ಮಂಜುಗಡ್ಡೆಯಾಗಿದ್ದ ಭೂಮಿ!
ಪ್ರಾಣಿಗಳು ಚಳಿ ಚಳಿ ತಾಳೆವು ಎಂದಿದ್ದವು
Team Udayavani, Jul 11, 2019, 5:00 AM IST
ಭೂಮಿಯನ್ನು ನೀಲಿ ಗ್ರಹ ಎಂದು ಕರೆಯುತ್ತಾರೆ. ಏಕೆಂದರೆ ಭೂಮಿ ಅಂತರಿಕ್ಷದಿಂದ ನೀಲಿಯಾಗಿ ಕಾಣುವುದು. ಕೋಟಿ ವರ್ಷಗಳ ಹಿಂದೆ ಭೂಮಿ ಬಿಳಿ ಬಣ್ಣವನ್ನು ಹೊದ್ದಿತ್ತು. ಏಕೆಂದರೆ ಪೂರ್ತಿ ಭೂಮಿ ಹಿಮದಿಂದ ಆವೃತವಾಗಿತ್ತು!
ಮಂಜುಗಡ್ಡೆಯಲ್ಲಿ ಆಟವಾಡುವುದು, ಹಿಮದ ಮಳೆ, ಕೊರೆಯುವ ಚಳಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ!? ಈಗೆಲ್ಲಾ ದೊಡ್ಡದೊಡ್ಡ ನಗರಿಗಳಲ್ಲಿ “ಸ್ನೋ ಸಿಟಿ’ ಎನ್ನುವ
ಕೃತಕ ಹಿಮದ ಥೀಮ್ ಪಾರ್ಕ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈಗಲಾದರೆ ಚಳಿಗಾಲ ನಮಗೆ ವರ್ಷಕ್ಕೊಮ್ಮೆ ಬಂದು ಹೋಗುವ ಅತಿಥಿ. ಆದರೆ ಹಿಂದೊಮ್ಮೆ ಭೂಮಿ
ಮೇಲೆ ಹಿಮಯುಗವೇ ಬಂದಿತ್ತು ಎಂದರೆ ಯಾರಿಗೇ ಆದರೂ ಊಹಿಸಿಕೊಳ್ಳುವುದು ಕಷ್ಟ. ಹಿಮ ಯುಗವೆಂದರೆ, ಸಾವಿರಾರು ವರ್ಷಗಳ ಕಾಲ ಭೂಮಿ ಪೂರ್ತಿ
ಹಿಮದ ಉಂಡೆಯಂತಿತ್ತು.
ಒಂದಲ್ಲ ಎರಡಲ್ಲ, ನಾಲ್ಕು ಉತ್ತರ ಧ್ರುವ ಪ್ರದೇಶದಿಂದ ಹಿಡಿದು ದಕ್ಷಿಣ ಧ್ರುವದವರೆಗೂ
ಭೂಮಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿತ್ತು. 1840ರಲ್ಲಿ ಲೂಯಿಸ್
ಅಗಾಸಿಜ್ ಅನ್ನೋ ಸ್ವಿಸ್‌ನ ಪರಿಸರ ವಿಜ್ಞಾನಿಹಲವಾರು ಸಾಕ್ಷಿ, ಪುರಾವೆಗಳ ಮುಖಾಂತರ ಭೂಮಿಯಲ್ಲಿ ಅನೇಕ ಹಿಮಯುಗಗಳು ಉಂಟಾಗಿವೆ ಎಂಬುದಪತ್ತೆ ಹಚ್ಚಿದರು. ಅದಾನಂತರ ಆಕ್ಸ್‌ಫರ್ಡ್ ಕಾಲೇಜಿನ ಸಹ ಪ್ರಾಧ್ಯಾಪಕಿ ಹಾಗೂ ವಿಜ್ಞಾನಿ ಮೆಲಿಸ್ಸಾ ಹೇಗ್, ಉತ್ತರಾರ್ಧ ಗೋಳದಿಂದ ದಕ್ಷಿಣಾರ್ಧ ಗೋಳದವರೆಗೆ ಭೂಮಿಯ ಮೇಲ್ಮೈ, ಸಮುದ್ರವೂ ಸೇರಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿತ್ತು ಎಂಬುದನ್ನು ಸಂಶೋಧನೆ ಮುಖಾಂತರ ಸಾಬೀತುಪಡಿಸಿದ್ದರು. ಅದರಂತೆ
ತಿಳಿದು ಬಂದಿದ್ದೇನೆಂದರೆ, ಭೂಮಿ ತನ್ನ ಇತಿಹಾಸದಲ್ಲಿ ಕನಿಷ್ಠವೆಂದರೂ ನಾಲ್ಕು ಹಿಮಯುಗಗಳನ್ನು ಕಂಡಿದೆ. 2.7 ಬಿಲಿಯನ್‌ನಿಂದ 2.5 ಬಿಲಿಯನ್ ವರ್ಷಗಳ ಹಿಂದೆ
ಹಿಮಯುಗ ಪ್ರಾರಂಭವಾಗಿತ್ತು.
