ಸಾಧುವಿನ ಕತೆ
Team Udayavani, Jan 3, 2019, 12:30 AM IST
ದೇವಶರ್ಮ ಎಂಬ ಒಬ್ಬ ಸಾಧು ಇದ್ದ. ಅವನ ಗುಣ ಮಾತ್ರ ನಿಜವಾದ ಸಾಧುವಿನಂತೆ ಇರಲಿಲ್ಲ! ಆತನಿಗೆ ಹಣದ ದುರಾಸೆ ಇತ್ತು. ಆತ ಹಣದ ಒಂದು ದೊಡ್ಡ ಗಂಟನ್ನೇ ತನ್ನ ಕೋಣೆಯಲ್ಲಿ ಇಟ್ಟುಕೊಂಡಿದ್ದ. ಒಬ್ಬ ಜಾಣ ಕಳ್ಳನಿಗೆ ಇದರ ವಿಷಯ ತಿಳಿಯಿತು. ತನ್ನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳಬೇಕೆಂದು ಆ ಕಳ್ಳ ದೇವಶರ್ಮನನ್ನು ಬೇಡಿಕೊಂಡ. ನಿಜಸಂಗತಿ ಗೊತ್ತಾಗದೆ ಮೋಸಹೋದ ದೇವಶರ್ಮ ಕಳ್ಳನನ್ನು ಶಿಷ್ಯನನ್ನಾಗಿ ಮಾಡಿಕೊಂಡ! ಈ ಕಳ್ಳ, ಗುರು ದೇವಶರ್ಮನಿಗೆ ಕಪಟ ಭಯಭಕ್ತಿ ತೋರಿಸಿ ವಿಶ್ವಾಸ ಗಳಿಸಿದ್ದ. ಕೆಲವು ಕಾಲದ ನಂತರ ದೇವಶರ್ಮ, ತೀರ್ಥಯಾತ್ರೆಗೆ ಹೊರಟ. ಜೊತೆಯಲ್ಲೇ ತನ್ನ ಹಣದ ಗಂಟನ್ನೂ ಇಟ್ಟುಕೊಂಡ. ಶಿಷ್ಯನೂ ಹಿಂದೆ ಹೊರಟ. ಅವರೊಂದು ಕಾಡಿನ ದಾರಿಯಲ್ಲಿ ಹೋಗುತ್ತಿದ್ದಾಗ ತುಸು ದೂರದಲ್ಲಿ ಒಂದು ನೀರಿನ ತೊರೆ ಕಾಣಿಸಿತು. ಈ ತೊರೆಯಲ್ಲಿ ಸ್ನಾನ ಮಾಡಲು ಹೋಗುವುದಕ್ಕೆ ಮುಂಚೆ ದೇವಶರ್ಮ, ತನ್ನ ಹಣದ ಗಂಟನ್ನು ಶಿಷ್ಯನ ಕೈಗೆ ಕೊಟ್ಟು, ತಾನು ಬರುವವರೆಗೆ ಅಲ್ಲಿಯೇ ಕಾಯುತ್ತಿರಲು ಹೇಳಿ ತೊರೆಯತ್ತ ಹೊರಟುಹೋದ.
ಸ್ವಲ್ಪ ದೂರದಲ್ಲಿ ಎರಡು ಕಾಡು ಟಗರುಗಳ ಭೀಕರವಾಗಿ ಹೋರಾಡುತ್ತಿದ್ದುದು ದೇವಶರ್ಮನಿಗೆ ಕಾಣಿಸಿತು. ಅವು ಎದುರುಬದುರಾಗಿ ಓಡಿಬಂದು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತ ಕಾದಾಡುತ್ತಿದ್ದವು. ಆ ಎರಡು ಟಗರುಗಳ ಹಣೆಯಲ್ಲಿ ರಕ್ತ ಹರಿಯುತ್ತಿತ್ತು. ಈ ಹೋರಾಟವನ್ನು ನೋಡುತ್ತಿದ್ದವನು ದೇವಶರ್ಮ ಒಬ್ಬನೇ ಅಲ್ಲ! ಒಂದು ಗುಳ್ಳೆನರಿ ಕೂಡ ಟಗರುಗಳಿಗೆ ಕಾಣದ ಹಾಗೆ ನಿಂತು ಅವುಗಳ ಕಾಳಗವನ್ನು ನೋಡುತ್ತಿತ್ತು. ಬಿಸಿರಕ್ತದ ಸವಿಯಲು ಅದು ಸಮಯ ಕಾಯುತ್ತಿತ್ತು. ಎರಡು ಟಗರುಗಳು ಢಿಕ್ಕಿ ಹೊಡೆದು ಹಿಂದೆ ಹಿಂದೆ ಸರಿದಾಗ, ನರಿ ಮಧ್ಯೆ ನುಗ್ಗಿ ನೆಲದ ಮೇಲೆ ಸುರಿದಿದ್ದ ಬಿಸಿರಕ್ತವನ್ನು ನೆಕ್ಕಲು ಆರಂಭಿಸಿತು. ಟಗರುಗಳು ಮತ್ತೆ ಢಿಕ್ಕಿ ಹೊಡೆದುಕೊಳ್ಳಲು ನುಗ್ಗಿ ಬಂದಾಗ ಆ ನರಿ ಮಧ್ಯೆ ಸಿಕ್ಕಿಕೊಂಡು ನಜ್ಜುಗುಜ್ಜಾಗಿ ಕೂಡಲೇ ಸತ್ತುಹೋಯಿತು.
ಇದನ್ನೆಲ್ಲಾ ನೋಡಿ, ತೊರೆಗೆ ಹೋಗಿ, ದೇವಶರ್ಮ ಸ್ನಾನ ಮಾಡಿ ಮುಗಿಸಿ, ಶಿಷ್ಯನಿದ್ದ ಜಾಗಕ್ಕೆ ಮರಳಿ ಬಂದ. ಆದರೆ ಶಿಷ್ಯ ಅಲ್ಲೆಲ್ಲೂ ಕಾಣಲಿಲ್ಲ! ಆತ ಹಣದ ಗಂಟಿನೊಂದಿಗೆ ಪರಾರಿಯಾಗಿ ಹೋಗಿದ್ದ.
ಕೃಪೆ- ಓರಿಯೆಂಟಲ್ ಲಾಂಗ್‌ಮನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.