ಮನಸ್ಸಿನಲ್ಲಿರೋ ನಂಬರ್ ಹೇಳಿ!
Team Udayavani, Jan 4, 2018, 11:10 AM IST
ಮೊಟ್ಟೆ, ಕಾರ್ಡ್, ನಾಣ್ಯ, ನೀರು, ಪೆನ್ಸಿಲ್…ಇತ್ಯಾದಿಗಳನ್ನು ಬಳಸಿಕೊಂಡು ಜಾದೂ ಮಾಡೋದು ಗೊತ್ತಲ್ವಾ? ಆದ್ರೆ, ಇವ್ಯಾವುದೂ ಇಲ್ಲದೆ ಕೇವಲ ಅಂಕಿ-ಸಂಖ್ಯೆಗಳನ್ನು ಬಳಸಿಕೊಂಡೇ ಜಾದೂಗಾರ ಅನ್ನಿಸಿಕೊಳ್ಳಬಹುದು. ನಿನ್ನ ಮನಸ್ಸಿನ “ಲೆಕ್ಕಾಚಾರ’ವನ್ನು ನಾನು ಬಲ್ಲೆ ಅಂತ ಬೀಗುತ್ತಾ, ಗೆಳೆಯರ ಮುಂದೆ “ಗಣಿತಜ್ಞ’ನಾಗಿ ಮಿಂಚಬಹುದು. ಅಂಥದ್ದೊಂದು ಗಣಿತದ ಮ್ಯಾಜಿಕ್ ಇಲ್ಲಿದೆ.
ಸಂಖ್ಯೆಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಲು ಗೊತ್ತಿದ್ದರೆ, ಈ ಮ್ಯಾಜಿಕ್ ಸುಲಭವಾಗಿ ಮಾಡಬಹುದು.
ಪ್ರದರ್ಶನ: ಜಾದೂಗಾರ ಒಬ್ಬ ಪ್ರೇಕ್ಷಕನನ್ನು ಮುಂದೆ ಕರೆದು ಈ ಕೆಳಗಿನ ಸೂಚನೆಗಳನ್ನು ಕೊಡುತ್ತಾನೆ.
1. ಯಾವುದಾದರೂ ಒಂದು ಸುಲಭದ ನಂಬರ್ ಅನ್ನು ಮನಸ್ಸಿನಲ್ಲಿ ಯೋಚಿಸು.
2. ಆ ಸಂಖ್ಯೆಯನ್ನು 2ರಿಂದ ಗುಣಿಸು
3. ಸಿಗುವ ಉತ್ತರಕ್ಕೆ 10ಅನ್ನು ಸೇರಿಸು.
4. ಆ ಸಂಖ್ಯೆಯನ್ನು 2ರಿಂದ ಭಾಗಿಸು. ಈಗ ಸಿಗುವ ಸಂಖ್ಯೆಯನ್ನು ಪ್ರೇಕ್ಷಕನಿಂದ ಕೇಳಿ ತಿಳಿದುಕೊಳ್ಳಿ.
5. ಜಾದೂಗಾರ ಪ್ರೇಕ್ಷಕ ಊಹಿಸಿದ ಸಂಖ್ಯೆಯನ್ನು ಸರಿಯಾಗಿ ಹೇಳುತ್ತಾನೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಮೂರನೆಯ ಹಂತದಲ್ಲಿ. ಈ ಹಂತದಲ್ಲಿ ನೀವು ಯಾವುದೇ ಸಮಸಂಖ್ಯೆಯನ್ನು ಸೇರಿಸಲು ಹೇಳಬಹುದು. ನೀವು ಯಾವ ಸಮ ಸಂಖ್ಯೆಯನ್ನು ಸೇರಿಸಲು ಹೇಳುವಿರೋ, ಅದರ ಅರ್ಧವನ್ನು “y” ಎಂದು ಕರೆಯೋಣ. ಇದನ್ನು ನೀವು ನೆನಪಿಟ್ಟುಕೊಳ್ಳಿ. ಈಗ 4ನೇ ಹಂತದ ಕೊನೆಯಲ್ಲಿ ಸಿಗುವ ಉತ್ತರವನ್ನು ಪ್ರೇಕ್ಷಕನಿಂದ ಕೇಳಿ ತಿಳಿದುಕೊಳ್ಳಿ. ಈ ಸಂಖ್ಯೆಯನ್ನು “y” ನಿಂದ ಕಳೆದರೆ ಪ್ರೇಕ್ಷಕ ಊಹಿಸಿದ ಸಂಖ್ಯೆ ಸಿಗುತ್ತೆ.
ಉದಾಹರಣೆ: 1. ಪ್ರೇಕ್ಷಕ ಊಹಿಸಿದ ನಂಬರ್- 15
2. 15×2=30
3. 30+12=42 (12ನ್ನು ಸೇರಿಸಲಾಗಿದೆ, ಹಾಗಾಗಿ y=6)
4. 42/2=21
5. 21ರನ್ನು yದಿಂದ ಮನಸ್ಸಿನಲ್ಲೇ ಕಳೆಯಿರಿ 21 - 6 = 15. ಪ್ರೇಕ್ಷಕ ಊಹಿಸಿದ ಸಂಖ್ಯೆ 15
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.