ಮನುಷ್ಯ 6th ಸೆನ್ಸ್ ಪಡೆಯುತ್ತಾನೆಯೇ?
Team Udayavani, Aug 1, 2019, 5:04 AM IST
ಪಕ್ಷಿ ಹಾಗೂ ಹಲವು ಪ್ರಾಣಿಗಳ ಮೆದುಳು ಪ್ರಕೃತಿಯಲ್ಲಿ ನಡೆಯುವ ನಿಗೂಢ ವಿದ್ಯಮಾನಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮನುಷ್ಯನ ಮೆದುಳಿಗೆ, ಗ್ರಾಹ್ಯಶಕ್ತಿಗೆ ನಿಲುಕದ ವಿದ್ಯುತ್‌ಕಾಂತೀಯ ಶಕ್ತಿಯನ್ನೂ ಅದು ಗ್ರಹಿಸಬಲ್ಲುದು. ಇದೀಗ ಮನುಷ್ಯನೂ ಈ ಶಕ್ತಿಯನ್ನು ಸಂಪಾದಿಸಲು ಹೊರಟಿದ್ದಾನೆ…
ಹಕ್ಕಿಗಳು ವಲಸೆ ಹೋಗೋದು, ಪ್ರಾಣಿಗಳಿಗೆ ಮೊದಲೇ ಭೂಕಂಪನದ ಅನುಭವ ಆಗೋದು, ಪಾರಿವಾಳಗಳಿಂದ ಸಂದೇಶ ಕಳುಹಿಸೋದು ಹತ್ತು ಹಲವಾರು ಸಂಗತಿಗಳು ನೀವು ಕೇಳಿರುತ್ತೀರಿ, ಓದಿರುತ್ತೀರಿ. ಮನುಷ್ಯ ಈ ಸಾಮರ್ಥ್ಯಗಳಿಂದ ವಂಚಿತನಾಗಿದ್ದಾನೆ ಎಂದೇ ಇಲ್ಲಿಯವರೆಗೂ ತಿಳಿಯಲಾಗಿತ್ತು. ಆದರೆ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಅಧ್ಯಯನ ನಡೆಸಿದಾಗ ಪ್ರಕಾರ ನಿರ್ದಿಷ್ಟ ವಾತಾವರಣದಲ್ಲಿ ಕೆಲ ವ್ಯಕ್ತಿಗಳು ಭೂಮಿಯ ಕಾಂತೀಯ ಕ್ಷೇತ್ರವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರಂತೆ!
ಕಾಂತೀಯ ಕ್ಷೇತ್ರದ ಪ್ರಯೋಗ
ಭೂಮಿಯ ಉತ್ತರಾರ್ಧಗೋಳವನ್ನು ಹೋಲುವಂಥ ವಿಶಿಷ್ಟವಾದ ವಿನ್ಯಾಸವನ್ನು ಈ ಪ್ರಯೋಗಕ್ಕೆಂದೇ ನಿರ್ಮಿಸಲಾಗಿತ್ತು. ಪ್ರಯೋಗಕ್ಕೆಂದು 34 ಜನರ ತಂಡವೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರನ್ನು ಗೋಳದ ಒಳಗೆ ಇರಿಸಿ ಅವರ ಮೆದುಳಿನ ಕಾರ್ಯಚಟುವಟಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಯಿತು. ಯಾವುದೇ ವ್ಯಕ್ತಿಯ ಮೆದುಳು ಗೋಳದ ಕಾಂತೀಯ ಕ್ಷೇತ್ರಕ್ಕೆ ಸ್ಪಂದಿಸಿದರೆ, ಮೆದುಳು ಕಾಂತೀಯ ಕ್ಷೇತ್ರದ ಪ್ರಭಾವಕ್ಕೆ ಒಳಪಟ್ಟಿದೆ ಎಂಬುದು ಸಾಬೀತಾಗುತ್ತಿತ್ತು. 34 ಮಂದಿಯಲ್ಲಿ ಕೆಲವರ ಮೆದುಳು ಮಾತ್ರವೇ ಅವರ ಎಣಿಕೆಗೂ ಮೀರಿ ಸ್ಪಂದಿಸಿತ್ತು. ಅದೇ ಪ್ರಾಣಿ ಹಾಗೂ ಪಕ್ಷಿಗಳ ಮೆದುಳನ್ನು ಅಲ್ಲಿ ಪರೀಕ್ಷೆಗೊಳಪಡಿಸಿದಾಗ ಎಲ್ಲರಿಗೂ ಗೊತ್ತಿರುವಂತೆಯೇ ಕಾಂತೀಯ ಕ್ಷೇತ್ರಕ್ಕೆ ಸ್ಪಂದಿಸುತ್ತಿತ್ತು.
