ಟೆನ್ ಟೆನ್ ಟೆನ್
ಹತ್ತು ಪಾಯಿಂಟ್ ಗಳಲ್ಲಿ ವ್ಯಕ್ತಿ ಪರಿಚಯ
Team Udayavani, Jun 13, 2019, 5:00 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1. ವಿಶ್ವವಿಖ್ಯಾತ ಚಿತ್ರಕಲಾವಿದ ವ್ಯಾನ್ ಗೋ ಚಿತ್ರಕಲೆಯನ್ನು ಅಭ್ಯಾಸ ಶುರುಮಾಡಿದ್ದು ತನ್ನ 27ನೇ ವಯಸ್ಸಿನಲ್ಲಿ!
2. ವ್ಯಾನ್ ಗೋ ತನ್ನ ಜೀವಿತಾವಧಿಯಲ್ಲಿ ಅಣ್ಣಂದಿರಿಗೆ, ಸ್ನೇಹಿತರಿಗೆ ಸುಮಾರು 800 ಪತ್ರಗಳನ್ನು ಬರೆದ. ಆತನ ಜೀವನವನ್ನು ತಿಳಿಯುವುದಕ್ಕೆ ಇಂದು ಇವುಗಳೇ ಆಧಾರವಾಗಿದೆ.
3. ಆತ ಡಚ್ ಚಿತ್ರಕಲಾವಿದರಿಂದ ಸ್ಫೂರ್ತಿಯನ್ನು ಪಡೆಯುತ್ತಿದ್ದ.
4. ವ್ಯಾನ್ ಗೋ ಯಾರ ಬಳಿಯೂ ಚಿತ್ರಕಲೆಯನ್ನು ಅಭ್ಯಾಸ ಮಾಡಲಿಲ್ಲ. ತನ್ನಷ್ಟಕ್ಕೆ ತಾನೇ ಕಲಿತ. ಆತ ಶಾಸ್ತ್ರೀಯ ಚಿತ್ರಕಲೆಯನ್ನು ಅಬ್ಯಾಸ ಮಾಡಿದ್ದು ತಾನು ಸಾಯುವ ಕೆಲ ವರ್ಷಗಳ ಹಿಂದಷ್ಟೆ.
5. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗುತ್ತದೆ. ಪೇಯಿಂಟ್ ಹಚ್ಚುತ್ತಿದ್ದ ಬಣ್ಣಗಳನ್ನೇ ತಿಂದುಬಿಡುತ್ತಿದ್ದ ಎನ್ನುವ ಸಂಗತಿಯೂ ದಾಖಲಾಗಿದೆ.
6. ಆತ ಸ್ನೇಹಿತನೊಡನೆ ವಾಗ್ವಾದಕ್ಕೆ ಬಿದ್ದು, ತೀವ್ರ ಸ್ವರೂಪಕ್ಕೆ ಹೋದಾಗ ಆತ ತನ್ನ ಕಿವಿಯನ್ನು ತಾನೇ ಕತ್ತರಿಸಿಕೊಂಡಿದ್ದ.
7. ತಾನು ವಾಸಿಸುತ್ತಿದ್ದ ಪಟ್ಟಣದ ಜನರು ವ್ಯಾನ್ ಗೋನಿಂದ ನಾಗರಿಕರಿಗೆ ಅಪಾಯವಿದೆ ಎಂದು ಒತ್ತಡ ಹೇರಿದಾಗ ಆತನನ್ನು ಕೆಲ ಸಮಯ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಇರಿಸಿದ್ದರು.
8. ಆತ ಬದುಕಿದ್ದಾಗ ಆತನ ಚಿತ್ರಗಳಿಗೆ ಬೆಲೆಯೇ ಇರಲಿಲ್ಲ. ಆತನ ಬಹಳಷ್ಟು ಕಲಾಚಿತ್ರಗಳನ್ನು ನಾನೇ ಕಸದಬುಟ್ಟಿಗೆ ಎಸೆದಿದ್ದೇನೆ ಎಂದು ಆತನ ತಾಯಿಯೇ ಒಮ್ಮೆ ಹೇಳಿದ್ದರು.
9. ಆತ ರಚಿಸಿದ “ಪೋರ್ಟ್‌ರೈಟ್ ಆಫ್ ಡಾ. ಗಾಶೆಟ್’ ಚಿತ್ರ 1990ರಲ್ಲಿ 8 ಕೋಟಿ ರು.ಗಳಿಗೆ ಹರಾಜಾಗಿತ್ತು!
10. ಪೋರ್ಟ್‌ರೈಟ್ ಚಿತ್ರ ರಚಿಸಲು ರೂಪದರ್ಶಿಗಳನ್ನು ನೇಮಿಸಲು ಆತನ ಬಳಿ ಹಣವಿರಲಿಲ್ಲ. ಹೀಗಾಗಿ ಆತನ ಎಷ್ಟೋ ಪೋರ್ಟ್‌ರೈಟ್ ಚಿತ್ರಗಳಿಗೆ ಆತನೇ ರೂಪದರ್ಶಿ.
ಸಂಗ್ರಹ : ಪ್ರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.