ಸ್ವರ್ಗ ಮೇಲೋ? ಭೂಮಿ ಮೇಲೋ?


Team Udayavani, Feb 23, 2017, 3:44 PM IST

swarga.jpg

ರಂಗಣ್ಣ ಎಂಬ ರೈತನಿದ್ದ. ಅವನು ಎಂತಹ ಬಿರುಮಳೆಗೂ ಜಗ್ಗುತ್ತಿರಲಿಲ್ಲ, ಚಳಿಯೆಂಬ ನಡುಕವೂ ಅವನಿಗಿರಲಿಲ್ಲ. ಹೊಲದಲ್ಲಿ ಶ್ರಮಪಟ್ಟು ದುಡಿಯುವುದೊಂದೇ ಅವನ ಧ್ಯೇಯವಾಗಿತ್ತು. ರಂಗಣ್ಣನ ಬೆವರಿನ ಪ್ರತಿ ಹನಿಯೂ ಮುತ್ತಿನಂತಹ ಕಾಳುಗಳಾಗುತ್ತಿದ್ದವು. ರೈತನ ಶ್ರಮದ ಫ‌ಲದಿಂದ ಬೆಳೆದ ಕಾಳುಗಳನ್ನು ಉಂಡು ಜನ ಹಾಯಾಗಿ ಬದುಕುತ್ತಿದ್ದರು. ಸಮಸ್ತ ಜೀವಕೋಟಿಗೂ ಅವನು ಬೆಳೆದುದರಲ್ಲಿ ಪಾಲು ಸಿಗುತ್ತಿತ್ತು.

ಒಂದು ಸಲ ದೇವಲೋಕದಲ್ಲಿ ದೇವೇಂದ್ರ ಯಾರ್ಯಾರ ಪುಣ್ಯ ಕಾರ್ಯ ಎಷ್ಟೆಷ್ಟು ಇದೆಯೆಂದು ಪರಿಶೀಲಿಸತೊಡಗಿದ. ಅವನಿಗೆ ಆಶ್ಚರ್ಯವಾಯಿತು. ಎಲ್ಲರಿಗಿಂತ ಹೆಚ್ಚು ಪುಣ್ಯ ರಂಗಣ್ಣನ ಖಾತೆಯಲ್ಲಿ ಜಮಾ ಆಗಿತ್ತು. ಲೋಕದ ಅಸಂಖ್ಯ ಜೀವಿಗಳ ಉದರಕ್ಕೆ ಬೇಕಾದ ಅನ್ನ ಬೆಳೆಯುತ್ತಿರುವ ಕಾರಣಕ್ಕೆ ಅವನ ಪುಣ್ಯದ ಪಾಲು ದೊಡ್ಡದಾಗಿದೆಯೆಂದು ದೇವದೂತರು ಹೇಳಿದರು. ಎಲಾ! ಲೋಕದಲ್ಲಿ ಒಬ್ಬ ಹುಲು ರೈತನಿಗೆ ಇಷ್ಟು ಬೆಲೆ ಇದೆಯೇ? ಹೀಗಾಗಬಾರದು. ವರ್ಷಡೀ ತನಗೆ ಹವಿಸ್ಸು ಸಮರ್ಪಿಸುವ ಋಷಿ ಮುನಿಗಳಿಗೂ ಇಷ್ಟೊಂದು ಪುಣ್ಯ ಪ್ರಾಪ್ತಿಯಾಗಿಲ್ಲ. ಇವನಿಗೇನು ಹೆಚ್ಚುಗಾರಿಕೆ? ಇದಕ್ಕೆ ಅಡ್ಡಗಾಲಿಡಬೇಕೆಂದು ಇಂದ್ರ ವರುಣನನ್ನು ಕರೆದ. “ರಂಗಣ್ಣನ ಹೊಲದ ಮೇಲೆ ಮಳೆ ಸುರಿಸಬೇಡ. ಅವನು ಬೆಳೆದ ಬೆಳೆಗಳನ್ನೆಲ್ಲ ಸುಟ್ಟುಬಿಡು’ ಎಂದು ಆಜಾnಪಿಸಿದ.

