ನೆಪೋಲಿಯನ್‌ನನ್ನು ಕಾಡಿದ ಮೊಲಗಳು
Team Udayavani, Mar 14, 2019, 12:30 AM IST
ಜಗತ್ತನ್ನೇ ಗೆಲ್ಲಬೇಕೆಂಬ ಹಂಬಲ ಹೊಂದಿದ್ದ ರಾಜ ನೆಪೋಲಿಯನ್‌ನನ್ನು ಬಗ್ಗು ಬಡಿದಿದ್ದು ವಾಟರ್‌ಲೂ ಕದನ ಎನ್ನುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅನೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಅವನನ್ನು ಬಗ್ಗುಬಡಿದಿದ್ದು ಶತ್ರುಸೈನ್ಯವಲ್ಲ, ಮೊಲಗಳ ಸೈನ್ಯ ಎಂಬ ಸಂಗತಿ. ಇದಾಗಿದ್ದು ಹೀಗೆ…
ಹಿಂದಿನ ಕಾಲದಲ್ಲಿ ಮನುಷ್ಯ ಮನರಂಜನೆಗಾಗಿ ಅಳವಡಿಸಿಕೊಂಡಿದ್ದ ಅನೇಕ ಅಭ್ಯಾಸಗಳಲ್ಲಿ ಬೇಟೆಯೂ ಒಂದು. ನೆಪೋಲಿಯನ್‌ನ ಸೈನ್ಯಕ್ಕೂ ಬೇಟೆಯಾಡಬೇಕೆಂಬ ಉಮೇದು ಬಂದಿತು. ಅದಕ್ಕಾಗಿ ಏನು ಮಾಡುವುದೆಂದು ನೆಪೋಲಿಯನ್ ಸಲಹೆ ಕೇಳಿದಾಗ ಆಪ್ತರು ಒಂದು ಉಪಾಯ ಹೇಳಿದರು. ಮೊಲಗಳನ್ನು ಹಿಂಡಿನಲ್ಲಿ ಕರೆತಂದು ಬಯಲಿನಲ್ಲಿ ಬಿಟ್ಟು ಸಾಮೂಹಿಕವಾಗಿ ಬೇಟೆಯಾಡುವುದು ಆ ಉಪಾಯವಾಗಿತ್ತು. ಇದು ನೆಪೋಲಿಯನ್‌ಗೆ ಹಿಡಿಸಿತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಮೊಲಗಳನ್ನು ಹಿಡಿದು ಬೋನುಗಳಲ್ಲಿ ಹಾಕಿ ವಿಶಾಲ ಬಯಲಿಗೆ ತರಲಾಯಿತು. ಇತ್ತ ಇನ್ನೊಂದೆಡೆ ನೆಪೋಲಿಯನ್ ಮತ್ತು ಆತನ ಸೈನಿಕ ತುಕಡಿ ಬಂದೂಕುಗಳನ್ನು ಹಿಡಿದು ಸುಡಲು ಸಿದ್ಧವಾಯಿತು.
ಮೊಲಗಳನ್ನು ಬೋನುಗಳಿಂದ ಬಿಡುತ್ತಲೇ ನೆಪೋಲಿಯನ್ ಇದ್ದ ಕಡೆಗೆ ಮೊಲಗಳು ಓಟ ಕಿತ್ತವು. ಬಂದೂಕು ಒಂದೇ ಸಮನೆ ಮದ್ದುಗುಂಡುಗಳ ಸುರಿಮಳೆಗೈದಿತು. ಸದ್ದಿಗೆ ಬೆದರಿಂದ ಮೊಲಗಳು ಇನ್ನಷ್ಟು ವೇಗದಿಂದ ಸೈನಿಕರ ಮೇಲೆರಗಿದವು. ನೆಪೋಲಿಯನ್ನನ ಕಾಲಿನ ಮೇಲೆಲ್ಲಾ ಹತ್ತಿದವು. ಸಮುದ್ರೋಪಾದಿಯಲ್ಲಿ ದಾಳಿಯಿತ್ತ ಮೊಲಗಳನ್ನು ಕಂಡು ಸೈನಿಕರಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಮನರಂಜನೆ ಹೋಗಿ ದಿಗಿಲಾಯಿತು. ಬೇರೆ ದಾರಿ ಕಾಣದೆ ಅಲ್ಲಿಂದ ಹಿಮ್ಮೆಟ್ಟಬೇಕಾಯಿತು. ಅಂದು ಕಾಡುಮೊಲಗಳಿಗೆ ಬದಲಾಗಿ ಸಾಕಿದ ಮೊಲಗಳನ್ನು ತರಿಸಿದ್ದೇ ಎಡವಟ್ಟಾಗಿತ್ತು. ಕಾಡು ಮೊಲಗಳಾಗಿದ್ದರೆ ಮನುಷ್ಯರನ್ನು ಕಂಡ ತಕ, ಓಡುತ್ತಿದ್ದವು. ಆದರೆ ಸಾಕಿದ ಮೊಲಗಳಾಗಿದ್ದರಿಂದ ಅವು ಸೈನಿಕರನ್ನು ಕಂಡು ಆಹಾರದ ಆಸೆಯಿಂದ ಮುಗಿಬಿದ್ದಿದ್ದವು.
– ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.