ಇದೇ ಆ ಕಾರ್ಡ್!
ಇಸ್ಪೀಟ್ ಮ್ಯಾಜಿಕ್
Team Udayavani, May 30, 2019, 6:00 AM IST
ಜಾದೂಗಾರ ಇಸ್ಪೀಟ್ ಕಾರ್ಡ್ಗಳನ್ನು ಪ್ಯಾಕಿನಿಂದ ಹೊರ ತೆಗೆದು ಕಾರ್ಡುಗಳ ಬೆನ್ನು ಮೇಲಿರುವಂತೆ ಹರಡಿ ಯಾವುದಾದರೂ ಒಂದು ಕಾರ್ಡನ್ನು ಆರಿಸಿಕೊಳ್ಳಲು ಪ್ರೇಕ್ಷಕರಲ್ಲೊಬ್ಬನಿಗೆ ಹೇಳುತ್ತಾನೆ. ಆ ಕಾರ್ಡನ್ನು ಜಾದೂಗಾರನಿಗೆ ತೋರಿಸದೆ ಉಳಿದ ಪ್ರೇಕ್ಷಕರಿಗೆ ತೋರಿಸಿ ಉಳಿದ ಕಾರ್ಡ್ಗಳ ನಡುವೆ ಎಲ್ಲೋ ಇಡುತ್ತಾನೆ. ಜಾದೂಗಾರ ತಕ್ಷಣ ಆ ಕಾರ್ಡನ್ನು ತೆಗೆದು ತೋರಿಸಿದಾಗ ಪ್ರೇಕ್ಷಕರು ದಂಗಾಗುತ್ತಾರೆ.
ರಹಸ್ಯ:
ಇಸ್ಪೀಟ್ ಪ್ಯಾಕಿನಲ್ಲಿ 26 ಕಪ್ಪು ಕಾರ್ಡುಗಳು ಮತ್ತು 26 ಕೆಂಪು ಕಾರ್ಡುಗಳಿರುತ್ತವೆ. ಕಪ್ಪು ಕಾರ್ಡುಗಳ ಮೇಲೆ ಕೆಂಪು ಕಾರ್ಡುಗಳನ್ನು ಇಟ್ಟು ಮೊದಲೇ ಪ್ಯಾಕನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರೇಕ್ಷಕರಲ್ಲಿ ಒಬ್ಬನನ್ನು ವೇದಿಕೆಗೆ ಕರೆಯಿರಿ. ಪ್ಯಾಕಿನಿಂದ ಕಾರ್ಡುಗಳನ್ನು ತೆಗೆದು ಬೆನ್ನು ಮೇಲೆ ಕಾಣಿಸುವಂತೆ ಹಿಡಿಯಿರಿ. ಈಗ ಮೇಲಿನ ಇಪ್ಪತ್ತಾರು ಕಾರ್ಡುಗಳು ಕಪ್ಪು ಕಾರ್ಡುಗಳಾಗಿದ್ದು ಕೆಳಗಿನ ಇಪ್ಪತ್ತಾರು ಕಾರ್ಡುಗಳು ಕೆಂಪು ಕಾರ್ಡ್ಗಳಾಗಿರುತ್ತವೆ. ಅವುಗಳನ್ನು ಕೈಯಲ್ಲಿ ಹರಡಿ ಆತನಿಗೆ ಯಾವುದಾದರೂ ಒಂದು ಕಾರ್ಡನ್ನು ತೆಗೆದುಕೊಳ್ಳಲು ಹೇಳಿ. ಈಗ ಆತ ಮೇಲಿನ ಇಪ್ಪತ್ತಾರು ಕಾರ್ಡುಗಳಲ್ಲಿ ಒಂದನ್ನು ಮಾತ್ರ ಆರಿಸುವಂತೆ ಜಾಗ್ರತೆ ವಹಿಸಿ. ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿದ ನಂತರ ಅದನ್ನು ನಿಮ್ಮ ಕೈಯಲ್ಲಿರುವ ಕಾರ್ಡ್ಗಳ ನಡುವೆ ತನಗೆ ತೋಚಿದಲ್ಲಿ ಇಡಲು ಹೇಳಿ. ಈಗ ಆತ ಕೆಳಗಿನ ಇಪ್ಪತ್ತಾರು ಕಾರ್ಡುಗಳ ನಡುವೆ ಅದನ್ನು ಇಡುವಂತೆ ಜಾಗ್ರತೆ ವಹಿಸಬೇಕು. ಕಾರ್ಡುಗಳು ಕಾಣುವಂತೆ ಹಿಡಿದುಕೊಳ್ಳಿ. ಈಗ ಹುಡುಕುವವನಂತೆ ನಟಿಸುತ್ತಾ ಆತನ ಕಾರ್ಡನ್ನು ತೆಗೆದು ತೋರಿಸಿ. ಇಪ್ಪತ್ತಾರು ಕಾರ್ಡುಗಳ ಪೈಕಿ ಒಂದು ಬೇರೆ ಬಣ್ಣದ ಕಾರ್ಡು ಸೇರಿಕೊಂಡಿರುತ್ತದಲ್ಲಾ ಅದುವೇ ಆತ ಆರಿಸಿದ ಕಾರ್ಡಲ್ಲವೇ?
-ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.