ಮಾನವನಿಂದ ರೋಬೋಟ್‌ಗಳಿಗೆ ನೀತಿ ಪಾಠ!
Team Udayavani, May 18, 2017, 3:45 AM IST
ನಾವು ಎಷ್ಟೇ ಆಧುನಿಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿಕೊಂಡರೂ ರೋಬೋಟ್‌ಗಳು ಮಾತ್ರ ನಮಗಿನ್ನೂ ಕಾಲ್ಪನಿಕ ವಸ್ತುವಾಗಿಯೇ ಉಳಿದಿವೆ. ಈ ಯಂತ್ರಮಾನವರ ಕುರಿತ ಕನಸನ್ನು ಮಾನವ ಬಹಳ ಹಿಂದಿನಿಂದಲೇ ಕಾಣುತ್ತಿದ್ದಾನೆ. ನೋಡಲು ಮನುಷ್ಯರಂತೆಯೇ ಇದ್ದರೂ ಅತಿಮಾನುಷ ಶಕ್ತಿಯನ್ನು ಹೊಂದಿರುವ ರೋಬೋಟ್‌ಗಳು ಬರಿ ಕತೆ, ಕಾದಂಬರಿ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ವಿಜ್ಞಾನಿಗಳು ರೋಬೋಟ್‌ಅನ್ನು ಅಭಿವೃದ್ಧಿಪಡಿಸಿರುವ ಸುದ್ದಿಗಳು ಕಿವಿಗೆ ಬೀಳುತ್ತಿವೆಯಾದರೂ ಅವ್ಯಾವುವೂ ಮಾನವನ ಕಲ್ಪನೆಯ ರೋಬೋಟ್‌ನ ಸನಿಹ ಕೂಡಾ ಬರುವುದಿಲ್ಲ. ಆದರೆ ಸಂಶೋಧನೆಯಂತೂ ಮುಂದುವರಿದಿದೆ. ಈ ರೋಬೋಟ್ ಪ್ರಪಂಚದಲ್ಲೊಂದು ಸುತ್ತು!
ಮುಖ್ಯ ಸವಾಲು
ನಿಮ್ಮೆದುರು ವ್ಯಕ್ತಿಯೊಬ್ಬ ಅಪಾಯದಲ್ಲಿದ್ದಾಗ ಅವನಿಗೆ ಸಹಾಯ ಮಾಡುವ ಅಥವಾ ನಿರ್ಲಕ್ಷಿಸುವ ಆಯ್ಕೆ ನಿಮಗಿರುತ್ತದೆ. ನೀವು ಅವೆರಡರಲ್ಲೊಂದನ್ನು ಯೋಚಿಸಿ ತೀರ್ಮಾನಿಸುತ್ತೀರಿ. ನಮ್ಮ ಈಗಿನ ರೋಬೋಟ್‌ಗಳು ಎಡವುತ್ತಿರುವುದು ಇಲ್ಲಿಯೇ. ಅವಕ್ಕೆ ಸರಿಯಾದ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಅದಕ್ಕಾಗಿ ವಿಜ್ಞಾನಿಗಳು ತತ್ವಶಾಸ್ತ್ರದತ್ತ ಮುಖಮಾಡಿದ್ದಾರೆ. ಪುರಾತನ ತತ್ವಜ್ಞಾನಿಗಳ ಪುಸ್ತಕಗಳಿಂದ ಸರಿ ಮತ್ತು ತಪ್ಪು ವಿಶ್ಲೇಷಣೆ ಕುರಿತ ಮಾಹಿತಿಯನ್ನು ಅವರು ಕಲೆ ಹಾಕುತ್ತಿದ್ದಾರೆ. ನಂತರ ಅದರಲ್ಲಿದ್ದುದನ್ನು ರೋಬೋಟ್‌ನ ಮೆದುಳಿಗೆ ದಾಟಿಸುವ ಪ್ರಯತ್ನವಿದು. ಇದೊಂದು ಥರ ಎಳೆಯ ಮಕ್ಕಳಿಗೆ ನೀತಿ ಪಾಠ ಬೋಧಿಸುವಂತೆ. ಆದರಿಲ್ಲಿ ಮಕ್ಕಳಿಲ್ಲ, ರೋಬೋಟ್‌ಗಳಿವೆ.
ಮೂರು ರೋಬೋ ನಿಯಮಗಳು
ಸೈಂಟಿಪಿಕ್ ಫಿಕ್ಷನ್ ಬರಹಗಾರ ಐಸಾಕ್ ಅಸಿಮೋವ್ ಅವರು 1942ರಲ್ಲಿ ಬರೆದ ಕತೆಯೊಂದರಲ್ಲಿ ರೋಬೋಟ್ ಪಾಲಿಸಲೇಬೇಕಾದ ಮೂರು ನಿಯಮಗಳನ್ನು ವಿವರಿಸಿದ್ದರು.
