ಚಂದಿರನೇತಕೆ ಬೆಳೆಯುವನಮ್ಮ?

ಸೂಪರ್‌ ಡೂಪರ್‌ ಮೂನ್‌

Team Udayavani, Oct 24, 2019, 4:24 AM IST

q-2

ಆಗಸದ ಚಂದ್ರನಿಗೂ ಬೆಳವಣಿಗೆ ಇದೆ. ಅವನು ದೊಡ್ಡವನಾಗುತ್ತಾನೆ, ಚಿಕ್ಕವನಾಗುತ್ತಾನೆ. ತುಂಬಾ ದೊಡ್ಡವನಾದಾಗ ಅವನನ್ನು ಸೂಪರ್‌ ಮೂನ್‌ ಎಂದು ಕರೆಯುತ್ತಾರೆ.

ಚಂದ್ರನನ್ನು ಕಂಡರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಪ್ರಿಯವಾದವನು ಚಂದ್ರ. ಮಕ್ಕಳಿಗೆ ಊಟ ಮಾಡಿಸುವ ನೆಪದಲ್ಲಿ ತಾವೂ ನೋಡಿ ಖಷಿ ಪಡುವರು. ಮಕ್ಕಳಂತೂ ದುಂಡನೆಯ ಚಂದಿರನ ನೋಡುತ್ತಾ ಅತ್ತಲಿಂದ ಇತ್ತ ಓಡುತ್ತಾ ಚಂದ್ರ ತಮ್ಮನ್ನೇ ಹಿಂಬಾಲಿಸುತ್ತಿ¨ªಾನೆಂದು ಅವರು ಪಡುವ ಖುಷಿಯಂತೂ ಹೇಳತೀರದು…

ಚಂದ್ರನ ಹುಟ್ಟು
ಭೂಮಿಯನ್ನು ಹೊರತುಪಡಿಸಿದರೆ ಮಾನವ ನಡೆದಾಡಿರುವ ಏಕೈಕ ಆಕಾಶಕಾಯ ಎಂದರೆ ಚಂದ್ರ. ವಿಶ್ವದ ಉಗಮಕ್ಕೆ ಕಾರಣವಾಯ್ತು ಎನ್ನಲಾದ ಮಹಾನ್ಪೋಟ(ಬಿಗ್‌ ಬ್ಯಾಂಗ್‌) ನಂತರ ಮಂಗಳ ಗ್ರಹದಷ್ಟು ದೊಡ್ಡ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಿತ್ತು. ಆಗ ಸಿಡಿದ ಸಿಡಿದ ಚೂರುಗಳೆಲ್ಲ ಒಂದುಗೂಡಿ ಆಕಾಶಕಾಯವೊಂದು ನಿರ್ಮಿತವಾಯಿತು. ಅದುವೇ ಚಂದ್ರ.

ಅವನು ರಾತ್ರಿಯ ಹೊತ್ತು ಬೆಳ್ಳಗೆ ಕಾಣುತ್ತಾನೆ. ಅಷ್ಟುಮಾತ್ರಕ್ಕೆ ಚಂದ್ರನ ಬಣ್ಣ ಬಿಳಿ ಎಂದು ತಿಳಿಯಬೇಡಿ. ನಾವು ಕಾಣುವ ಬಿಳಿ ಬೆಳಕು ಚಂದ್ರನದಲ್ಲ, ಸೂರ್ಯನದು. ಸೂರ್ಯನ ಬೆಳಕನ್ನು ಚಂದ್ರ ಪ್ರತಿಫ‌ಲಿಸುವ ಕಾರಣಕ್ಕೆ ನಮಗೆ ಬೆಳ್ಳಗೆ ಕಾಣುತ್ತಾನೆ.

