ನೀಲಿಯ ಬುಗುರಿ ಭೂಮಿ!
Team Udayavani, Jun 22, 2017, 3:45 AM IST
ಅದೆಷ್ಟೋ ಲಕ್ಷ ಕೋಟಿ ಜೀವಿಗಳು ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿ ಮೇಲೆ ನೆಲೆಯನ್ನು ಕಂಡುಕೊಂಡಿವೆ ಎಂಬುದೇನೋ ನಿಜ. ನಮಗೆ ಸಕಲವನ್ನೂ ನೀಡಿರುವ, ನೀಡುತ್ತಿರುವ ಭೂಮಿಯ ಕುರಿತು 5 ಸಂಗತಿಗಳು.
1. ಭೂಮಿಯ ಚಲನೆ ನಿಧಾನವಾಗುತ್ತಿದೆ.
ತನ್ನ ಅಕ್ಷದಲ್ಲಿಯೂ ಸುತ್ತುವ ಭೂಮಿಯ ವೇಗ ಮಿಲಿಸೆಕೆಂಡುಗಳಷ್ಟು ಅಂತರದಲ್ಲಿ ನಿಧಾನವಾಗುತ್ತಿದೆ. ಇದರ ನೇರ ಪರಿಣಾಮ ಆಗುವುದು ಬೆಳಗು ಮತ್ತು ರಾತ್ರಿಯ ಮೇಲೆ. ಆದರೆ ಇದಾಗಲು ನೂರು ಮಿಲಿಯನ್ ವರ್ಷಗಳು ಕಳೆಯಬೇಕು. ಆಗ ಭೂಮಿಯ ದಿನಮಾನ 24 ಗಂಟೆ ಆಗಿರುವುದಿಲ್ಲ, 25 ಗಂಟೆಗಳಾಗಿರುತ್ತವೆ.
2. ನಾವೇ ಕೇಂದ್ರ
ಒಂದು ಕಾಲದಲ್ಲಿ ಭೂಮಿಯ ಸುತ್ತ ಇಡೀ ವಿಶ್ವವೇ ಸುತ್ತುತ್ತಿದೆ ಎಂದು ಜನರು ನಂಬಿದ್ದರು. ಜನರೇ ಅಲ್ಲ ವಿಜ್ಞಾನಿಗಳೇ ನಂಬಿದ್ದರು.
3. ವಿದ್ಯುತ್ಕಾಂತೀಯ ಶಕ್ತಿ
ಭೂಮಿಯನ್ನು ಬಲವಾದ ವಿದ್ಯುತ್ಕಾಂತೀಯ ಶಕ್ತಿ ಆವರಿಸಿದೆ. ಇದು ಸೂರ್ಯನ ಅಪಾಯಕಾರಿ ಸೌರಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ.
4.ಭೂಮಿಯ ನಾಮಕರಣ
ಸೌರಮಂಡಲದ ಎಲ್ಲಾ ಗ್ರಹಗಳ ಹೆಸರುಗಳು ದೇವರ ಹೆಸರಿನಿಂದ ಪ್ರಭಾವಿತಗೊಂಡಿದೆ. ಇದಕ್ಕೆ ಅಪವಾದದಂತಿರುವ ಏಕೈಕ ಗ್ರಹ ಭೂಮಿ. ಮರ್ಕುÂರಿ, ವೀನಸ್, ಮಾರ್, ಜುಪೀಟರ್ ಮತ್ತು ಶನಿ- ಈ ಗ್ರಹಗಳ ಹೆಸರನ್ನು ರೋಮನ್ ಪುರಾಣದ ಪ್ರಕಾರ ಇಡಲಾಗಿದೆ. ಯುರೇನಸ್ ಮತ್ತು ನೆಪೂcನ್ ಗ್ರಹಗಳ ಹೆಸರು ಗ್ರೀಕ್ ಪುರಾಣದಿಂದ ಬಂದಿವೆ. ಅರ್ತ್ (ಭೂಮಿ) ಹೆಸರು ಬಂದಿದ್ದು “ಎರ್ಡಾ’ ಎನ್ನುವ ಅÂಂಗ್ಲೊ ಸ್ಯಾಕ್ಸನ್ ಪದದಿಂದ.
5. 1 ದಿನದಲ್ಲಿ 24 ಗಂಟೆಗಳಿಲ್ಲ!
ಜನರು ಒಂದು ದಿನದಲ್ಲಿರುವ 24 ಗಂಟೆಗಳ ಸಮಯ ಕಡಿಮೆಯೇ ಎಂದು ದೂರುವುದನ್ನು ನೋಡಿರಬಹುದು. ಆದರೆ ನಮ್ಮ ಒಂದು ದಿನದಲ್ಲಿ ಇರುವುದು 24 ಗಂಟೆಗಳಲ್ಲ ಎಂಬ ಸಂಗತಿ ನಿಮಗೆ ಗೊತ್ತೇ. ಒಂದು ದಿನದಲ್ಲಿರುವುದು 23 ಗಂಟೆ 56 ನಿಮಿಷಗಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.