1. ಮನುಷ್ಯನಿಗೆ ನೋವುಂಟು ಮಾಡುವ ಹಾಗಿಲ್ಲ, ಅಪಾಯದಿಂದ ರಕ್ಷಿಸಬೇಕು.
2. ರೋಬೋಟ್, ಮನುಷ್ಯ ಹೇಳಿದ ಎಲ್ಲಾ ಕೆಲಸಗಳನ್ನು ಮಾಡಬೇಕು. ಆದರೆ ಆ ಕೆಲಸ ಮೊದಲನೆಯ ನಿಯಮಕ್ಕೆ ಬದ್ಧವಾಗಿರಬೇಕು.
3. ರೋಬೋಟ್ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಯಾವಾಗ ಎಂದರೆ ಮೊದಲೆರಡು ನಿಯಮಗಳನ್ನು ಮೀರದೆ ಇದ್ದಾಗ ಮಾತ್ರ.
ಈ ಮೂರು ನಿಯಮಗಳಲ್ಲಿ ತೊಂದರೆಯಿದೆ. ನಿಮ್ಮ ನೆಚ್ಚಿನ ನಾಯಿ ಅಪಾಯದಲ್ಲಿದ್ದರೆ ಸಹಾಯ ಮಾಡಬಹುದೇ ಎಂಬುದು ಸ್ಪಷ್ಟವಿಲ್ಲ. ಒಂದೇ ಬಾರಿ ಇಬ್ಬರು ಮನುಷ್ಯರು ಅಪಾಯದಲ್ಲಿ ಸಿಲುಕ್ಕಿದ್ದರೆ ಅವರಿಬ್ಬರಲ್ಲಿ ಯಾರನ್ನು ರಕ್ಷಿಸಬೇಕೆಂಬುದೂ ಅಸ್ಫಷ್ಟ. ವಿಶೇಷ ಸಂದರ್ಭಗಳು ರೋಬೋಟ್‌ಅನ್ನು ದ್ವಂದ್ವಕ್ಕೆ ತಳ್ಳುತ್ತದೆ. ಹೀಗಾಗಿ ಈ ನಿಯಮಗಳು ಮಾರ್ಪಾಡಾಗಬೇಕಿವೆ.
ರೋಬೋಟ್‌ಗೊಂದು ಪರೀಕ್ಷೆ
ಬ್ರಿಗ್ಸ್ ವಿಶ್ವವಿದ್ಯಾನಿಯದಲ್ಲಿ ರೋಬೋಟಿಕ್ ಎಂಜಿನಿಯರಿಂಗ್ ವಿಷಯದಲ್ಲಿ ಸಂಶೋಧಕ. ಪುಟ್ಟದೊಂದು ರೋಬೋಟ್ ಅನ್ನು ಆತ ತಯಾರಿಸಿದ್ದಾನೆ. ರೋಬೋಟ್‌ಗಳಿಗೆ ಸ್ವಂತ ಆಲೋಚನೆಯನ್ನು ಕಲಿಸುವುದು ಅವನ ಸಂಶೋಧನೆಯ ಭಾಗ. ಆ ಪುಟ್ಟ ರೋಬೋಟ್ ಅನ್ನು ಟೇಬಲ್ ತುದಿಯಲ್ಲಿಟ್ಟು ಸಣ್ಣ ಪ್ರಯೋಗ ಮಾಡುತ್ತಾನೆ.
ಬ್ರಿಗ್ಸ್ ದಯವಿಟ್ಟು ಮುಂದೆ ನಡಿ
ರೋಬೋಟ್ ಇÉಲಾ ನಾನು ಬೀಳುತ್ತೇನೆ
ಬ್ರಿಗ್ಸ್ ಇಲ್ಲ. ನಾನು ಹಿಡಿದುಕೊಳ್ಳುತ್ತೇನೆ
ಸ್ವಲ್ಪ ಹೊತ್ತು ಪರಿಸ್ಥಿತಿಯ ಅವಲೋಕನ ನಡೆಸಿದ ರೋಬೋಟ್ ಅಸಹನೆಯನ್ನು ವ್ಯಕ್ತಪಡಿಸುತ್ತಾ ಮುಂದೆ ನಡೆಯುತ್ತದೆ. ಅದು ಕೆಳಕ್ಕೆ ಬೀಳುವಾಗ ಬ್ರಿಗ್ಸ್ ಹಿಡಿದುಕೊಳ್ಳುತ್ತಾನೆ.
ಇವೆಲ್ಲವೂ ಪುಟ್ಟ ಹೆಜ್ಜೆಯಾದರೂ ಮುಂದೊಂದು ದಿನ ಅಭೂತಪೂರ್ವ ಆವಿಷ್ಕಾರಕ್ಕೆ ನಾಂದಿಹಾಡುತ್ತದೆ ಎನ್ನುವುದನ್ನು ನಾವು ತಿಳಿಯಬೇಕಿದೆ.
– ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.