ಅತಿಮಾನುಷ ಸಮುರಾಯ್ ಪಟು
Team Udayavani, Jun 6, 2019, 6:10 AM IST
ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್, ಬ್ಯಾಟ್‌ಮ್ಯಾನ್‌ನಂಥ ಕಾಲ್ಪನಿಕ ಹೀರೋಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಇವೆಲ್ಲ ಕಾಲ್ಪನಿಕ. ನಿಜ ಜೀವನದಲ್ಲಿ ಇವೆÇÉಾ ಸಾಧ್ಯವಾ? ಅತಿಮಾನುಷ ಶಕ್ತಿ ಇರುವವರು ನಮ್ಮ ನಡುವೆ ಇಲ್ಲವಾದರೂ, ಸಾಮಾನ್ಯ ಮನುಷ್ಯರಿಗೆ ಸಾಧ್ಯವಾಗದ ಕೆಲಸಗಳನ್ನು ಮಾಡಬಲ್ಲ ಸಾಮರ್ಥ್ಯ ಇರುವಾತ ಒಬ್ಬ ಇದ್ದಾನೆ. ಆತನ ಹೆಸರು ಇಸಾವೊ ಮಾಚಿ. ಮೂಲತಃ ಜಪಾನಿನವನು. ಈತನನ್ನು ಪ್ರಪಂಚ ಗುರುತಿಸುವುದು ಆಧುನಿಕ ಸಮುರಾಯ್ (Modern Samurai) ಭಟ ಎಂಬ ಹೆಸರಿನಿಂದ. ಸಮುರಾಯ್ ಜಪಾನಿ ಸಮರ ಕಲೆಯಾಗಿದೆ. ಅದರಲ್ಲಿ ಖಡ್ಗ ಹಿಡಿದು ಹೋರಾಡುವ ಪರಿಣತಿಗಳನ್ನು ಕಲಿಸಲಾಗುತ್ತದೆ. ಈತನ ಸಾಧನೆಗಳನ್ನು ನೋಡಿದರೆ ಮೂಗಿನ ಮೇಲೆ ಬೆರಳು ಇಡುವ ಹಾಗಿರುತ್ತದೆ. ಈತ ಸಮುರಾಯ್ ಪಟುವಾದರೂ ಅದಕ್ಕಿಂತ ಹೆಚ್ಚಿನ ಸಾಧನೆ, ಪರಿಣತಿಯನ್ನು ಸಾಧಿಸಿದ್ದಾನೆ.
ಬುಲೆಟ್ ಪೀಸ್ ಪೀಸ್
ಬುಲೆಟ್‌ಅನ್ನು ತುಂಡು ಮಾಡಬಲ್ಲಿರಾ? ಟೇಬಲ್ ಮೇಲೆ ಇಟ್ಟ ಬುಲೆಟ್‌ಅನ್ನು ಯಾವುದಾದರೂ ಆಯುಧ ಬಳಸಿ ಕತ್ತರಿಸಬಹುದು. ಆದರೆ ಪಿಸ್ತೂಲಿನಿಂದ ಹೊರಟ ಬುಲೆಟ್‌ಅನ್ನು ತುಂಡರಿಸಬಲ್ಲಿರಾ? ಅದು ಕಣ್ಣಿಗೆ ಕಾಣುವುದೇ ಇಲ್ಲ ಎನ್ನುವುದನ್ನು ಗಮನದಲ್ಲಿಡಿ. ಆ ಕೆಲಸವನ್ನು ಮಾಡಬಲ್ಲ ಇಸಾವೊ. ಪ್ರತಿ ಸೆಕೆಂಡಿಗೆ 550 ಅಡಿ ಬಿರುಸಿನಿಂದ ಬರುವ ಗುಂಡನ್ನು ಗಾಳಿಯಲ್ಲಿಯೇ ಎರಡು ತುಂಡು ಮಾಡಬಲ್ಲನು. ಈತನ ಖಡ್ಗದ ಚಲನೆಯನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ.