ಕಾರಣ ಏನು ಗೊತ್ತಾ?
ಚಂದ್ರ ಯಾವತ್ತಿಗೂ ಸೂಪರ್‌. ಆದರೆ ಸೂಪರ್‌ ಮೂನ್‌ ಎಂದರೆ ಅದಲ್ಲ. ಪ್ರತಿ ಹುಣ್ಣಿಮೆಯ ಸಮಯದಲ್ಲಿ ನಾವು ನೋಡುವ ಚಂದ್ರನ ಗಾತ್ರ ಮಾಮೂಲಿಗಿಂತ 14 ಪಟ್ಟು ದೊಡ್ಡದಾಗಿರುತ್ತದೆ. ಅಲ್ಲದೆ, ಬೆಳಕು ಕೂಡ ಮೂವತ್ತು ಪಟ್ಟು ಜಾಸ್ತಿ ಇರುತ್ತದೆ. ಈ ಸಮಯದಲ್ಲಿ ಚಂದ್ರನನ್ನು ಸೂಪರ್‌ ಮೂನ್‌ ಎಂದು ಕರೆಯುತ್ತಾರೆ. ಚಂದ್ರನ ಪಥ ಅಂಡಾಕಾರವನ್ನು ಹೊಂದಿದೆ. ಹೀಗಾಗಿ ಪಥದ ಒಂದು ಕಡೆ ಚಂದ್ರ ಭೂಮಿಗೆ ಹತ್ತಿರವಾಗುತ್ತಾನೆ. ಹತ್ತಿರ ಬರುವುದರಿಂದ ಹೆಚ್ಚು ಪ್ರಕಾಶಮಾನವಾಗಿಯೂ ಕಾಣಿಸಿಕೊಲ್ಲುತ್ತಾನೆ. ಚಂದ್ರ ಭೂಮಿಗೆ ಹತ್ತಿರವಾಗುವ ಖಗೋಳ ವಿದ್ಯಮಾನಕ್ಕೆ “ಪೆರಿಜಿ ಸೈಗಿ’ ಎಂದೂ, ದೂರ ಹೋಗುವುದಕ್ಕೆ “ಅಪೋಜಿ’ ಎಂದೂ ಕರೆಯುವರು. ಹತ್ತಿರ ಬಂದಾಗ ವಸ್ತು ದೊಡ್ಡದಾಗಿ ಕಾಣುತ್ತದೆ, ದೂರ ಹೋಗುವ ವಸ್ತು ಚಿಕ್ಕದಾಗಿ ಕಾಣುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಚಂದ್ರ ದೊಡ್ಡದಾಗುವುದಕ್ಕೂ, ನಂತರ ಚಿಕ್ಕದಾಗುವುದಕ್ಕೂ ಅದೇ ಕಾರಣ.

ಚಂದ್ರನಿಗೆ ಎರಡು ಮುಖವುಂಟು
ಅಚ್ಚರಿಯ ವಿಷಯ ಗೊತ್ತಾ ನಾವು ಯಾವಾಗಲೂ ಕಾಣುವುದು ಚಂದ್ರನ ಒಂದೇ ಬದಿಯ ಮುಖ. ಇನ್ನೊಂದು ಬದಿಯ ಮುಖ ಕತ್ತಲಿನಲ್ಲಿ ಮರೆಯಾಗಿರುತ್ತದೆ. ಚಂದ್ರನ ಇನ್ನೊಂದು ಬದಿಯನ್ನು ಕಾಣಲು ಸಾಧ್ಯವಾಗಿದ್ದು ಅದರತ್ತ ಉಪಗ್ರಹ ಬಿಟ್ಟಾಗಲೇ. 1959ರಲ್ಲಿ ರಷ್ಯಾ ಹಾರಿಬಿಟ್ಟ ಲೂನಾ 3 ಉಪಗ್ರಹ ಚಂದ್ರನ ಇನ್ನೊಂದು ಬದಿಗೆ ಪ್ರಯಾಣಿಸಿ ಅದರ ಛಾಯಾಚಿತ್ರವನ್ನು ಸೆರೆಹಿಡಿದು ಭೂಮಿಗೆ ಕಳಿಸಿತ್ತು. ನಾವು ಚಂದ್ರನ ಹಿಮ್ಮುಖವನ್ನು ಕಂಡಿದ್ದು ಅದೇ ಮೊದಲು.

– ಅರ್ಚನಾ ಎಚ್‌.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.