ತೆಂಗಿನಕಾಯಿ ಮಹಿಮೆ
ಪೀಸ್ ಪೀಸ್!
Team Udayavani, Dec 5, 2019, 4:15 AM IST
ಅವತಾರವೆಂದು ಹೇಳಿಕೊಳ್ಳುವ ಮಂತ್ರವಾದಿಯೊಬ್ಬನ ಸುತ್ತ ಭಕ್ತಾದಿಗಳು ಜಮಾಯಿಸಿದ್ದಾರೆ. ಒಬ್ಟಾತ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾನೆ. ಮಂತ್ರವಾದಿಯು ಅಲ್ಲೇ ಇದ್ದ ತೆಂಗಿನಕಾಯಿ ರಾಶಿಯಿಂದ ಒಂದನ್ನು ಆರಿಸಿ ಏನೋ ಮಣಮಣ ಮಂತ್ರ ಹೇಳಿ ಒಂದು ಮಣೆಯ ಮೇಲೆ ಇಡುತ್ತಾನೆ. “ಅದರ ಮೇಲೆ ತೀರ್ಥವನ್ನು ಪ್ರೋಕ್ಷಿಸಿದಾಗ ಕಾಯಿ ಒಡೆಯದಿದ್ದರೆ ನಿನ್ನ ಕಷ್ಟಗಳೆಲ್ಲಾ ಪರಿಹಾರವಾದುವೆಂದು ತಿಳಿದುಕೋ, ಒಂದು ವೇಳೆ ಒಡೆದರೆ ನಿನಗೆ ವಿಪರೀತ ಕಷ್ಟಗಳು ಇವೆ ಅಂತ ತಿಳಿದುಕೋ’ ಎಂಬುದಾಗಿ ಹೇಳಿ ಅವುಗಳಿಗೆ ಸೂಕ್ತ ಪರಿಹಾರವನ್ನೂ ತಾನೇ ಒದಗಿಸುತ್ತೇನೆ ಎಂದು ಅಭಯ ನೀಡುತ್ತಾನೆ. ತೀರ್ಥವನ್ನು ಪ್ರೋಕ್ಷಿಸಿದ ಕೂಡಲೇ ತೆಂಗಿನಕಾಯಿ ಒಡೆದು ಹೋಗುತ್ತದೆ! ಮಂತ್ರವಾದಿಯ ಬಲೆಗೆ ಒಬ್ಬ ಬಡಪಾಯಿ ಬೀಳುತ್ತಾನೆ.
ಇದೇನಪ್ಪಾ…? ಜಾದೂಗಾರರು ಮ್ಯಾಜಿಕ್ ಹೇಳಿಕೊಡೋದು ಬಿಟ್ಟು ಪವಾಡ ಕಥೆ ಹೇಳ್ತಿದ್ದಾರಲ್ಲಾ ಅಂತ ಅಂದುಕೊಳ್ಳಬೇಡಿ. ನಮ್ಮ ಸಮಾಜದಲ್ಲಿ ಕೆಲವರು ಮ್ಯಾಜಿಕ್ ಮೂಲಕ ಅಮಾಯಕರಿಗೆ ಹೇಗೆ ಮಂಕುಬೂದಿ ಎರಚುತ್ತಾರೆ ಎಂಬುದಕ್ಕೆ ಉದಾಹರಣೆಯಿದು. ಆ ಮ್ಯಾಜಿಕ್ಕನ್ನೇ ಅಮಾಯಕ ಜನರು ಪವಾಡ ಎಂದು ನಂಬುತ್ತಾರೆ. ಈ ಮ್ಯಾಜಿಕ್ಕನ್ನು ನೀವೂ ಕಲಿಯಬಹುದು.
ತಂತ್ರದ ರಹಸ್ಯ
ಮಂತ್ರವಾದಿಯು ಬಳಸುವ ತೆಂಗಿನಕಾಯಿ ಆತ ಮೊದಲೇ ಸಿದ್ಧಪಡಿಸಿಟ್ಟುಕೊಂಡಿದುದಾಗಿತ್ತು. ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ಐದಾರು ದಿನಗಳ ಕಾಲ ಸುಣ್ಣದ ತಿಳಿನೀರಲ್ಲಿ ನೆನೆಹಾಕಿ, ಚೆನ್ನಾಗಿ ಒಣಗಿಸಬೇಕು. ನಂತರ, ಅದರ ಮೇಲೆ ನೀರನ್ನು ಚಿಮುಕಿಸಿದಾಗ ಅದು ತನ್ನಷ್ಟಕ್ಕೇ ಒಡೆದು ಹೋಗುತ್ತದೆ. ಅದರ ಹಿಂದಿರುವುದು ವಿಜ್ಞಾನ, ಮಾಯಾ ತಂತ್ರವಲ್ಲ! ಇದೇ ಮಂತ್ರವಾದಿಯ ಕುತಂತ್ರ!
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.