ನೋಡದೇ ಬಣ್ಣ ಹೇಳುವುದು
Team Udayavani, Dec 12, 2019, 4:39 AM IST
ಮ್ಯಾಜಿಕ್ ಪ್ರದರ್ಶನಕ್ಕೆ ಬಂದವರನ್ನು ನಿಮ್ಮ ಕಡೆ ಸೆಳೆಯಬೇಕು. ಅದಕ್ಕೆ ಏನು ಮಾಡ್ತೀರ? ತಲೆ ಬಿಸಿ ಬೇಡ. ಹೀಗೆ ಮಾಡಿ, ನೀವು ಮ್ಯಾಜಿಕ್ ಪ್ರದರ್ಶನವನ್ನು ನೀಡುತ್ತಿರುವಾಗ ಪ್ರೇಕ್ಷಕರೆದುರು ನಿಮಗೆ ಯಾವುದೇ ವಸ್ತುವನ್ನು ನೋಡದೇ ಅದರ ಬಣ್ಣವನ್ನು ಹೇಳುವ ವಿಶೇಷ ಶಕ್ತಿ ಇದೆ ಅಂತ ಒಂದು ಡೈಲಾಗ್ ಬಿಡಿ. ಇದನ್ನು ಮಾಡಿ ತೋರಿಸಲು ಪ್ರೇಕ್ಷಕರಲ್ಲಿ ಒಬ್ಬರನ್ನು ವೇದಿಕೆಗೆ ಕರೆಯಿರಿ. ಅವರಿಗೆ ಬೇರೆ ಬೇರೆ ಬಣ್ಣದ ಕ್ರೇಯಾನ್ ಇರುವ ಪಾಕೆಟ್ ಕೊಟ್ಟು ಯಾವುದಾದರೂ ಒಂದು ಬಣ್ಣದ ಕ್ರೇಯಾನನ್ನು ತೆಗೆದುಕೊಂಡು ನಿಮ್ಮ ಕೈಗೆ ಕೊಡಬೇಕೆಂದು ಅವರಿಗೆ ಹೇಳಿ. ಆದರೆ, ಆತ ಇದನ್ನು ಮಾಡುವಾಗ ನೀವು ಪ್ರೇಕ್ಷಕರ ಕಡೆ ಬೆನ್ನು ಹಾಕಿ, ಎರಡೂ ಕೈಗಳನ್ನು ನಿಮ್ಮ ಬೆನ್ನ ಹಿಂದೆ ಹಿಡಿದು ನಿಲ್ಲಬೇಕು. ಅಂದರೆ, ಕ್ರೇಯಾನಿನ ಬಣ್ಣವನ್ನು ನೀವು ನೋಡುವಂತಿಲ್ಲ. ಆತ ಅದನ್ನು ಇಟ್ಟ ತಕ್ಷಣ ನೀವು ಪ್ರೇಕ್ಷಕರ ಕಡೆ ತಿರುಗಿ ನಿಮ್ಮ ಬಲಗೈಯನ್ನು ಮುಂದೆ ತಂದು ಆ ಪ್ರೇಕ್ಷಕ ಸಹಾಯಕನ ಹಣೆಯ ಮೇಲೆ ಹೆಬ್ಬೆರಳನ್ನು ಒತ್ತಿ ಹಿಡಿದು ಕ್ರೇಯಾನಿನ ಬಣ್ಣವನ್ನು ಕರಾರುವಾಕ್ಕಾಗಿ ಹೇಳಿ, ನೀವು ಹೀಗೆ ಹೇಳುತ್ತಿದ್ದಂತೆಯೇ ಎಲ್ಲರಲ್ಲೂ ಅಚ್ಚರಿ ಮೂಡಿ ಮೂಗಿನ ಮೇಲೆ ಬೆಳ್ಳು ಇಟ್ಟುಕೊಂಡಿರುತ್ತಾರೆ.
ಇದರ ರಹಸ್ಯ ಇಷ್ಟೆ: ಸಹಾಯಕ ಕ್ರೇಯಾನನ್ನು ನಿಮ್ಮ ಕೈಯಲ್ಲಿ ಇಟ್ಟ ತಕ್ಷಣ ನೀವು ಪ್ರೇಕ್ಷಕರ ಕಡೆ ತಿರುಗಿ. ಆದರೆ, ಈ ಸಮಯದಲ್ಲಿ ನಿಮ್ಮ ಬಲಗೈಯ ಹೆಬ್ಬೆರಳ ಉಗುರುರಿನಿಂದ ಕ್ರೇಯಾನನ್ನು ಸ್ವಲ್ಪವೇ ಕೆರೆಯಿರಿ. ಈಗ ಅದರ ಬಣ್ಣ ನಿಮ್ಮ ಉಗುರ ತುದಿಗೆ ತಾಗಿರುತ್ತದೆ. ತಕ್ಷಣವೇ ಕ್ರೇಯಾನನ್ನು ನಿಮ್ಮ ಎಡಗೈಗೆ ವರ್ಗಾಯಿಸಿ. ಎಡಗೈ ಬೆನ್ನ ಹಿಂದೆಯೇ ಇರಲಿ. ನಿಮ್ಮ ಬಲಗೈ ಹೆಬ್ಬೆರಳನ್ನು ಸಹಾಯಕನ ಹಣೆಗೆ ಒತ್ತಿ ಹಿಡಿದಾಗ ಬಣ್ಣ ಯಾವುದೆಂದು ನೋಡಿ ಗಟ್ಟಿಯಾಗಿ ಹೇಳಿ.
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.