ಬ್ರಹ್ಮಾಂಡದ ರಹಸ್ಯ ತಿಳಿಸುವ ಕ್ಷುದ್ರಗ್ರಹ!
Team Udayavani, Jun 14, 2018, 6:00 AM IST
ಅಂತರಿಕ್ಷದಲ್ಲಿ ಅಸಂಖ್ಯ ಕ್ಷುದ್ರ ಗ್ರಹಗಳು ಚಲಿಸುತ್ತಿವೆ. ಇವೆಲ್ಲವೂ ಯಾವುದೋ ಗ್ರಹ, ಆಕಾಶಕಾಯಗಳಿಂದ ಸಿಡಿದೆದ್ದ ಚೂರುಗಳು. ಬಹುತೇಕ ಕ್ಷುದ್ರಗ್ರಹಗಳು ವಕ್ರ ಕಾಯಗಳು. ಮೈಮೇಲೆ ಸಿಡುಬಿನ ಕಲೆಗಳಂತಿರುವ ಕುಳಿಗಳು ಎದ್ದು ಕಾಣುತ್ತವೆ. ಕ್ಷುದ್ರಗ್ರಹಗಳ ಅಧ್ಯಯನದಿಂದ ಇಡೀ ಸೌರ ಮಂಡಲ ಹೇಗೆ ರೂಪುಗೊಂಡಿತು? ಗ್ರಹಗಳ ಓಳಗೇನಿದೆ ಎಂಬುದನ್ನು ತಿಳಿಯಲು ಸಾಧ್ಯ!
1991ರಲ್ಲಿ ಗೆಲಿಲಿಯೋ ಎಂಬ ವ್ಯೋಮನೌಕೆ ಗ್ಯಾಸಾ ಎಂಬ ಕ್ಷುದ್ರಗ್ರಹವನ್ನು ಬಹು ಸಮೀಪದಿಂದ ವೀಕ್ಷಿಸಿತ್ತು. 1993ರಲ್ಲಿ ನಿಯರ್ ಎಂಬ ನೌಕೆ ಇಡಾ ಎಂಬ ಕ್ಷುದ್ರಗ್ರಹಗಳ ಮೇಲೆ ಕಣ್ಣಿಟ್ಟಿತ್ತು. 2007ರಲ್ಲಿ ನಾಸಾದ ಡಾನ್ ಉಪಗ್ರಹ “ವೆಸ್ಟ್’ ಎಂಬ ಕ್ಷುದ್ರಗ್ರಹದ ಕುರಿತು ಅನೇಕ ಮಾಹಿತಿಯನ್ನು ಸಂಗ್ರಹಿಸಿತ್ತು. ಈಗ ವಿಜ್ಞಾನಿಗಳ ಟಾರ್ಗೆಟ್ ಆಗಿರುವುದು ಸೈಕೆ ಎನ್ನು ಕ್ಷುದ್ರಗ್ರಹ. ಇದು ಬರೀ ಕಬ್ಬಿಣದಿಂದಲೇ ರೂಪಿತವಾಗಿದೆ ಎಂಬುದು ತಿಳಿದುಬಂದಿದೆ. 200 ಮೀಟರ್ ಅಗಲವಿರುವ ಈ ಕ್ಷುದ್ರಗ್ರಹವನ್ನು ಅಧ್ಯಯನ ನಡೆಸಲು ಅದೇ ಹೆಸರಿನ ವ್ಯೋಮನೈಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದರು. ದೆ. ಇಡೀ ಕ್ಷುದ್ರಗ್ರಹಗಳ ಒಂದು ಭಾಗದ ದ್ರವ್ಯವೇ ಇದರಲ್ಲಿ ಅಡಕವಾಗಿದೆ.
ಇದು ಎಷ್ಟು ಸಾಂದ್ರವಾಗಿದೆ ಎಂದರೆ ಇದರ ಗುರುತ್ವಬಲದಿಂದ ಅಕ್ಕಪಕ್ಕದ ಸಣ್ಣಪುಟ್ಟ ಕ್ಷುದ್ರಗ್ರಹಗಳು ಅಲ್ಲಾಡುತ್ತಿವೆ. ಇದರ ಆಕಾರ ಗೋಳಾಕಾರಕ್ಕೆ ಸಮೀಪವಿದೆ. ಇದು ಹೊಳೆಯುತ್ತದೆ. ಸೌರಮಂಡಲದ ಯಾವ್ಯಾವುದೋ ಕಾಯಗಳು ಇದನ್ನು ಲಟ್ಟಿಸಿಕೊಂಡು ಹೋಗಿವೆ. ಸೈಕೆಯಿಂದ ವಿಜ್ಞಾನಿಗಳು ನಿರೀಕ್ಷಿಸಿದಂತೆ ಮಾಹಿತಿ ಏನಾದರೂ ಸಿಕ್ಕಲ್ಲಿ ಬ್ರಹ್ಮಾಂಡದ ಕುರಿತ ಅನೇಕ ರಹಸ್ಯಗಳು ಬಿಚ್ಚಿಕೊಳ್ಳಲಿವೆ.
ಸುಜಲಾ ಘೋರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.