ಸವಾರಿ ಹೊರಡಲು ರೆಡಿ
ಕಾದಂಬರಿ ಆಧರಿತ ಚಿತ್ರ
Team Udayavani, Jun 14, 2019, 5:00 AM IST
“ಕಥೆ ಹಿಡಿಯೋದು ಕಷ್ಟ ಅಂತ ಹೇಳ್ತಾ ಇಲ್ಲ. ಅಸಾಧ್ಯ ಅಂತ ಹೇಳ್ತಾ ಇದೀವಿ…’
– ಈ ಸಾಲುಗಳು ಸಂಪೂರ್ಣ ಹೊಸಬರೇ ಸೇರಿ ಮಾಡಿದ “ಸಮಯದ ಹಿಂದೆ ಸವಾರಿ’ ಚಿತ್ರದ ಪೋಸ್ಟರ್ ಮೇಲಿತ್ತು. ಬಹುತೇಕ ರಂಗಭೂಮಿ ಹಿನ್ನೆಲೆ ಇರುವ ತಂಡವಾಗಿರುವುದರಿಂದ ಚಿತ್ರದಲ್ಲಿ
ಹೊಸತನ ಹೆಚ್ಚಾಗಿದೆ ಎಂಬುದು ತಂಡದ ಪ್ರತಿಯೊಬ್ಬರ ಮಾತು. ಅಂದಹಾಗೆ, ಚಿತ್ರ ಮುಗಿದಿದ್ದು, ಜೂನ್ 28ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ, ಮಾಧ್ಯಮ ಎದುರು ಚಿತ್ರತಂಡ ಆಗಮಿಸಿತ್ತು. ಪತ್ರಿಕಾಗೋಷ್ಠಿ ಅಂದಮೇಲೆ, ಚಿತ್ರತಂಡದ ಸದಸ್ಯರು ಒಬ್ಬೊಬ್ಬರಾಗಿಯೇ ಚಿತ್ರದ ಅನುಭವ, ಕಥೆ, ಪಾತ್ರ ಇತ್ಯಾದಿ ಕುರಿತು ಹೇಳಿಕೊಳ್ಳುತ್ತಾರೆ. ಆದರೆ, ರಂಗಭೂಮಿ ಕಲಾವಿದರು ಇಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿತ್ರದ ಮಾಹಿತಿಗಳನ್ನೆಲ್ಲಾ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು.
ಇದು ಹಿರಿಯ ಪತ್ರಕರ್ತ ಜೋಗಿ ಅವರ “ನದಿಯ ನೆನಪಿನ ಹಂಗು’ ಕಾದಂಬರಿ ಆಧರಿಸಿ ಮಾಡಿದ ಚಿತ್ರ. ಈ ಹಿಂದೆ ಈ ಕಾದಂಬರಿ ನಾಟಕವಾಗಿ ಯಶಸ್ಸು ಕಂಡಿತ್ತು. ಕಾದಂಬರಿ ಹೆಸರಲ್ಲೇ ಚಿತ್ರ ಮಾಡಲು ಹೊರಟ ತಂಡಕ್ಕೆ ಮಂಡಳಿಯಲ್ಲಿ ಹೆಸರು ನೋಂದಣಿಯಾಗಲಿಲ್ಲ. ಕೊನೆಗೆ “ಸಮಯದ ಹಿಂದೆ ಸವಾರಿ’ ಶೀರ್ಷಿಕೆ ಪಕ್ಕಾ ಆಯ್ತು. ನಂತರದ ದಿನಗಳಲ್ಲಿ ಕುಂದಾಪುರ, ಮಂಗಳೂರು ಮುಂತಾದ ಸ್ಥಳಗಳಲ್ಲಿ ಯಶಸ್ವಿ ಚಿತ್ರೀಕರಣವನ್ನು
ಮುಗಿಸಿದ್ದು, ಈಗ ಬಿಡುಗಡೆಗೆ ಸಜ್ಜಾಗಿದೆ ಚಿತ್ರತಂಡ. ಚಿತ್ರ ತಡವಾಗಿದೆ. ಅದಕ್ಕೆ ಕಾರಣ, ನಿರ್ಮಾಪಕರ ಸಮಸ್ಯೆ, ಒಬ್ಬ ನಿರ್ಮಾಪಕರು ಪಕ್ಕಾ ಆಗಿದ್ದು, ಅವರು ಕೊನೆಕ್ಷಣದಲ್ಲಿ ಬದಲಾದ ಪರಿಣಾಮ, ಚಿತ್ರತಂಡದಲ್ಲಿದ್ದ ಮೂವರು ಗೆಳೆಯರು ಸೇರಿಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಮೊದಲ ಅನುಭವ ಆಗಿದ್ದರಿಂದ ಸಾಕಷ್ಟು ಸಮಸ್ಯೆ ಎದುರಿಸಿ, ಕಷ್ಟ ಅನುಭವಿಸಿಯೂ ಸಿನಿಮಾ ಮಾಡಿದ್ದಾರೆ. ಚಿತ್ರದ ಕಥೆ ಇಷ್ಟು. ಆ ಊರಲ್ಲಿ ಒಂದು ಕೊಲೆಯಾಗುತ್ತದೆ. ಆ ಕೊಲೆಯ ಜಾಡು ಹಿಡಿದು ಹೋದರೆ ಹಲವು ದಾರಿಗಳು ಎದುರಾಗುತ್ತವೆ. ಅಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಕಥೆ. ಚಿತ್ರದ ಶಿರ್ಷಿಕೆಗೆ “ಬಲ್ಲ ಮೂಲಗಳ ಪ್ರಕಾರ’ ಎಂಬ ಅಡಿಬರಹ ಒಂದಷ್ಟು ಕುತೂಹಲ ಮೂಡಿಸುತ್ತದೆ.
ಈ ಚಿತ್ರವನ್ನು ನಟ, ಗಾಯಕ ಗುರುರಾಜ ಹೊಸಕೋಟೆ ಅವರ ಪುತ್ರ ರಾಜ್‌ಗುರು ಹೊಸಕೋಟೆ ನಿರ್ದೇಶನ ಮಾಡಿದ್ದಾರೆ. ರಂಗಭೂಮಿಯಲ್ಲಿ ಅನುಭವ ಪಡೆದಿರುವ ಅವರು, ಈ ಚಿತ್ರಕ್ಕೆ ಸಾಹಿತ್ಯ, ಸಂಭಾಷಣೆ ಜವಾಬ್ದಾರಿ ಹೊತ್ತು ನಿರ್ದೇಶನ ಮಾಡಿದ್ದಾರೆ. ಇನ್ನು, ರಾಹುಲ್ ಹೆಗ್ಡೆ ನಾಯಕರಾಗಿ ನಟಿಸಿದ್ದಾರೆ. ನಿರ್ಮಾಣ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಪ್ರಕೃತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಕಿರಣ್‌ವಟಿ, ರಂಜತ್‌ಶೆಟ್ಟಿ, ಶಿವಶಂಕರ್, ಪ್ರವೀಣ್ ಹೆಗ್ಡೆ, ಪಶುಪತಿ ಇತರರು ಇದ್ದಾರೆ. ವಿ.ನಾಗೇಂದ್ರಪ್ರಸಾದ್ ಗೀತೆ ಬರೆದಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ ಮಾಡಿದರೆ, ರಂಜಿತ್‌ಹೆಗ್ಡೆ, ಪ್ರವೀಣ್‌ಹೆಗ್ಡೆ ಸಹ ನಿರ್ಮಾಪಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.