ಮೂರು ಕಾಲಿನ ಕುರ್ಚಿ
Team Udayavani, Dec 21, 2017, 10:16 AM IST
ಒಂದು ದಿನ ಅಕ್ಬರ್ ಮತ್ತು ಬೀರಬಲ್ ವಾಯುವಿಹಾರಕ್ಕೆಂದು ತೆರಳಿದ್ದರು. ದಾರಿಮಧ್ಯೆ ಯಾವುದೋ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವಾಯಿತು. ಆಸ್ಥಾನದಲ್ಲಿ ಹೆಚ್ಚಿನವರು ಕುರುಡರು ಎಂಬುದು ಬೀರಬಲ್ಲನ ವಾದವಾಗಿತ್ತು. ಅದನ್ನೊಪ್ಪದ ಅಕºರ್ ಬೀರಬಲ್ಲನನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದನು.
ಮಾರನೇ ದಿನ ಬೀರಬಲ್ಲ ಆಸ್ಥಾನದಲ್ಲಿ ಮೂರು ಕಾಲಿನ ಕುರ್ಚಿಯನ್ನು ರಿಪೇರಿ ಮಾಡುತ್ತಿದ್ದನು. ಆಸ್ಥಾನಿಕರೆಲ್ಲರೂ ಅವನ ಬಳಿ ಬಂದು ಮೂರು ಕಾಲಿನ ಕುರ್ಚಿ ಕಂಡು ಆಶ್ಚರ್ಯಚಕಿತರಾಗಿ “ಏನಯ್ನಾ ಮಾಡುತ್ತಿದ್ದೀಯಾ’ ಎಂದು ಕೇಳತೊಡಗಿದರು. ಹಾಗೆ ಕೇಳಿದವರೆಲ್ಲರಿಗೂ ಬೀರಬಲ್ಲ ಶಾಂತಚಿತ್ತನಾಗಿ ಉತ್ತರಿಸುತ್ತಿದ್ದ. ಇನ್ನು ಕೆಲವರು “ಮೂರು ಕಾಲಿನ ಕುರ್ಚಿಯಲ್ಲಿ ಹೇಗೆ ಕೂರುವೆ?’ ಎಂದು ಪ್ರಶ್ನಿಸತೊಡಗಿದರು. ಅವರಿಗೂ ಸಮಾಧಾನದಿಂದ ಉತ್ತರ ಹೇಳಿದನು ಬೀರಬಲ್ಲ. ಸ್ವಲ್ಪ ಹೊತ್ತಿನಲ್ಲಿ ಅಕºರ್ ಬಂದು ನೆನ್ನೆಯ ಪಂದ್ಯದ ಬಗ್ಗೆ ಕೇಳಿದಾಗ, ಅವತ್ತು ಬೆಳಗ್ಗಿನಿಂದ ನಡೆದ ಘಟನೆಯನ್ನು ವಿವರಿಸಿದ. “ನಾನು ಮಾಡುತ್ತಿರುವುದನ್ನು ಕಣ್ಣಾರೆ ಕಂಡರೂ ತುಂಬಾ ಮಂದಿ ಏನು ಮಾಡುತ್ತಿರುವೆ ಎಂದು ಪ್ರಶ್ನಿಸಿದರು. ಅವರೆಲ್ಲರೂ ಕುರುಡರು. ಉಳಿದ ಕೆಲವರು ಮಾತ್ರ ದೃಷ್ಟಿಯಿರುವವರು’ ಎಂದು ತನ್ನ ವಾದವನ್ನು ಸಮರ್ಥಿಸಿಕೊಂಡ. ಅಕºರ ತನ್ನ ಸೋಲನ್ನು ಒಪ್ಪಿಕೊಂಡು ಬೀರಬಲ್ಲನನ್ನು ಆಲಂಗಿಸಿದ.
ಸಿದ್ದು ನಡವಿನಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.