ದೈತ್ಯ ಆಮೆಯ ರಹಸ್ಯ

Team Udayavani, Feb 27, 2020, 5:58 AM IST

JADU-3

70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ!

ಇಂದು ನಾವು ನೋಡುತ್ತಿರುವ ಭೂಮಿ ಅಸಂಖ್ಯ ಬದಲಾವಣೆಗಳಿಗೆ ಒಳಗಾಗಿದೆ. ಬಹಳ ಹಿಂದೆ ಭೂಮಿ ಮೇಸೆ ನಡೆದಾಡಿದ್ದ ಜೀವಿಗಳಲ್ಲಿ ಅನೇಕವು ಇಂದು ನಮ್ಮೊಡನೆ ಇಲ್ಲ. ಅಲ್ಲದೆ, ಅನೇಕ ಜೀವಿಗಳು ಮಾರ್ಪಾಡುಗಳಿಗೆ ಒಳಗಾಗಿ ರೂಪಾಂತರಗೊಂಡಿವೆ. ಅದಕ್ಕೆ ಸಾಕ್ಷಿಗಳನ್ನು ಪ್ರಕೃತಿ ಭೂಮಿಯಲ್ಲಿದೆ ಉಳಿಸಿಟ್ಟಿವೆ. ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿಗಳು ಸತ್ತಾಗ ಕಾಲ ಕ್ರಮೇಣ ಮಣ್ಣಿನಡಿಯೋ, ಮಂಜಿನಡಿಯೋ ಸೋರಿಹೋಗಿರುತ್ತದೆ. ಅವುಗಳಲ್ಲಿ ಅನೇಕವು ಮಣ್ಣಾಗಿ ಕರಗಿಹೋದರೆ, ಇನ್ನು ಕೆಲವು ನಿರ್ದಿಷ್ಟ ವಾತಾವರಣದಿಂದಾಗಿ ಕರಗದೆ ಉಳಿದುಬಿಡುತ್ತದೆ. ಅವುಗಳ ಅವಶೇಷವನ್ನು ವಿಜ್ಞಾನಿಗಳು ಹುಡುಕಿ ತೆಗೆಯುತ್ತಾರೆ. ಅದನ್ನು “ಪಳೆಯುಳಿಕೆ’ ಎನ್ನುವರು. ಜೀವ ವಿಜ್ಞಾನಿಗಳಿಗೆ ಪಳೆಯುಳಿಕೆಗಳು ಬಹಳ ಮುಖ್ಯವಾದ ಸುಳಿವುಗಳನ್ನು ಒದಗಿಸುತ್ತದೆ. ಪಳೆಯುಳಿಕೆಯನ್ನು ಬಳಸಿ ಆಯಾ ಪ್ರಾಣಿಯ ಅಂಗರಚನೆ. ಗಾತ್ರ, ಆಹಾರ ಪ್ರಕೃತಿ, ಇನ್ನೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು. ಅಂಥ ಪಳೆಯುಳಿಕೆಯೊಂದನ್ನು ವಿಜ್ಞಾನಿಗಳು ದಕ್ಷಿಣ ಅಮೆರಿಕದ ವೆನಿಝುವೆಲಾದಲ್ಲಿ ಸಂಶೋಧಿಸಿದ್ದಾರೆ.

ಸಿಕ್ಕಿದ್ದೆಲ್ಲಿ?
ಏನಿಲ್ಲವೆಂದರೂ ಆ ಪಳೆಯುಳಿಕೆ 70 ಲಕ್ಷ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಆ ಪಳೆಯುಳಿಕೆ ಆಮೆಯ ಪೂರ್ವಜರದ್ದು! ಇಂದು ನಾವು ಕೈಗಳಲ್ಲಿ ಹಿಡಿದೆತ್ತುವ ಆಮೆಗಳ ಗಾತ್ರದಂತಿಲ್ಲ ಆ ಪಳೆಯುಳಿಕೆಯ ಗಾತ್ರ. ಆ ಆಮೆ ಒಂದು ಕಾರಿನಷ್ಟು ದೊಡ್ಡದಿದೆ ಎನ್ನುವುದು ಅಚ್ಚರಿಯ ಸಂಗತಿ. ಆಗಿನ ಕಾಲದಲ್ಲಿ ಆಮೆ ಅಷ್ಟು ದೊಡ್ಡದಿತ್ತು ಎನ್ನುವುದು ಇದರಿಂದ ತಿಳಿದುಬರುತ್ತದೆ. ಇನ್ನೊಂದು ವಿಚಾರವನ್ನು ತಿಳಿದರೆ ನೀವು ಮೂಈಗಿನ ಮೇಲೆ ಬೆರಳಿಡುವುದು ಖಂಡಿತ. 70 ಲಕ್ಷ ಹಿಂದಿನ ಆಮೆಯ ಪಳೆಯುಳಿಕೆ ಸಿಕ್ಕಿದ್ದು ಎಲ್ಲಿ ಗೊತ್ತಾ? ವೆನಿಝುವೆಲಾದ ಮರುಭೂಮಿಯಲ್ಲಿ!

