ಪುಂಡ ಮತ್ತು ಸಾಧು!
Team Udayavani, Dec 21, 2017, 10:18 AM IST
ಒಮ್ಮೆ ಪುಂಡನೊಬ್ಬ ಕೋಲನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ. ಯಾರಿಗಾದರೂ ತೊಂದರೆ ಕೊಡುವುದೆಂದರೆ ಅವನಿಗೆ ತುಂಬಾ ಇಷ್ಟ. ಕೈಯಲ್ಲಿ ಹಿಡಿದ ಕೋಲನ್ನು ಯಾರ ಮೇಲಾದರೂ ಪ್ರಯೋಗಿಸಬೇಕೆಂಬ ಕೆಟ್ಟ ಆಸೆ ಅವನ ಮನಸ್ಸಿನಲ್ಲಿ ಮೂಡಿತು. ಅದೇ ಸಮಯಕ್ಕೆ ವಯಸ್ಸಾಗಿದ್ದ ಸಾಧು ಒಬ್ಬರು ರಸ್ತೆಯಲ್ಲಿ ನಿಧಾನವಾಗಿ ನಡೆದುಹೋಗುತ್ತಿದ್ದರು. ಪುಂಡ ಕೋಲನ್ನು ಅವರ ಬೆನ್ನಿಗೆ ಜೋರಾಗಿ ತಾಗುವಂತೆ ಎಸೆದ. ಎಸೆದವನು ತನಗೂ ಕೋಲಿಗೂ ಸಂಬಂಧವೇ ಇಲ್ಲದವನಂತೆ ಮುಸಿ ಮುಸಿ ನಗುತ್ತಾ ಸಾಧುವಿನ ಮುಂದೆಯೇ ನಡೆದುಹೋದ.
ಸಾಧು “ಅಯ್ನಾ, ನಿಮ್ಮ ಕೋಲನ್ನು ಬಿಟ್ಟು ಹೋಗುತ್ತಿದ್ದೀರಿ. ತೆಗೆದುಕೊಳ್ಳಿ’ ಎಂದು ಕೋಲು ಕೊಡಲು ಮುಂದಾದರು. ಪಕ್ಕದಲ್ಲೇ ಇದ್ದ ಒಬ್ಬ ವ್ಯಕ್ತಿ “ಸ್ವಾಮಿ, ಆ ಕೋಲನ್ನು ಎಸೆದವನು ಆತನೇ. ಅವನನ್ನು ಬೈಯುವುದು ಬಿಟ್ಟು ಕೋಲು ಕೊಡಲು ಹೋಗುತ್ತಿದ್ದೀರಲ್ಲಾ…’ ಎಂದು ಆಶ್ಚರ್ಯದಿಂದ ಕೇಳಿದ. “ಒಂದು ವೇಳೆ ನಾನು ಮರದಡಿ ಕುಳಿತಿದಾಗ ಮರದ ಕೊಂಬೆ ನನ್ನ ಮೇಲೆ ಬಿದ್ದರೆ ಮರಕ್ಕೆ ಶಿಕ್ಷೆ ಕೊಡಲು ಸಾಧ್ಯವೇ?’ ಎಂದು ಸಾಧು ಪ್ರಶ್ನಿಸಿದಾಗ ವ್ಯಕ್ತಿ “ಅದೇನೋ ಸರಿ… ಆದರೆ ಮರಕ್ಕೆ ಸ್ವಂತ ಬುದ್ಧಿಯಾಗಲಿ, ವಿವೇಚನೆಯಾಗಲಿ ಇರುವುದಿಲ್ಲ. ಹೀಗಾಗಿ ಕೋಪ ಮಾಡಿಕೊಳ್ಳುವುದು ವ್ಯರ್ಥ’. ಈ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಸಾಧು “ಹಾಂ ಸರಿಯಾಗಿ ಹೇಳಿದಿರಿ. ಮರಕ್ಕೆ ವಿವೇಚನೆ, ಸ್ವಂತ ಬುದ್ಧಿ ಇಲ್ಲದೇ ಇರುವ ಕಾರಣಕ್ಕೆ ದೂಷಿಸಬಾರದು. ಮರದ ಹಾಗೆಯೇ ಆ ಪುಂಡನೂ ಕೂಡ. ಅವನಿಗೂ ವಿವೇಚನೆ ಇಲ್ಲ. ಇದ್ದಿದ್ದರೆ ಆ ತೊಂದರೆ ಕೊಡುವ ಕೆಲಸ ಮಾಡುತ್ತಿರಲಿಲ್ಲ. ಅವನನ್ನು ದಂಡಿಸಿದರೆ ನಮಗೂ ಅವನಿಗೂ ವ್ಯತ್ಯಾಸ ಇಲ್ಲದಂತಾಗುತ್ತದೆ’ ಎಂದರು.
ವೇದಾವತಿ ಹೆಚ್. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.