ಪಿನ್‌ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?
Team Udayavani, Aug 31, 2017, 6:20 AM IST
ಪುಟಾಣಿಗಳೇ, ನಿಮಗೂ ಗೊತ್ತಿರುತ್ತೆ. ಪತ್ರ ಬರೆದಾಗ ವಿಳಾಸದ ನಂತರ ಪಿನ್‌ಕೋಡ್ ಸಂಖ್ಯೆಯನ್ನೂ ಬರೆಯಬೇಕು. ಬೆಂಗಳೂರಿನ ಪಿನ್‌ಕೋಡ್ 56…ರಿಂದ ಶುರುವಾದರೆ, ಉಳಿದ ಜಿಲ್ಲೆಗಳ ಪಿನ್‌ಕೋಡ್ 57…ರಿಂದಲೂ, ವಿಜಯಪುರ, ಬೀದರ್ ಮುಂತಾದ ಜಿಲ್ಲೆಗಳ ಪಿನ್‌ಕೋಡ್ 58…ರಿಂದಲೂ ಶುರುವಾಗುತ್ತದೆ. 6 ಅಂಕಿಗಳ ಪಿನ್‌ಕೋಡ್ ಬರೆದರೆ ನಮ್ಮ ಪತ್ರ ಬೇಗ ವಾರಸುದಾರರಿಗೆ ತಲುಪುತ್ತದೆ. ಈಗ ನಿಮಗೆ ಪಿನ್‌ಕೋಡ್ ಅಂದರೇನು? ಅದು ಜಾರಿಗೆ ಬಂದದ್ದು ಯಾವಾಗ ಎಂಬಿತ್ಯಾದಿ ಕುತೂಹಲ ಮೂಡಿರಬೇಕಲ್ಲವೆ? ಅದಕ್ಕೆ ಇಲ್ಲಿ ಉತ್ತರವಿದೆ.
ಪಿನ್ ಕೋಡ್ ಎಂಬುದು ಇಂಗ್ಲಿಷ್‌ನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪ. ಅದು ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಇಲಾಖೆ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆಯನ್ನು 15 ಆಗಸ್ಟ್ 1972ರಂದು ಜಾರಿಗೆ ತರಲಾಯಿತು. ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ವ್ಯವಸ್ಥೆಯಿದು.
ಪಿನ್ ಕೋಡ್, ಒಟ್ಟು ಆರು ಅಂಕಿಗಳ ಸಂಖ್ಯೆ. ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್‌ನ ಮೊದಲ ಅಂಕಿಯು ವಲಯವನ್ನೂ , ಎರಡನೇ ಅಂಕಿಯ ಉಪವಲಯವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸುತ್ತವೆ. ಪಿನ್ ಕೋಡಿನ ಕೊನೆಯ ಮೂರು ಅಂಕಿಗಳು ಅಂಚೆ ವಿತರಿಸುವ ಅಂಚೆ ಕಚೇರಿ ಯಾವುದೆಂದು ತಿಳಿಯಲು ಸಹಾಯ ಮಾಡುತ್ತವೆ.
ದೇಶದಲ್ಲಿನ 9 ಪಿನ್‌ಕೋಡ್ ವಲಯಗಳು ಈ ಕೆಳಗಿನಂತಿವೆ:
1 – ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ , ಚಂಡೀಘಢ
2 – ಉತ್ತರ ಪ್ರದೇಶ, ಉತ್ತರಾಖಂಡ್
3 – ರಾಜಸ್ಥಾನ, ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ
4 – ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತೀಸ್‌ಗಡ
5 – ಆಂಧ್ರ ಪ್ರದೇಶ, ಕರ್ನಾಟಕ
6 – ತಮಿಳುನಾಡು, ಕೇರಳ, ಪುದುಚೆರಿ, ಲಕ್ಷದ್ವೀಪ
7 – ಒರಿಸ್ಸಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ
8 – ಬಿಹಾರ, ಜಾರ್ಖಂಡ್
9 – ಆರ್ಮಿ ಪೋಸ್ಟ್ ಆಫೀಸ್ (APO) ಮತ್ತು ಫೀಲ್ಡ… ಪೋಸ್ಟ್ ಆಫೀಸ್ (FPO)
-ಮನೋಹರ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.