ಬದಲಾವಣೆ ಜಗದ ನಿಯಮ
ನೀರಿನಲ್ಲಿ ವಾಸಿಸುವ ಆಮೆಯ ಪಳೆಯುಳಿಕೆ ಮರುಭೂಮಿಯಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ನಿಮ್ಮೆಲ್ಲರ ಮನದಲ್ಲಿ ಮೂಡಿರಲೇಬೇಕಲ್ಲ. ಆಗಿನ ಕಾಲದಲ್ಲಿ ಆಮೆಗಳು ಮರುಭೂಮಿಯಲ್ಲಿ ವಾಸಿಸುತ್ತಿದ್ದವೇ? ಇಲ್ಲ. ಅದು ಹಾಗಲ್ಲ. ಇಂದು ಮರುಭೂಮಿ ಇರುವ ಪ್ರದೇಶ 70 ಲಕ್ಷ ವರ್ಷಗಳ ಹಿಂದೆ ಜಲಾನಯನ ಪ್ರದೇಶವಾಗಿತ್ತು ಎಂಬುದು ಅದರ ಅರ್ಥ. ಮೊದಲೇ ಹೇಳಿದಂತೆ ನಾವು ಇಂದು ನೋಡುತ್ತಿರುವ ಭೂಮಿ ಅಸಂಖ್ಯ ಬದಲಾವಣೆಗಳಿಗೆ ಒಳಗಾಗಿದೆ. ನಾವು ವಾಸಿಸುವ ಜಾಗವನ್ನೇ ಗಮನಿಸೋಣ. ಇಂದು ಇದ್ದಂತೆ ಒಂದು ತಿಂಗಳ ನಂತರ ಇರುವುದಿಲ್ಲ. ಹೊಸ ಕಟ್ಟಡ ಎದ್ದಿರುತ್ತದೆ, ರಸ್ತೆ ನಿರ್ಮಾಣಗೊಂಡಿರುತ್ತದೆ. ಅಂಗಡಿ ಮಳಿಗೆಗಳು ಸ್ಥಳಾಂತರಗೊಂಡಿರುತ್ತವೆ. ಇನ್ನು 70 ಲಕ್ಷ ವರ್ಷಗಳ ಕಾಲ ಭೂಮಿ ಒಂದು ಸ್ಥಳದಲ್ಲಿ ಒಂದೇ ವಾತಾವರಣವನ್ನು ಕಾಯ್ದುಕೊಂಡಿರುವುದು ಸಾಧ್ಯವೇ ಇಲ್ಲ.

ಆಮೆಗೆ ಕೊಂಬು
ಆ ಆಮೆ ಬದುಕಿದ್ದ ಕಾಲದಲ್ಲಿ ಡೈನೋಸಾರ್‌ಗಳು ಅಳಿವಿನಂಚಿನಲ್ಲಿದ್ದವು. ನೀರಿನಲ್ಲಿ ರಾಕ್ಷಸಾಕಾರದ ಮೊಸಳೆಗಳು ಈಜಾಡುತ್ತಿದ್ದವು. ವಿಜ್ಞಾನಿಗಳು ಆ ಆಮೆ ಸರೋವರದಲ್ಲಿಯೋ, ಹೊಳೆಯಲ್ಲಿಯೋ ಜೀವಿಸಿತ್ತು ಎಂದು ಊಹಿಸಿದ್ದಾರೆ. ಈ ಆಮೆಗೆ ಕೊಂಬು ಇದೆ ಎನ್ನುವುದು ಇನ್ನೊಂದು ಅಚ್ಚರಿಯ ಸಂಗತಿ. ಕೊಂಬುಗಳ ಮೇಲೆ ಕಲೆಗಳು, ಗುಳಿಗಳಿವೆ. ಅದರಿಂದ ಆಮೆ ಸ್ವಯಂರಕ್ಷಣೆಗೆ ಕೊಂಬನ್ನು ಬಳಸಿಕೊಳ್ಳುತ್ತಿತ್ತು ಎನ್ನುವುದನ್ನು ತಿಳಿಯಬಹುದು. ಕೊಒಂಬಿನ ಮೇಲಿನ ಗುರುತುಗಳು ಕಾದಾಟದಿಂದ ಸಂಭವಿಸಿದ್ದು ಎಂಬುದು ವಿಜ್ಞಾನಿಗಳ ಊಹೆ. ಹೀಗೆ ಜೀವ ವಿಜ್ಞಾನಿಗಳು ಒಂದು ಪಳೆಯುಳಿಕೆಯಿಂದ ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿಯ ಜೀವನಚರಿತ್ರೆಯನ್ನೇ ದಾಖಲಿಸುವುದು ಸೋಜಿಗವೇ ಸರಿ.

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.