ಗಿಲಿಗಿಲಿ ಮ್ಯಾಜಿಕ್ : ಅದೃಶ್ಯ ನಾಣ್ಯ
ಸಿಂಪಲ್ Trick
Team Udayavani, May 2, 2019, 9:56 AM IST
ಇದೊಂದು ಸುಲಭದ ಜಾದೂ. ಆದರೆ ಇದನ್ನು ಒಂದು ಸಲಕ್ಕೆ ಒಬ್ಬರ ಮುಂದೆ ಮಾತ್ರ ಪ್ರದರ್ಶಿಸಬಹುದು. ಒಂದು ನಾಣ್ಯವನ್ನು ತೆಗೆದುಕೊಳ್ಳಿ. ನಿಮ್ಮ ತಮ್ಮನನ್ನೋ, ತಂಗಿಯನ್ನೋ ಎದುರಿಗೆ ಕೂರಿಸಿಕೊಂಡು ತನ್ನ ಬಲಗೈಯನ್ನು ಮುಂದಕ್ಕೆ ಚಾಚುವಂತೆ ಹೇಳಿ.
ನಿಮ್ಮ ಬಲಗೈಯಿಂದ ಅವರ ಬಲಗೈಯನ್ನು ಮೂರು ಬಾರಿ ಮುಟ್ಟುತ್ತೇನೆಂದೂ, ಮೂರನೇ ಬಾರಿಗೆ ನಿಮ್ಮ ಕೈಯಲ್ಲಿನ ನಾಣ್ಯವನ್ನು ಹಿಡಿದರೆ ಅವರಿಗೇ ಆ ನಾಣ್ಯವನ್ನು ಕೊಡುತ್ತೇನೆಂದೂ ಹೇಳಿ. ಈಗ ನಾಣ್ಯವನ್ನು ನಿಮ್ಮ ಬಲಗೈಯ ಹೆಬ್ಬೆಟ್ಟು ಮತ್ತು ತೋರು ಬೆರಳ ನಡುವೆ ಹಿಡಿದು ಕೈಯನ್ನು ತಲೆಯ ಮೇಲಿನವರೆಗೆ ಎತ್ತಿ ಥಟ್ಟನೆ ಕೆಳಗಿಳಿಸಿ ಅವರ ಬಲಗೈಗೆ ಸೋಕಿಸಿ. ಹೀಗೆಯೇ ಎರಡು ಬಾರಿ ಮಾಡಿ.
ಆದರೆ ಮೂರನೇ ಬಾರಿ ನಿಮ್ಮ ಕೈಯನ್ನು ತಲೆಯ ಮೇಲೆ ತೆಗೆದುಕೊಂಡು ಹೋದ ಕೂಡಲೇ ನಾಣ್ಯವನ್ನು ಅಲ್ಲಿಯೇ ಬೀಳಿಸಿ. ಅದು ತಲೆಯಿಂದ ಕೆಳಗೆ ಬೀಳದಂತೆ ಎಚ್ಚರಿಕೆ ವಹಿಸಿ. ಆದರೆ ನಿಮ್ಮ ಬೆರಳುಗಳು ನಾಣ್ಯವನ್ನು ಹಿಡಿದಿರುವಂತೆಯೇ ಒಂದಕ್ಕೊಂದು ಸೋಕಿರಲಿ.
ಈಗ ನಿಮ್ಮ ಕೈ ಸೋಕಿದೊಡನೆ ಅವರು ನಾಣ್ಯವನ್ನು ಹಿಡಿಯಲು ತಮ್ಮ ಕೈಯನ್ನು ಸಹಜವಾಗಿ ಥಟ್ಟನೆ ಮುಚ್ಚಿಕೊಳ್ಳುವರು. ಈಗ ನಾಣ್ಯ ನಿಮ್ಮ ಕೈಯಲ್ಲೂ ಇಲ್ಲ, ಅವರಿಗೂ ಸಿಕ್ಕಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.