ಮ್ಯಾಗ್ನೆಟೋರೆಸೆಪ್ಷನ್ ಎಂಬ ದಿಕ್ಸೂಚಿ
ಪ್ರಾಣಿಗಳು ದೃಷ್ಟಿ, ಸ್ಪರ್ಶ, ರುಚಿ, ವಾಸನೆ, ಗುರುತ್ವ, ಉಷ್ಣತೆಗಳನ್ನು ಗ್ರಹಿಸುವಂತೆ ಮಾಡುವ ಸಂವೇದನಾ ಪ್ರಜ್ಞೆಗೆ ಮ್ಯಾಗ್ನೆಟೋರೆಸೆಪ್ಷನ್ ಎಂದು ಕರೆಯುತ್ತಾರೆ. ಇದು ಪ್ರಾಣಿಗಳಲ್ಲಿ ಪಕ್ಷಿಗಳಲ್ಲಿ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಅಷ್ಟೇ ಯಾಕೆ ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ವಲಸೆ ಹೋಗುವ ಹಕ್ಕಿಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ. ಗುರುತು ಪರಿಚಯವಿಲ್ಲದ ಊರಿಗೆ ಹೋದಾಗ ದಾರಿತಪ್ಪಿ ವಿಳಾಸ ಕೇಳುವ ಪರಿಸ್ಥಿತಿ ನಮ್ಮದು. ಆದರೆ ಈ ಹಕ್ಕಿಗಳು ಯಾವ ತಂತ್ರಜ್ಞಾನದ ಸಹಾಯವಿಲ್ಲದೆ ಅಷ್ಟು ದೂರ ಕ್ರಮಿಸಿ ಸುರಕ್ಷಿತವಾಗಿ ಅದು ಹೇಗೆ ವಾಪಸ್ಸಾಗುತ್ತವೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಅದಕ್ಕೆ ಕಾರಣ ಇದೇ ಮ್ಯಾಗ್ನೆಟೋರೆಸೆಪ್ಷನ್.
ಹಾಗಾದ್ರೆ ಈ ಮ್ಯಾಗ್ನಾಟೈಟ್ ಏನ್ಮಾಡುತ್ತೆ?
ಆಯಸ್ಕಾಂತದ ಪ್ರಮುಖ ಗುಣ ಯಾವುದು? ಅದು ಕಬ್ಬಿಣವನ್ನು ಆಕರ್ಷಿಸುತ್ತದೆ. ಅದೇ ಗುಣವನ್ನು ಹೊಂದಿದ ಮ್ಯಾಗ್ನಟೈಟ್ ಎಂಬ ಅಂಶ ಪಕ್ಷಿ, ಮೀನುಗಳ ದೇಹದಲ್ಲೂ ಇದೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯ ಕಾಂತಕ್ಷೇತ್ರವನ್ನು ಗುರುತಿಸುವುದಕ್ಕೆ ಕಾರಣ ಈ ಅಂಶ. ಆಗ ಸಿಕ್ಸ್‌ತ್ ಸೆನ್ಸ್ ಎಂಬ ಶಕ್ತಿಯನ್ನು ಮನುಷ್ಯ ಹೊಂದಬಹುದೇನೋ ಎಂಬ ಕನಸು ಹಲವರದು. ಸಂಶೋಧನೆ ಮುಗಿಯುವವರೆಗೆ ಏನೂ ಹೇಳುವ ಹಾಗಿಲ್ಲ.
– ಅರ್ಚನಾ ಹೆಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.