ಪೈಥಾಗೋರಸ್ ಬಿಡಿಸದ ಬೀನ್ಸ್ ಪ್ರಮೇಯ
Team Udayavani, Mar 21, 2019, 12:30 AM IST
ಪೈಥಾಗೋರಸ್ ಪ್ರಮೇಯವನ್ನು ಶಾಲಾ- ಕಾಲೇಜು ದಿನಗಳಲ್ಲಿ ಎಲ್ಲರೂ ಓದಿಯೇ ಇರುತ್ತಾರೆ. ಆ ಪ್ರಮೇಯವನ್ನು ಕಂಡುಹಿಡಿದಾತನೇ ಪೈಥಾಗೋರಸ್.ಕ್ರಿ.ಪೂ. 530ನೇ ಇಸವಿಯಲ್ಲಿ ಇಟಲಿಯಲ್ಲಿ ಆತ ಜೀವಿಸಿದ್ದ. ಒಂದು ವೈಜ್ಞಾನಿಕ ಸವಾಲು ಬಹಳ ದಿನಗಳಿಂದ ಆತನ ತಲೆಯನ್ನು ಕೊರೆಯುತ್ತಿತ್ತು. ಸ್ನಾನ ಮಾಡುತ್ತಿದ್ದಾಗ ಆ ಸವಾಲಿಗೆ ಉತ್ತರ ಹೊಳೆದಿತ್ತು. ಕೂಡಲೆ ಆತ “ಯುರೇಕಾ ಯುರೇಕಾ’ ಎಂದು ಕಿರುಚುತ್ತಾ ಹುಟ್ಟುಡುಗೆಯಲ್ಲೇ ಹೊರಕ್ಕೋಡಿದ್ದ. ಇಂತಿಪ್ಪ ಪೈಥಾಗೋರಸ್‌ಗೆ ಬೀನ್ಸ್ ಕಾಳನ್ನು ಕಂಡರೆ ಆಗುತ್ತಿರಲಿಲ್ಲ. ಕಡೆಗೆ ಆತ ಸತ್ತಿದ್ದಕ್ಕೆ ಕೂಡಾ ಅದೇ ಬೀನ್ಸ್ ಕಾರಣವಾಯಿತು.
ಬೀನ್ಸ್ ತಿಂದು ಆತ ತೀರಿಕೊಂಡ ಎಂದುಕೊಳ್ಳದಿರಿ. ಹಾಗಾಗುವುದಕ್ಕೆ ಸಾಧ್ಯವೇ ಇಲ್ಲ. ಒಮ್ಮೆ ಆಕ್ರಮಣಕಾರರು ಪೈಥಾಗೋರಸ್‌ನ ಹಿಂದೆ ಬಿದ್ದರು. ಅವನನ್ನು ಅಟ್ಟಿಸಿಕೊಂಡು ಹೋದರು. ಆಕ್ರಮಣಕಾರರ ಕೈಯಲ್ಲಿ ಆಯುಧಗಳಿದ್ದವು. ಪೈಥಾಗೋರಸ್ ಅದೇ ವೇಗದಲ್ಲಿ ಓಡಿಕೊಂಡು ಹೋಗುತ್ತಿದ್ದರೆ ಸಾಕಾಗಿತ್ತು. ಆದರೆ ದಾರಿಯಲ್ಲಿ ದೊಡ್ಡ ಬೀನ್ಸ್ ಗದ್ದೆ ಎದುರಾಯಿತು. ಗಕ್ಕನೆ ಪೈಥಾಗೋರಸ್ ನಿಂತುಬಿಟ್ಟ. ಆತನ ಕಣ್ಣಿಗೆ ಬೀನ್ಸ್ ಫಸಲು ಕಾಣುತ್ತಿತ್ತು. ಬೀನ್ಸ್ ಎಂದರೆ ಮಾರುದೂರ ಓಡುತ್ತಿದ್ದಾತ ಈಗ ಜೀವ ಉಳಿಸಿಕೊಳ್ಳಲು ಬೀನ್ಸ್ ಗದ್ದೆ.ಯನ್ನು ಹಾದುಹೋಗಬೇಕು. ಆದರೆ ಪೈಥಾಗೋರಸ್ ಹಾಗೆ ಮಾಡಲಿಲ್ಲ. ನಿಂತಲ್ಲೇ ನಿಂತ. ಅಷ್ಟರೊಳಗೆ ಆಕ್ರಮಣಕಾರರು ಅವನ ಮೇಲೆ ಹಲ್ಲೆ ನಡೆಸಿದರು.
– ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.