ಬೆಳೆ ಸುಟ್ಟು ಹೋಗುವಾಗ ರೈತ ನೋಡುತ್ತ ಸುಮ್ಮನಿರಲಿಲ್ಲ. ಒಂದು ಕೊಡ ತೆಗೆದುಕೊಂಡು ದೂರದ ಸಮುದ್ರಕ್ಕೆ ಹೋದ. ಅಲ್ಲಿಂದ ನೀರು ತಂದು ಹೊಲಕ್ಕೆ ಹನಿಸಿದ. ಅವನ ಕಷ್ಟ ನೋಡಿ ಭೂತಾಯಿ ಖುಷಿಪಟ್ಟಳು. ಬೆಳೆಗೆ ಸ್ವಲ್ಪವೂ ಹಾನಿ ಮಾಡಲಿಲ್ಲ. ಪೂರ್ಣ ಫ‌ಲ ನೀಡಿದಳು.

ಈಗ ರಂಗಣ್ಣನೆದುರು ಇಂದ್ರನೇ ಸೋತು ಹೋದ. ದೇವಮಾನವರೊಂದಿಗೆ ಅವನ ಬಳಿಗೆ ಬಂದ. “ಬಾರಯ್ಯ ಪುಣ್ಯಶಾಲಿಯೇ ಬಾ. ನಿನ್ನಂಥ ಶ್ರೇಷ್ಠರು ಹೀಗೆ ಇಲ್ಲಿ ಮಳೆ ಬಿಸಿಲೆನ್ನದೆ ಕಷ್ಟಪಡಬಾರದು. ನನ್ನೊಂದಿಗೆ ಸ್ವರ್ಗಕ್ಕೆ ಬಂದುಬಿಡು’ ಎಂದು ಕರೆದ.     

“ಸ್ವರ್ಗಕ್ಕಾ?’ ರಂಗಣ್ಣ ಅಚ್ಚರಿಯಿಂದ ಕೇಳಿದ. “ಅಲ್ಲಿ ಇಂತಹ ಹೊಲ ಗದ್ದೆಗಳಿವೆಯೇ? ನೊಗ ನೇಗಿಲುಗಳಿವೆಯೇ? ಎತ್ತುಗಳಿವೆಯೇ? ಮಳೆ ಬಿಸಿಲಿದೆಯೇ?’.

ಇಂದ್ರ ಜೋರಾಗಿ ನಕ್ಕ. “ಅಯ್ಯೋ ಪೆದ್ದೇ; ಸ್ವರ್ಗದಲ್ಲಿ ಪೃಥ್ವಿಯಂತೆ ಹಸಿವಿಲ್ಲ. ದಾಹವಿಲ್ಲ. ಹುಟ್ಟಿಲ್ಲ, ಸಾವಿಲ್ಲ. ಮತ್ತೇಕೆ ಹೊಲದಲ್ಲಿ ನೇಗಿಲು ಹಿಡಿದು ದುಡಿಯಬೇಕು? ಅಂಥ ಕಷ್ಟವಿರುವುದು ಭೂಮಿಯ ನಿವಾಸಿಗಳಿಗೆ ಮಾತ್ರ. ಅಲ್ಲಿ ಏನಿದ್ದರೂ ಸುಖವೊಂದೇ’ ಎಂದ ಅವನು.

ಆ ಕೂಡಲೇ ರಂಗಣ್ಣ, “ಏನೆಂದಿರಿ? ದುಡಿದು ತಂದು ಲೋಕದ ಜೀವಿಗಳ ಹಸಿವು ತಣಿಸುವ ಪುಣ್ಯಕಾರ್ಯಕ್ಕೆ ಅಲ್ಲಿ ಅವಕಾಶವೇ ಇಲ್ಲವೇ? ಇದರಿಂದ ಸಿಗುವ ಮನಸ್ಸಮಾಧಾನ ನನಗೆ ಯಾವ ಸಗ್ಗದಲ್ಲಿಯೂ ಸಿಗಲಿಕ್ಕಿಲ್ಲ. ಖಂಡಿತ ನಾನಲ್ಲಿಗೆ ಬರುವುದಿಲ್ಲ. ನಾನು ಬೆಳೆದ ಬೆಳೆಯನ್ನು ಉಂಡು ಅಷ್ಟೊಂದು ಜೀವಿಗಳಿಗೆ ಸಿಗುವ ಸುಖವಿದೆಯಲ್ಲ ಅದು ಇಲ್ಲದಲ್ಲಿ ನಾನಿರುವುದಿಲ್ಲ’ ಎನ್ನುತ್ತ ನೊಗ ಹೆಗಲಿಗೇರಿಸಿ ನಡೆದೇಬಿಟ್ಟ. ಇಂದ್ರನಿಗೆ ನಾಚಿಕೆಯಾಯಿತು. ರಂಗಣ್ಣನ ದೊಡ್ಡತನವನ್ನೊಪ್ಪಿಕೊಂಡು ಅವನ ದುಡಿಮೆಗೆ ತನ್ನ ಅನುಗ್ರಹವನ್ನು ಪೂರ್ಣವಾಗಿ ನೀಡಿದ. 
***