ಮತ್ತೆ ಬರುತ್ತಾ ಹಿಮಯುಗ?
ಹಿಮಯುಗದ ಸಮಯದಲ್ಲಿ ಭೂಮಿ ಮೇಲಿನ ತಾಪಮಾನ ಅಪಾಯಕಾರಿ ಹಂತದಲ್ಲಿತ್ತು. ಎಷ್ಟೆಂದರೆ ಅಂದಾಜು ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಷ್ಟು! ಹಿಮ
ಯುಗದ ಕುರಿತಾದ ಚರ್ಚೆ ವಿಜ್ಞಾನಿಗಳ ವಲಯದಲ್ಲಿ ಆಗಾಗ್ಗೆ ಆಗುವುದುಂಟು. ಏಕೆಂದರೆ
ಹಿಂದೊಮ್ಮೆ ಘಟಿಸಿದ್ದ ಹಿಮ ಯುಗ ಮತ್ತೆ ಭೂಮಿ ಮೇಲೆ ಬರಲಿದೆ ಎಂಬ ಕೆಲ ವಿಜ್ಞಾನಿಗಳ ಲೆಕ್ಕಾಚಾರವೇ ಅದಕ್ಕೆ ಕಾರಣ. 16ನೇ ಶತಮಾನದಲ್ಲಿ ಹಿಮಯುಗದ
ಲಕ್ಷಣಗಳು ಕಂಡುಬಂದಿದ್ದವು ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಈ ಬಾರಿಯ ಹಿಮಯುಗ ನಾಲ್ಕೈದು ದಶಕಗಳ ನಂತರ ಮತ್ತೆ ಭೂಮಿ ಮೇಲೆ ಕಾಲಿಡಲಿದೆ ಎನ್ನುವುದು ಈ ವಿಜ್ಞಾನಿಗಳ ಊಹೆ. ಆದರೆ ವಿಜ್ಞಾನ ಬರೀ ಊಹೆಗಳ ಆಧಾರದ
ಮೇಲೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.
ತೆರೆಯ ಮೇಲೆ “ಐಸ್ ಏಜ್’
ಭೂಮಿಯಲ್ಲಿ ಹಿಮಯುಗ ಇದ್ದಾಗಿನ ಕಥಾನಕವನ್ನೇ ಡಿಸ್ನಿ ಸಂಸ್ಥೆ “ಐಸ್ ಏಜ್’ ಸಿನಿಮಾ
ಮೂಲಕ ತೆರೆ ಮೇಲೆ ತಂದಿತ್ತು. ಈ ಸಿನಿಮಾದ ಹಲವು ಅವತರಣಿಕೆಗಳು ತೆರೆಕಂಡು ಮೆಚ್ಚುಗೆ ಗಳಿಸಿದ್ದವು. ಆಗಿನ ಯುಗದಲ್ಲಿ ಜೀವಂತವಿದ್ದ ಪ್ರಾಣಿಗಳ ಪಾತ್ರಗಳನ್ನು ಸಿನಿಮಾದಲ್ಲಿ ಕಾಣಬಹುದು.
ಆಗಲೂ ಬದುಕಿದ್ದವು ಪ್ರಾಣಿಗಳು ಹಿಮ ಯುಗವಿದ್ದಾಗಲೂ ಭೂಮಿ ಮೇಲೆ ಪ್ರಾಣಿಗಳು ನೆಲೆಸಿದ್ದವು. ಅವು ಹಿಮಯುಗಕ್ಕೆ ಹೊಂದಿಕೊಂಡಿದ್ದವು. ಅವುಗಳ ಮೈ ದಪ್ಪ ಚರ್ಮ ಹಾಗೂ ತುಪ್ಪಳವನ್ನು ಹೊಂದಿದ್ದವು. ತೋಳಗಳು, ಕೋರೆ ಹಲ್ಲುಳ್ಳ ಹುಲಿ ಮ್ಯಾಮತ್
ಆನೆ ಸೇರಿದಂತೆ ಹಲವು ಜೀವಿಗಳು ಆ ಕಾಲದಲ್ಲಿ ಬದುಕಿದ್ದವು ಎನ್ನುವುದು ಪಳೆಯುಳಿಕೆಗಳಿಂದ ತಿಳಿದುಬಂದಿದೆ.
ಅರ್ಚನಾ ಹೆಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.