ಶಿಶುಗೀತೆಯ ಶ್ರೇಯ ಇಬ್ಬರಿಗೆ ಸೇರಿತು
Team Udayavani, Sep 26, 2019, 5:00 AM IST
“ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್’ ಎಂಬ ಜನಪ್ರಿಯ ಇಂಗ್ಲೀಷ್ ಶಿಶಿಪ್ರಾಸ ಗೀತೆಯನ್ನು ನೀವು ಕೇಳಿರಬಹುದು, ಓದಿಯೂ ಇರಬಹುದು. ಪುಟ್ಟ ಹುಡುಗಿಯೊಬ್ಬಳು ಕುರಿ ಮರಿ ಜೊತೆ ಶಾಲೆಗೆ ಹೋಗುವ ಚಿತ್ರಣ ಆ ಪದ್ಯದಲ್ಲಿತ್ತು. ಇದನ್ನು ಯಾರು ಬರೆದರು ಎಂಬುದರ ಬಗ್ಗೆ ಈಗಲೂ ಗೊಂದಲವಿದೆ. ಆ ಪದ್ಯ ದಾಖಲಾಗಿರುವ ಹಸ್ತಪ್ರತಿಯಲ್ಲಿ “ಸಾರಾ ಜೋಸೆಫಾ’ ಎಂಬ ಮಹಿಳೆಯ ಸಹಿಯನ್ನು ಪತ್ತೆ ಮಾಡಲಾಗಿದ್ದು, ಅದರಲ್ಲಿ ಇಸವಿ 1823 ಎಂದು ನಮೂದಾಗಿದೆ. ಆ ಹಸ್ತಪ್ರತಿ 1823ನೇ ಇಸವಿಯದಾದರೂ ಪದ್ಯ ಅದಕ್ಕಿಂತಲೂ ಹಿಂದೆಯೇ ರಚಿತವಾಗಿದೆ ಎಂದು ತಿಳಿಯಲಾಗಿದೆ. “ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್’ ಪದ್ಯ ಮೊದಲ ಬಾರಿ 1830ರಲ್ಲಿ ಅಮೆರಿಕದ ಮಕ್ಕಳ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿತ್ತು.
ಅಚ್ಚರಿಯ ವಿಷಯವೆಂದರೆ ಈ ಪದ್ಯ ನಿಜವಾದ ವ್ಯಕ್ತಿಯ ಮೇಲೆ ರಚಿತವಾಗಿದೆ ಎನ್ನುವುದು. ಅಂದರೆ ಮೇರಿ ಮತ್ತು ಕುರಿ ಮರಿ ಕಾಲ್ಪನಿಕ ಸೃಷ್ಟಿಯಲ್ಲ. ನಿಜವಾಗಲೂ ಇದ್ದರು! ಆಕೆಯ ಪೂರ್ತಿ ಹೆಸರು ಮೇರಿ ಸಾಯರ್. ಅವಳು ಅಮೆರಿಕದ ಬಾಸ್ಟನ್ ನಿವಾಸಿ. ಅವಳು ಪ್ರತಿದಿನ ಶಾಲೆಗೆ ಹೋಗುವಾಗ ಜೊತೆಯಲ್ಲಿ ತನ್ನ ಕುರಿಮರಿಯನ್ನೂ ಕರೆದೊಯ್ಯುತ್ತಿದ್ದಳು. ಅವಳು ಮುಂದೆ ಮುಂದೆ ನಡೆಯುತ್ತಿದ್ದರೆ ಅದು ಹಿಂದೆ ಹಿಂಬಾಲಿಸಿಕೊಂಡು ಬರುತ್ತಿತ್ತು. ಅದನ್ನು ನೋಡಿದವರೇ ಪದ್ಯವನ್ನು ರಚಿಸಿದ್ದು. ಮೇರಿಯೇ ಹೇಳುವಂತೆ ಅದನ್ನು ರಚಿಸಿದ್ದು ಸಾರಾ ಜೋಸೆಫ್ ಅಲ್ಲ, ಜಾನ್ ರೋಲ್‌ಸ್ಟೋನ್ ಎಂಬ ವ್ಯಕ್ತಿ. 1926ರಲ್ಲಿ ಆಟೋಮೊಬೈಲ್ ಸಂಸ್ಥೆ ಫೋರ್ಡ್‌ನ ಮಾಲೀಕ ಹೆನ್ರಿ ಫೋರ್ಡ್ “ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್’ ಶಿಶು ಗೀತೆಯ ನೆನಪಿನಾರ್ಥ ಮೇರಿ ಓದಿದ್ದ ಶಾಲೆಯನ್ನೇ ಖರೀದಿಸಿ ಸ್ಮಾರಕವನ್ನಾಗಿಸಿದ್ದರು. ಆ ಸಮಯದಲ್ಲಿ ಪದ್ಯದ ನಿಜವಾದ ಕತೃ ಯಾರೆಂದು ಪತ್ತೆ ಹಚ್ಚಲು ಸಂಶೋಧಕರ ತಂಡವನ್ನು ನೇಮಿಸಿದ್ದರು. ಆಗಲೂ ಗೊಂದಲ ಬಗೆಹರಿದಿರಲಿಲ್ಲ. ಕಡೆಗೆ ಪದ್ಯದ ಶ್ರೇಯವನ್ನು ರೌಲ್‌ಸ್ಟೋನ್ ಮತ್ತು ಸಾರಾ ಜೋಸೆಫಾ ಇಬ್ಬರಿಗೂ ಹಂಚಲಾಯಿತು!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.