ಯುದ್ಧ ನಿಲ್ಲಿಸಿದ ಇರುವೆಗಳು

ಸಿಕಂದರ್‌ ಎಂಬ ದೊರೆಗೆ ಇಡೀ ಜಗತ್ತನ್ನು ಗೆದ್ದು ಸರ್ವಾಧಿಕಾರಿಯಾಗಬೇಕೆಂಬ ದುರಾಶೆ ಹುಟ್ಟಿತು. ಅದಕ್ಕಾಗಿ ದೊಡ್ಡ ಸೇನೆಯನ್ನು ಕಟ್ಟಿದ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ದಂಡಯಾತ್ರೆ ಕೈಗೊಂಡ. ಶರಣಾದವರ ದೇಶದ ಸಂಪತ್ತನ್ನೆಲ್ಲ ವಶಪಡಿಸಿಕೊಂಡ. ಎದುರಿಸಿ ಹೋರಾಟಕ್ಕೆ ಅಣಿಯಾದವರನ್ನು ನಿರ್ದಯೆಯಿಂದ ಕೊಂದು ಹಾಕಿ ಅವರ ಕೋಶಾಗಾರವನ್ನು ಸೂರೆ ಮಾಡಿದ.

ಹೀಗೆ ಸೇನೆಯೊಂದಿಗೆ ಮುಂದುವರೆಯುತ್ತಾ ಸಿಕಂದರ್‌ ಒಂದು ಪುಟ್ಟ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಶರಣಾಗಲು ಹೇಳಿದ. ಅಲ್ಲಿಯ ಪ್ರಜೆಗಳಲ್ಲಿ ಸ್ವಾತಂತ್ರ್ಯದ ಅಭಿಮಾನ ಉಕ್ಕುತ್ತಿತ್ತು. ಅವರು ಶರಣಾಗಲು ಒಪ್ಪಲಿಲ್ಲ. “ದೇಶಕ್ಕಾಗಿ ಹೋರಾಡುತ್ತೇವೆ. ತಪ್ಪಿದರೆ ವೀರ ಮರಣ ಇದ್ದೇ ಇದೆ’ ಎಂದು ದಿಟ್ಟವಾಗಿ ಹೇಳಿ ಅಚಲ ಆತ್ಮವಿಶ್ವಾಸದಿಂದ ಕಾದಿದರು. ಆಶ್ಚರ್ಯವೆಂಬಂತೆ ಅವರ ಕೆಚ್ಚಿನೆದುರು ಸಿಕಂದರನ ಬಹು ದೊಡ್ಡ ಸೇನೆ ಧೂಳೀಪಟವಾಯಿತು. ಪುಟ್ಟ ದೇಶದವರು ಜಯ ಪತಾಕೆ ಹಾರಿಸಿದರು.