ಕ್ಯಾಮೆರಾ ಕೂಡಾ ಕುರುಡಾಗುತ್ತದೆ
ಈತನ ಖಡ್ಗದ ಪಟ್ಟನ್ನು ಬರಿಗಣ್ಣಿಗೆ ನೋಡಲು ಸಾಧ್ಯವಿಲ್ಲ. ಎಷ್ಟು ವೇಗವಾಗಿ ಖಡ್ಗವನ್ನು ಬೀಸುತ್ತಾನೆ ಎಂದರೆ ಕ್ಯಾಮೆರಾ ಕೂಡಾ ಆ ಚಲನೆಯನ್ನು ಹಿಡಿದಿಡಲು ಸೋಲುತ್ತದೆ. ಅದಕ್ಕೆಂದೇ ವಿಶೇಷ ಕ್ಯಾಮೆರಾವನ್ನು ಬಳಸಿ ಆತನ ಕತ್ತಿಯ ಚಲನೆಯನ್ನು ಚಿತ್ರೀಕರಿಸಲಾಗಿದೆ. ಹಾಗೂ ಈತ ಪ್ರತಿ ಗಂಟೆಗೆ 820 ಕಿ.ಮೀ ವೇಗದಲ್ಲಿ ಬರುವ ಟೆನ್ನಿಸ್ ಬಾಲ್‌ಅನ್ನು ಕೂಡಾ ಕಣ್ಮುಚ್ಚಿ ತೆಗೆಯುವುದರೊಳಗೆ ಕತ್ತರಿಸಿದ್ದಾನೆ. ಬೇರೆ ಬೇರೆ ದಾಖಲೆಗಳನ್ನು ನಿರ್ಮಿಸಿ ಈಗಾಗಲೇ ಗಿನ್ನೆಸ್ ರೆಕಾರ್ಡ್‌ನಲ್ಲಿ ಹೆಸರು ಹೊಂದಿ¨ªಾನೆ.
ತಲೆಬುರುಡೆಗಳ ಗುಹೆ
ಪಪುವಾ ನ್ಯೂ ಗಿನಿಯಾದ, ಮಿಲೆ°à ಬೇ ಪ್ರಾಂತ್ಯದಲ್ಲಿ ಒಂದು ಗುಹೆ ಇದೆ. ಅದರ ಹೆಸರು ತವಾಲಿ ಗುಹೆ. ಸ್ಥಳೀಯರು ಇದನ್ನು “ತಲೆಬುರುಡೆ ಗುಹೆ’ ಎಂದು ಕರೆಯುತ್ತಾರೆ. ಇÇÉೊಂದು ಪ್ರಾಚೀನ ಕಾಲದ ವಿಶಿಷ್ಟ ಆಚರಣೆ ಇದ್ದು ಆ ಮೂಲಕ ಗುಹೆಯು ಪ್ರಸಿದ್ಧಿಗೆ ಬಂದಿದೆ. ಅಲ್ಲಿ ಪ್ರೀತಿಪಾತ್ರರು, ಹತ್ತಿರದ ಸಂಬಂಧಿಗಳು ಸಾವನ್ನಪ್ಪಿದರೆ ಅವರನ್ನು ಮಲಗಿಸಿ ದೇಹವನ್ನು ಹೂಳದೆ ನೇರಕ್ಕೆ ನಿಲ್ಲಿಸಿ ಹೂಳುತ್ತಾರೆ.
ಹೂಳುವ ಮೊದಲು ಅವರ ತಲೆಯ ಮೇಲೆ ಮಣ್ಣಿನ ಮಡಿಕೆಯನ್ನು ಮುಚ್ಚಿ ಕೇವಲ ದೇಹವನ್ನಷ್ಟೇ ಹೂಳುತ್ತಾರೆ. ಕೆಲವು ದಿನಗಳ ನಂತರ ಶರೀರದ ಅಸ್ಥಿಪಂಜರದಿಂದ ತಲೆಯನ್ನು ಬೇರ್ಪಡಿಸಿ ಅದಕ್ಕಾಗಿಯೇ ಮೀಸಲಾಗಿರುವ ತಲಾವಿ ಗುಹೆಯಲ್ಲಿ ಇರಿಸುತ್ತಾರೆ.
– ಪುರುಷೋತ್ತಮ್ ವೆಂಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Forest: ರಿಲೀಸ್ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.