ಜಾದೂಗಾರನೇ ಅದೃಷ್ಟಶಾಲಿ


Team Udayavani, Jan 24, 2019, 12:30 AM IST

q-1.jpg

ಹಳೆಯ ಪ್ಯಾಂಟ್‌ನ ಕಿಸೆಯಲ್ಲಿ, ಯಾವುದೋ ಪುಸ್ತಕದ ಮಧ್ಯದಲ್ಲಿ ದುಡ್ಡು ಸಿಕ್ಕರೆ ಎಷ್ಟು ಖುಷಿಯಾಗುತ್ತಲ್ವ? ಹಾಗೆಯೇ ಖಾಲಿ ಲಕೋಟೆಯೊಳಗೆ ನೋಟೊಂದು ಸಿಕ್ಕರೆ? ಈ ಬಾರಿಯ ಜಾದೂ ಅದೇ. ಹಿಂದೆ ನಾವು ಸುಟ್ಟ ಕಾಗದದಿಂದ ದುಡ್ಡನ್ನು ಸೃಷ್ಟಿಸೋದನ್ನು ಕಲಿತುಕೊಂಡಿದ್ದೆವು. ಈ ಬಾರಿ, ಖಾಲಿ ಲಕೋಟೆಯಿಂದ.

ಪ್ರದರ್ಶನದ ವಿಧಾನ:
ಯಕ್ಷಿಣಿಗಾರ ಒಂದು ಟ್ರೇನಲ್ಲಿ ನಾಲ್ಕು ಲಕೋಟೆಗಳನ್ನು ತಂದು ಟೇಬಲ್‌ ಮೇಲಿಡುತ್ತಾನೆ. ಮೂವರು ಪ್ರೇಕ್ಷಕರನ್ನು ವೇದಿಕೆಯ ಮೇಲೆ ಕರೆದು, ಲಕೋಟೆಗಳ ಜಾಗವನ್ನು ಪ್ರೇಕ್ಷಕರಿಂದ ಅದಲು ಬದಲು ಮಾಡಿಸುತ್ತಾನೆ. “ಆ ನಾಲ್ಕರಲ್ಲಿ ಯಾವುದೋ ಒಂದು ಲಕೋಟೆಯಲ್ಲಿ 100 ರೂ. ನೋಟು ಇದೆ. ಒಬ್ಬೊಬ್ಬರು ಒಂದು ಲಕೋಟೆಯನ್ನು ತೆಗೆದುಕೊಳ್ಳಿ. ಉಳಿದ ಒಂದು ಲಕೋಟೆ ನನಗೆ. ಯಾರ ಲಕೋಟೆಯಲ್ಲಿ ನೋಟು ಇದೆಯೋ, ಅದು ಅವರಿಗೇ’ ಎನ್ನುತ್ತಾನೆ. ಮೂವರು ಪ್ರೇಕ್ಷಕರು ಒಬ್ಬೊಬ್ಬರಾಗಿ ಲಕೋಟೆ ಕೈಗೆತ್ತಿಕೊಂಡು ತೆರೆದು ನೋಡುತ್ತಾರೆ. ಮೊದಲ ಪ್ರೇಕ್ಷಕನ ಲಕೋಟೆಯಲ್ಲಿ ನೋಟಿಲ್ಲ, ಬರೀ ಬಿಳಿ ಪೇಪರ್‌ ಇದೆ. ಎರಡನೆಯವನು ಆಸೆಯಿಂದ ಲಕೋಟೆ ತೆರೆದರೆ, ಅದರಲ್ಲೂ ಬಿಳಿ ಪೇಪರ್‌. ಮೂರನೆಯವನಿಗೂ ನಿರಾಸೆಯೇ… ಟೇಬಲ್‌ ಮೇಲೆ ಉಳಿದ ಕೊನೆಯ ಲಕೋಟೆಯನ್ನು ಜಾದೂಗಾರ ಗಿಲಿ ಗಿಲಿ ಪೂವ್ವಾ ಎಂದು ಮಂತ್ರಿಸಿ, ತೆರೆದು ನೋಡಿದರೆ; ಅದರಲ್ಲಿ 100 ಸಾವಿರದ ನೋಟು ಇರುತ್ತದೆ. ಜಾದೂಗಾರ ತೆರೆಯುವ ಲಕೋಟೆಯಲ್ಲೇ ಹಣ ಬಂದಿದ್ದು ಹೇಗೆ?

