ಹುಲಿಗಳಿಗೊಂದು ದೇವಾಲಯ!


Team Udayavani, Jul 13, 2017, 11:15 AM IST

CHINNARY-2.jpg

ನೀವು ಇಲ್ಲಿರುವ ನೂರಾರು ಹುಲಿಗಳೊಂದಿಗೆ ಬೆರೆತು ಆಟವಾಡಬಹುದು. ಹುಲಿಗಳ ಜೊತೆ ವಾಕಿಂಗ್‌ ಮಾಡಬಹುದು. ಅಷ್ಟೇ ಏಕೆ ? ಅವುಗಳನ್ನು ಅಪ್ಪಿ, ಮುದ್ದಾಡಬಹುದು. ಅವುಗಳು ನಿಮಗೇನೂ ತೊಂದರೆ ಕೊಡುವುದಿಲ್ಲ. ಬದಲಿಗೆ ನಿಮ್ಮ ಜೊತೆ ಅವುಗಳೂ ಸಹ ಅಟವಾಡುತ್ತವೆ! ಇಂಥ ವಿಶೇಷ ಅನುಭವ ಪಡೆಯಲು ಥಾಯ್‌ಲೆಂಡಿಗೆ ಭೇಟಿ ನೀಡಬೇಕು. ಏಕೆಂದರೆ ಅಲ್ಲೇ ಇರೋದು “ಟೈಗರ್‌ ಟೆಂಪಲ…’!

ಥಾಯ್‌ಲೆಂಡಿನ ಸಾಯೋಕ್‌ ಜಿಲ್ಲೆಯಲ್ಲಿ 1994ರಲ್ಲಿ ಈ ಹುಲಿಗಳ ದೇವಸ್ಥಾನ ಸ್ಥಾಪನೆಗೊಂಡಿತ್ತು. ಈ ವನ್ಯಧಾಮದ ತುಂಬೆಲ್ಲಾ ವಿವಿಧ ಪ್ರಭೇದಗಳ ನೂರಾರು ಹುಲಿಗಳದೇ ದರ್ಬಾರು. ಇಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಇಲ್ಲಿನ ಹುಲಿಗಳ ಜೊತೆ ಆಟವಾಡುತ್ತಾ, ಮುದ್ದಿಸುತ್ತಾ ಅವುಗಳ ಮೈದಡವುತ್ತಾರೆ. ಇಲ್ಲಿ ಮಕ್ಕಳಾದಿಯಾಗಿ ಮುದುಕರೂ ಸಹ ಹುಲಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂತಸ ಪಡುತ್ತಾರೆ. 

ಈ ಟೈಗರ್‌ ಟೆಂಪಲ್‌ ಒಂದೊಮ್ಮೆ ಬೌದ್ಧ ದೇವಾಲಯವಾಗಿತ್ತು. ಪಕ್ಕದ ಹಳ್ಳಿಯ ಜನರು ಈ ದೇವಾಲಯಕ್ಕೆ ಹುಲಿಮರಿಯೊಂದನ್ನು ಕೊಡುಗೆಯಾಗಿ ನೀಡಿದರಂತೆ. ಅಲ್ಲಿಂದ ಈ ಬೌದ್ಧ ದೇವಾಲಯದ ಜೊತೆಗೆ ಹುಲಿಯ ನಂಟು ಪ್ರಾರಂಭಗೊಂಡಿತ್ತು. ಆದರೆ ದುರ್ದೈವವಶಾತ್‌ ಆ ಹುಲಿಮರಿ ತುಂಬಾ ದಿನ ಬದುಕುಳಿಯಲಿಲ್ಲ. ಆಮೇಲೆ ಗ್ರಾಮಸ್ಥರು ತಾಯಿಯಿಲ್ಲದೆ ತಬ್ಬಲಿಯಾಗಿದ್ದ ಅನೇಕ ಹುಲಿ ಮರಿಗಳನ್ನು ಬೌದ್ಧಾಶ್ರಮಕ್ಕೆ ನೀಡಿದರಂತೆ. ಅವೇ ಇಲ್ಲಿಯವರೆಗೂ ಬೆಳೆದುಕೊಂಡು ಬಂದಿರುವುದು. ಈಗ ಈ ಟೈಗರ್‌ ಟೆಂಪಲ್‌ನಲ್ಲಿ ಸುಮಾರು 150 ಹುಲಿಗಳಿವೆ. ಅವುಗಳಲ್ಲಿ ಇಂಡೋ ಚೈನೀಸ್‌ ಹುಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.

ಈ ತಾಣದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಸ್ಥಳಕ್ಕೆ ಹೋಗಲು ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ನಿಗದಿತ ಶುಲ್ಕ ತೆತ್ತು ಪ್ರವಾಸಿಗರು ಹುಲಿಯನ್ನು ಅತಿ ಸಮೀಪದಿಂದ ನೋಡಬಹುದು. ಮಾತ್ರವಲ್ಲ ಇಷ್ಟು ದಿನ ನ್ಯಾಷನಲ್‌ ಜಿಯೋಗ್ರಫಿ ಚಾನೆಲ್ಲುಗಳಲ್ಲಿಯೋ, ಮೃಗಾಲಯದಲ್ಲಿಯೋ ದೂರದಿಂದ ನೋಡುತ್ತಿದ್ದ ಹುಲಿಗಳ ಮೈದಡವಿ ಖುಷಿಯನ್ನೂ ಪಡೆಯಬಹುದು. ಆದರೆ ಅಲ್ಲಿ ನೀಡುವ ಸೂಚನೆಗಳನ್ನು ಪಾಲಿಸಲು ಮರೆಯಬಾರದು. ಅಲ್ಲಿನ ಹುಲಿಗಳು ಈ ಮನುಷ್ಯರೊಂದಿಗೆ ಬೆರೆತು ಎಷ್ಟೇ ಸಾಧುತನವನ್ನು ಮೈಗೂಡಿಸಿಕೊಂಡಿದ್ದರೂ ಎಚ್ಚರಿಕೆ ವಹಿಸಲೇಬೇಕು. 

ದೇವಾಲಯದಲ್ಲಿರುವ ಬೌದ್ಧ ಸನ್ಯಾಸಿಗಳು ಇಲ್ಲಿನ ಹುಲಿಗಳನ್ನು ನೋಡಿಕೊಳ್ಳುತ್ತಾರೆ. ಅವರು ಅವನ್ನು ವಾಕಿಂಗ್‌ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ.

ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.