ಹಿಡಿಂಬ- ಹಿಡಿಂಬೆ


Team Udayavani, Aug 10, 2017, 7:35 AM IST

hidimba.jpg

ಹಿಡಿಂಬ ಒಬ್ಬ ರಾಕ್ಷಸ. ಅವನಿಗೊಬ್ಬಳು ತಂಗಿಯಿದ್ದಳು. ಅವಳೇ ಹಿಡಿಂಬೆ. ಇವರಿಗೆ ಮಾಯಾವಿದ್ಯೆ ಗೊತ್ತಿತ್ತು. ಈ ಅಣ್ಣ-ತಂಗಿ ಅರಣ್ಯದಲ್ಲಿ ವಾಸವಿದ್ದರು. ಅರಣ್ಯಕ್ಕೆ ಬರುವ ಜನರನ್ನು ಕೊಂದು ತಿನ್ನುವುದೇ ಈ ರಾಕ್ಷಸರ ಕೆಲಸವಾಗಿತ್ತು.
ಪಗಡೆಯಾಟದಲ್ಲಿ ಸೋತ ಕಾರಣದಿಂದ ವನವಾಸ ಮತ್ತು ಅಜ್ಞಾತವಾಸದ ಶಿಕ್ಷೆಗೆ ಗುರಿಯಾದ ಪಾಂಡವರು, ಅಲೆಯುತ್ತ ಅಲೆಯುತ್ತ ಕಾಡಿಗೆ ಬಂದರು. ಬಹುದೂರ ನಡೆದಿದ್ದ ಕಾರಣದಿಂದ ಕುಂತಿ ಮತ್ತು ಪಾಂಡವರಿಗೆ ಹೆಜ್ಜೆ ಎತ್ತಿಡುವುದೇ ಕಷ್ಟವಾಯಿತು. ಭೀಮನು ಅವರೆಲ್ಲರನ್ನೂ ಎತ್ತಿಕೊಂಡು ಓಡಿದ. ಎಲ್ಲರಿಗೂ ಬಾಯಾರಿಕೆ. ಭೀಮನು ಅವರನ್ನು ಒಂದು ಮರದ ಕೆಳಗೆ ಕುಳ್ಳಿರಿಸಿ ಒಂದಿಷ್ಟು ನೀರನ್ನು ಉತ್ತರೀಯದಲ್ಲಿ ತಂದು ನೋಡುತ್ತಾನೆ! ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಅರಮನೆಯಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದವರ ಈಗಿನ ಸ್ಥಿತಿ ನೋಡಿ ಭೀಮನಿಗೆ ಕಣ್ಣಿನಲ್ಲಿ ನೀರುಕ್ಕಿತು. ತಾನು ನಿದ್ರೆ ಮಾಡದೆ ಎಚ್ಚರವಾಗಿ ಕುಳಿತು ಕಾವಲಿದ್ದನು.

ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಮರದ ಮೇಲೆ ಹಿಡಿಂಬನಿದ್ದನು. ಅವನಿಗೆ ಮನುಷ್ಯರ ವಾಸನೆ ಸಿಕ್ಕಿತು. ತನಗೆ ಆಹಾರ ಸಿಕ್ಕಿತೆಂದು ಸಂತೋಷದಿಂದ ತನ್ನ ತಂಗಿ ಹಿಡಿಂಬೆಯನ್ನು ಕೂಗಿ – “ಇಲ್ಲಿಂದ ಸ್ವಲ್ಪ ದೂರದಲ್ಲಿ ಮನುಷ್ಯರು ಇದ್ದಾರೆ. ಅವರು ಯಾರೆಂದು ನೋಡಿಕೊಂಡು ಬಾ’ ಎಂದ. ಭೀಮನನ್ನು ನೋಡುತ್ತಲೇ ಹಿಡಿಂಬೆಗೆ ಅವನನ್ನು ಮದುವೆಯಾಗಬೇಕೆಂದು ಆಸೆಯಾಯಿತು. ಸುಂದರ ಯುವತಿಯ ರೂಪ ಧರಿಸಿ ಅವನ ಬಳಿಗೆ ಹೋಗಿ ತಾನು ಯಾರು ಎಂದು ತಿಳಿಸಿ, “ನನ್ನ ಜೊತೆಗೆ ಬಾ, ನಾನು ಆಕಾಶದಲ್ಲಿ ಹೋಗಬಲ್ಲೆ, ಎಲ್ಲಿಯಾದರೂ ಸುಖವಾಗಿರೋಣ’ ಎಂದಳು.

ಆದರೆ ಎಲ್ಲರನ್ನೂ ಬಿಟ್ಟು ಹೋಗಲು ಭೀಮನು ಒಪ್ಪಲಿಲ್ಲ. ಅವರಿಬ್ಬರು ಮಾತಿನಲ್ಲಿ ತಲ್ಲೀನರಾಗಿದ್ದಾಗಲೇ, ತಂಗಿ ಬರುವುದು ತಡವಾಯಿತೆಂದು ಯೋಚಿಸಿ ಹಿಡಿಂಬನೇ ಅಲ್ಲಿಗೆ ಧಾವಿಸಿ ಬಂದ. ಅವನಿಗೆ, ತನ್ನ ತಂಗಿ ಸುಂದರ ಯುವತಿಯಾಗಿ ನಿಂತಿರುವುದನ್ನು ಕಂಡು ಆಕೆ ಭೀಮನನ್ನು ಒಲಿದಿದ್ದಾಳೆ ಎಂದು ಅರ್ಥವಾಯಿತು. ಅವಳನ್ನು ಕೊಲ್ಲುವೆನೆಂದು ಮುನ್ನುಗ್ಗಿದ ಅವನನ್ನು ಭೀಮನು ತಡೆದನು. ಘೋರವಾದ ಕಾಳಗ ನಡೆಯಿತು. ಮಲಗಿದ್ದವರಿಗೆ ಎಚ್ಚರವಾಗಿ ನೋಡುತ್ತಿದ್ದರು. ಅರ್ಜುನನು ನೆರವಿಗೆ ಬರುತ್ತೇನೆಂದರೆ ಭೀಮನು ಬೇಡವೆಂದನು. ಯುದ್ಧದಲ್ಲಿ ಭೀಮನು ಹಿಡಿಂಬನನ್ನು ಕೊಂದನು. ಹಿಡಿಂಬೆಯನ್ನು ಮಾತನಾಡಿಸಿದ ಕುಂತಿಗೆ ಅವಳು ತಾನು ಯಾರೆಂದು ಹೇಳಿ, ಭೀಮನನ್ನು ತನ್ನ ಜೊತೆಗೆ ನಾಲ್ಕಾರು ದಿನಗಳ ಕಾಲ ಕಳಿಸಿಕೊಡುವಂತೆ ಬೇಡಿಕೊಂಡಳು. ಕುಂತಿಯೂ ಅದಕ್ಕೆ ಒಪ್ಪಿದಳು. ಭೀಮ- ಹಿಡಿಂಬೆಯರ ಮಗನೇ ಮಹಾಶೂರ ಘಟೋತ್ಕಚ. ತನ್ನನ್ನು ಪಾಂಡವರು ನೆನೆದಾಗ ಅವರ ನೆರವಿಗೆ ಬರುವನೆಂದು ಹೇಳಿ ಹೋದನು. ಮಗನೊಂದಿಗೆ ಹಿಡಿಂಬೆಯೂ ಹೊರಟು ಹೋದಳು.

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.