ಬೇಕಾಗುವ ವಸ್ತುಗಳು:
ನಾಲ್ಕು ಲಕೋಟೆಗಳು, 100 ರೂ. ನೋಟು, ಒಂದು ಟ್ರೇ 

ಮಾಡುವ ವಿಧಾನ:
ಒಂದು ಟ್ರೇಯಲ್ಲಿ ನಾಲ್ಕು ಲಕೋಟೆಗಳನ್ನೂ ಜೋಡಿಸಿಕೊಳ್ಳಿ. ನಾಲ್ಕೂ ಲಕೋಟೆಗಳಲ್ಲೂ ಬಿಳಿ ಪೇಪರ್‌ ಇಡಿ. ಈಗ ಪ್ರೇಕ್ಷಕರು ಯಾವುದೇ ಲಕೋಟೆಯನ್ನು ಆರಿಸಿಕೊಂಡರೂ, ಅದರಲ್ಲಿ ಬಿಳಿ ಪೇಪರ್‌ ಇರುತ್ತದೆ. ಕಡೆಯಲ್ಲಿ ಎಲ್ಲರೂ ಆರಿಸಿ ಬಿಟ್ಟ ಲಕೋಟೆಯಲ್ಲಿಯೂ ಬಿಳಿ ಪೇಪರ್‌ ಇರುತ್ತದೆ. ಹಾಗಿದ್ದರೆ ಜಾದೂಗಾರನಿಗೆ ಸೇರಿದ ಆ ಕಡೆಯ ಲಕೋಟೆಯಲ್ಲಿ ದುಡ್ಡು ಸಿಗೋದು ಹೇಗೆ? ಅದೇ ಗಮ್ಮತ್ತು. ನೀವು ಲಕೋಟೆಯನ್ನು ಇಟ್ಟುಕೊಂಡಿರುವ ಟ್ರೇ ಕೆಳಗೆ 10 ರೂ. ನೋಟೊಂದನ್ನು ನಿಮ್ಮ ಬಲಗೈ ನಾಲ್ಕು ಬೆರಳುಗಳಿಂದ ಅದುಮಿ ಹಿಡಿದಿರಬೇಕು. ಮೇಲೆ ಹೆಬ್ಬೆರಳು ಟ್ರೇ ಹಿಡಿದಿರಬೇಕು. ಟೇಬಲ… ಮೇಲೆ ಟ್ರೇ ಇಡುವಾಗ, ನೋಟು ನಿಮ್ಮ ಕಡೆಗೆ ಬರುವ ಹಾಗೆ ಎಚ್ಚರ ವಹಿಸಿ. ಟ್ರೇ ಕೊಂಚ ಟೇಬಲ್‌ನಿಂದ ಆಚೆ(ಹೊರಗೆ) ಬಂದಿರಲಿ. ಕೊನೆಯಲ್ಲಿ ಉಳಿದ ಲಕೋಟೆಯನ್ನು ತೆಗೆದುಕೊಳ್ಳುವಾಗ ಲಕೋಟೆಯನ್ನು ಟೇಬಲ್‌ನ ತುದಿಯವರೆಗೂ ಎಳೆದು, ಜೊತೆಗೆ ನೋಟನ್ನು ಸೇರಿಸಿ ಮೇಲಕ್ಕೆ ಎತ್ತಿಕೊಳ್ಳಿ. ಈಗ ಲಕೋಟೆಯನ್ನು ಒಂದು ಬಾಗ ಮಾತ್ರ ಪ್ರೇಕ್ಷಕರಿಗೆ ಕಾಣುತ್ತದೆ. ಲಕೋಟೆ ತೆರೆಯುವ ಭಾಗ, ಅಂದರೆ ಜಾದೂಗಾರನಿಗೆ ಕಾಣುವ ಭಾಗದ ಹಿಂದುಗಡೆ ನೋಟು ಇರುತ್ತದೆ. ಈಗ ಲಕೋಟೆ ತೆರೆಯುವಂತೆ ನಟಿಸುತ್ತಾ, ನೋಟು ಲಕೋಟೆಯೊಳಗೇ ಇತ್ತೇನೋ ಎಂಬಂತೆ ನೋಟನ್ನು ಈಚೆಗೆ ಎಳೆದು ತೋರಿಸಿ. ಪ್ರೇಕ್ಷಕರು ತಾವು ಆರಿಸದೆ ಬಿಟ್ಟಿದ್ದ ಲಕೋಟೆಯಲ್ಲಿ ದುಡ್ಡು ಇದ್ದಿದ್ದನ್ನು ನೋಡಿ ತಮ್ಮ ಅದೃಷ್ಟ ಸರಿಯಿಲ್ಲ ಅಂದುಕೊಳ್ಳುತ್ತಾರೆ. ಆದರೆ ಈ ಮ್ಯಾಜಿಕ್‌ನಿಂದ ಜಾದೂಗಾರನೇ ಯಾವತ್ತಿಗೂ ಅದೃಷ್ಟಶಾಲಿ ಎಂದು ಸಾಬೀತುಪಡಿಸಬಹುದು.

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.