕ ಮಾಡೋವಾಗ ತಲೆ ಎಲ್ಲಿ ಬಿಟ್ಟಿದ್ದೆ?’ ಅನ್ನೋದು. ಮನುಷ್ಯನ ಸಮಸ್ಯೆಗಳ ಮೂಲ ಇರೋದೇ ಅಲ್ಲಿ. ತಲೆ ಓಡಿಸುವ ಸಮಯದಲ್ಲಿ ಹೃದಯದಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದೇ ನಮ್ಮ ಬಹುತೇಕ ಸಮಸ್ಯೆಗಳಿಗೆ ಕಾರಣ. ಇದನ್ನು ಪದಗಳಲ್ಲಿ ವಿವರಿಸುವುದು ಸ್ವಲ್ಪ ಕಷ್ಟವೆ. ಅನುಭವ ಮಾತ್ರದಿಂದ ತಿಳಿದುಕೊಳ್ಳಬಹುದಷ್ಟೆ. ಅಂದಹಾಗೆ ತಲೆ ಮತ್ತು ಹೃದಯಗಳ ವಿಚಾರ ಬಂದಿದ್ದರ ಹಿಂದೆ ಒಂದು ಕಾರಣವಿದೆ. ಸಮುದ್ರದಲ್ಲಿ ವಾಸಿಸುವ ಸೀಗಡಿ ಗೊತ್ತಲ್ಲ. ಒಂದು ವೇಳೆ ಅವು ಭಗ್ನಪ್ರೇಮಿಗಳಾದರೆ ಹೃದಯವನ್ನು ಪರ ಪರ ಕೆರೆದುಕೊಳ್ಳುವುದಿಲ್ಲ, ತಲೆಯನ್ನು ಪರ ಪರ ಕೆರೆದುಕೊಳ್ಳುತ್ತದೆ. ಏಕೆಂದರೆ ಸೀಗಡಿಗಳ ಹೃದಯ ಅದರ ತಲೆಯಲ್ಲಿದೆ. ಹೀಗಾಗಿ ಸೀಗಡಿ ಯಾವತ್ತಾದರೂ ಪ್ರೀತಿಯಲ್ಲಿ ಬಿದ್ದರೆ, ತನ್ನ ಪ್ರೀತಿಯ ಆಳವನ್ನು ತೋರಿಸಲು ಹೃದಯ ಬಿಚ್ಚಿ ತೋರಿಸಬೇಕಿಲ್ಲ. ತಲೆ ತೋರಿಸಿದರೆ ಸಾಕಾಗುತ್ತದೆ. ಅಲ್ಲದೆ ತಲೆ ಮತ್ತು ಹೃದಯ ಎರಡೂ ಅಕ್ಕಪಕ್ಕದಲ್ಲೇ ಇರುವುದರಿಂದ ಅವೆರಡರ ನಡುವಿನ ಸಂವಹನವೂ ಸುಲಭವಾಗುವುದೇನೋ, ಆಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಬಹುದೇನೋ ಎಂಬುದು ನಮ್ಮ ಊಹೆಯಷ್ಟೆ. 

ಹಸು ಎಷ್ಟು ಗ್ಲಾಸ್‌ ಹಾಲು ಕೊಡುತ್ತೆ?
ದಿನಕ್ಕೆ ನೀವೆಷ್ಟು ಗ್ಲಾಸು ಹಾಲು ಕುಡಿಯುತ್ತೀರಿ? ಒಂದೆರಡು ಗ್ಲಾಸುಗಳಷ್ಟೆ ಅಲ್ಲವೇ? ಹಾಲು ಹಸುವಿನಿಂದ ಸಿಗುತ್ತದೆ ಎನ್ನುವ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಾದರೆ  ಹಾಲು ಪ್ಯಾಕೆಟ್‌ನಿಂದ ಸಿಗುತ್ತದೆ ಎಂದು ಉತ್ತರಿಸಬಹುದೇನೋ. ಅದರಲ್ಲಿ ಅವರದೇನೂ ತಪ್ಪಿಲ್ಲ ಬಿಡಿ. ದಿನಬೆಳಗಾದರೆ ಮನೆ ಮುಂದೆಯೇ ಹಾಲು ಕರೆಯುವುದನ್ನು ನೋಡುವ ಗ್ರಾಮೀಣ ಮಕ್ಕಳ ಸೌಭಾಗ್ಯ ಅವರಿಗಿರುವುದಿಲ್ಲವಲ್ಲ. ಇರಲಿ, ಹೋಟೆಲ್‌ ಅಥವಾ ಮನೆಯಲ್ಲಾದರೆ ನೀವೆಷ್ಟು ಗ್ಲಾಸ್‌ ಹಾಲು ಕೇಳುತ್ತೀರೋ ಅಷ್ಟು ಗ್ಲಾಸ್‌ ಹಾಲನ್ನು ತಂದು ನಿಮ್ಮ ಮುಂದಿಡುತ್ತಾರೆ. ಹಸು ತನ್ನ ಜೀವಮಾನದಲ್ಲಿ ಎಷ್ಟು ಗ್ಲಾಸ್‌ ಹಾಲನ್ನು ನೀಡುತ್ತದೆ ಎಂದು ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸುಮಾರು 2 ಲಕ್ಷ ಗ್ಲಾಸ್‌ಗಳು!

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.