ಈ ಪ್ರಕರಣದಿಂದ ಸಿಕಂದರ್‌ ಅವಮಾನಿತನಾದ. ಸೋಲಿನ ಸೇಡು ತೀರಿಸಿಕೊಳ್ಳಲು ಸಜಾjದ. ಇನ್ನಷ್ಟು ಪ್ರಬಲವಾದ ಸೈನ್ಯವನ್ನು ಒಟ್ಟುಗೂಡಿಸಿ ಮತ್ತೆ ಧಾಳಿಗೆ ಆ ದೇಶದತ್ತ ಹೊರಟ. ಕುದುರೆಗಳನ್ನೇರಿಕೊಂಡು ಸೇನಾಪಡೆ ಬರುತ್ತಿದ್ದಾಗ, ಮುಂದಿದ್ದ ಸಿಕಂದರ್‌, “ಎಲ್ಲರೂ ಒಂದು ಕ್ಷಣ ಅಲ್ಲಲ್ಲೇ ನಿಲ್ಲಿ’ ಎಂದು ಆಜಾnಪಿಸಿದ. ಅಶ್ವಾರೂಢರು ಕುದುರೆಗಳಿಂದ ಇಳಿದು ಏನೆಂದು ನೋಡಿದಾಗ ಒಂದು ದೊಡ್ಡ ಸಾಲಿನಲ್ಲಿ ಇರುವೆಗಳು ಹೋಗುತ್ತಿರುವುದು ಕಾಣಿಸಿತು. ಅದರತ್ತ ಬೆರಳು ತೋರಿಸಿದ ಸಿಕಂದರ್‌. “ಕುದುರೆಗಳ ಕಾಲು ಕೆಳಗೆ ಸಿಲುಕಿ ಇರುವೆಗಳು ಸಾಯಬಾರದು. ಎಚ್ಚರಿಕೆಯಿಂದ ಪಥ ಬದಲಿಸಿ ಮುಂದೆ ಸಾಗಿ’ ಎಂದು ಹೇಳಿದ.

    ಈ ಮಾತು ಕೇಳಿ ಸೈನಿಕನೊಬ್ಬನ ಮುಖದಲ್ಲಿ ನಗೆಯ ಗೆರೆಯೊಂದು ಸುಳಿದು ಮಾಯವಾಯಿತು. ಸಿಕಂದರ್‌ ಅದನ್ನು ಗಮನಿಸಿದ. ನಗುವಿನ ಕಾರಣ ವಿಚಾರಿಸಿದ. ಸೈನಿಕ ಕೈಜೋಡಿಸಿ ಹೇಳಿದ “ದೊರೆಯೇ, ತಪ್ಪಾದರೆ ಕ್ಷಮಿಸಬೇಕು. ಪುಟ್ಟ ಇರುವೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದೆಂದು ತಾವು ಸೇನೆಯ ಪಥವನ್ನೇ ಬದಲಾಯಿಸಲು ಆಜಾnಪಿಸಿದಿರಿ. ಆದರೆ ಪುಟ್ಟದೇಶವೊಂದರ ದೇಶಾಭಿಮಾನಿಗಳ ದಮನಕ್ಕೆ ದೊಡ್ಡ ಸೇನೆಯೊಂದಿಗೆ ಸಾಗುತ್ತಿರುವುದು ತಮಾಷೆ ಅನ್ನಿಸಿತು. ಅದಕ್ಕೆ ಸಣ್ಣಗೆ ನಗು ಬಂತು’ ಎಂದು ಹೇಳಿದ. ಈ ಮಾತು ಸಿಕಂದರನ ಹೃದಯವನ್ನು ಈಟಿಯಂತೆ ಇರಿಯಿತು. ಮಂಜಿನಂತೆ ಕೊರೆಯಿತು. ಅವನು ಸೈನಿಕನೆದುರು ಮೊಣಕಾಲೂರಿದ. “ನೀನು ಸಾಮಾನ್ಯ ಸೈನಿಕ ಅಲ್ಲವಪ್ಪಾ… ನನ್ನ ತಪ್ಪನ್ನು ಎತ್ತಿ ತೋರಿಸಿ ನನ್ನ ಕಣ್ತೆರೆಸಿದೆ. ನಿಜ. ಅವರ ಹಕ್ಕನ್ನು ನಾವು ದಮನ ಮಾಡಬಾರದು. ಹಿಂತಿರುಗೋಣ. ಆ ದೇಶದವರ ರಾಷ್ಟ್ರಪ್ರೇಮವನ್ನು ಗೌರವಿಸೋಣ’ ಎಂದು ಹೇಳಿದ. ಹೀಗೆ ಇರುವೆಗಳಿಂದಾಗಿ ಒಂದು ದೊಡ್ಡ ಅನಾಹುತ ನಡೆಯುವುದು ತಪ್ಪಿತು.

– ವಿಹಾನ್‌, ಬೆಳ್ತಂಗಡಿ 

ಟಾಪ್ ನ್ಯೂಸ್

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.