ವಿಶ್ವದ ಇಬ್ಬರು ದಾಖಲೆ ವೀರರು!

Team Udayavani, Aug 17, 2017, 6:15 AM IST

vismaya.jpg

ಟರ್ಕಿ ದೇಶದಲ್ಲಿ ವಾಸವಾಗಿರುವ ಸುಲ್ತಾನ್‌ ಕೊಸೇನ್‌ ವಿಶ್ವದಲ್ಲಿಯೇ ಅತ್ಯಂತ ಎತ್ತರದ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾದವರು. ಸುಲ್ತಾನ್‌ ಅವರ ಎತ್ತರ 251 ಸೆಂಟಿಮೀಟರ್‌ (8 ಅಡಿ, 2.8 ಇಂಚು). ಅವರು ತಮ್ಮ ಬಿಡುವಿನ ಸಮಯದಲ್ಲಿ ಕೃಷಿಯಲ್ಲಿ ತೊಡಗುತ್ತಾರಂತೆ. ಇವರಿಗೆ ಸಂಗೀತ ಕೇಳುವುದು, ಕಂಪೂÂಟರ್‌ ಗೇಮ… ಆಡುವುದು ಮತ್ತು ಟಿವಿ ನೋಡುವುದು ತುಂಬಾ ಇಷ್ಟ.

ಹತ್ತು ವರ್ಷದವರೆಗೆ ಎಲ್ಲರಂತೆಯೇ ಸಾಧಾರಣ ಎತ್ತರ ಮತ್ತು ಮೈಕಟ್ಟನ್ನು ಸುಲ್ತಾನ್‌ ಹೊಂದಿದ್ದರು. 10 ವರ್ಷದ ನಂತರ ಅದೇನಾಯಿತೋ ಏನೋ ಏಕಾಏಕಿ ಬೆಳವಣಿಗೆ ಶುರುವಾಯಿತು.ಕಡಿಮೆ ಅವಧಿಯಲ್ಲೇ ಎತ್ತರೆತ್ತರಕ್ಕೆ ಬೆಳೆಯತೊಡಗಿದರು. ಮನೆಮಂದಿಯೆಲ್ಲಾ ಇದೇನೋ ಖಾಯಿಲೆ ಇರಬಹುದೆಂದು ಭಟಪಟ್ಟುಕೊಂಡಿದ್ದರು. ಆಮೇಲೆ ಆಸ್ಪತ್ರೆಗೆ ಹೋದಮೇಲೆ ಸುಲ್ತಾನ್‌ನನ್ನು ಪರೀಕ್ಷೆಗೊಳಪಡಿಸಿದ ಡಾಕ್ಟರ್‌ ಇದು ಕಾಯಿಲೆ ಅಲ್ಲ, ಬಗೆಹರಿಸಬಹುದಾದ ಸಮಸ್ಯೆ  ಎಂದು ಹೇಳಿದ ಮೇಲೆಯೇ ನಿರಾಳರಾಗಿದ್ದು. ಆತನ ದೇಹದಲ್ಲಿ ಎತ್ತರವನ್ನು ನಿರ್ಧರಿಸುವ ಹಾರ್ಮೋನು ಅತಿಯಾಗಿ ಉತ್ಪತ್ತಿಯಾಗುತ್ತಿದ್ದುದೇ ಇದಕ್ಕೆಲ್ಲಾ ಕಾರಣವಾಗಿತ್ತು. ಈ ಸಮಸ್ಯೆಗೆ ಡಾಕ್ಟರ್‌ ಸೂಚಿಸಿದ ಪರಿಹಾರ- ಶಸ್ತ್ರಚಿಕಿತ್ಸೆ. ಆಪರೇಷನ್‌ ನಂತರ ಆತನ ಬೆಳವಣಿಗೆ ನಿಯಂತ್ರಣಕ್ಕೆ ಬಂದಿತು.

ನಾವೆಲ್ಲಾ ಹೊಸಬಟ್ಟೆ ಖರೀದಿಸಲು ಸಂಭ್ರಮದಿಂದ ಅಂಗಡಿಗಳಿಗೆ ತೆರಳುತ್ತೇವೆ. ಆದರೆ ಸುಲ್ತಾನ್‌ಗೆ ಬಟ್ಟೆ ಶಾಪಿಂಗ್‌ ಮಾಡುವುದೆಂದರೆ ತುಂಬಾ ಕಷ್ಟದ ಕೆಲಸವಂತೆ. ಅವರ ಸೈಝಿನ ಬಟ್ಟೆಗಳು ಸಿಕ್ಕಬೇಕಲ್ಲ. ರೆಡಿಮೇಡ್‌ ಅಂಗಡಿಗಳಲ್ಲಿ ಆತನ ಸೈಝಿನ ಬಟ್ಟೆ ಮತ್ತು ಚಪ್ಪಲಿಗಳು ಇಲ್ಲವಾದ್ದರಿಂದ ದರ್ಜಿಯ ಬಳಿ ಹೊಲಿಸುತ್ತಾರಂತೆ. 2009ರಲ್ಲಿ ಜಗತ್ತಿನ ಅತಿ ಎತ್ತರದ ವ್ಯಕ್ತಿ ಎಂದು ಗಿನ್ನಿಸ್‌ ಪುಸ್ತಕದಲ್ಲಿ ಇವರ ಹೆಸರು ದಾಖಲಾಗಿದೆ. 

ಕುಳ್ಳರಲ್ಲಿ ಕುಳ್ಳ! 
ಎತ್ತರಕ್ಕಿರುವ ವ್ಯಕ್ತಿಯನ್ನೇನೋ ನೋಡಿದಿರಿ. ಇಲ್ಲಿ ಜಗತ್ತಿನ ಅತಿ ಕುಳ್ಳ ವ್ಯಕ್ತಿ ಇದ್ದಾರೆ. ಅವರನ್ನೂ ನೋಡಿ ಅಚ್ಚರಿಪಡಿ. ಅವರ ಹೆಸರು ಚಂದ್ರ ಬಹಾದ್ದೂರ್‌ ಧಾಂಗಿ. ಇವರು ನೇಪಾಳದ ರೀಂಖೋಲ್ಲಿ ಹಳ್ಳಿಯ ನಿವಾಸಿ. 

ಅವರ ಎತ್ತರ 54.6 ಸೆಂ. ಮೀ. ಮಾತ್ರ! ಇವರ ಹೆಸರು 2012 ರಲ್ಲಿ ಗಿನ್ನಿಸ್‌ ಪುಸ್ತಕದಲ್ಲಿ ದಾಖಲಾಗಿದೆ. ಈ ಹಿಂದೆ 57 ಸೆಂ. ಮೀ. ಉದ್ದವಿದ್ದ ಗುಲ… ಮೊಹಮದ್‌ ಎಂಬ ವ್ಯಕ್ತಿಯ ದಾಖಲೆಯನ್ನು ಚಂದ್ರ ಬಹಾದ್ದೂರ್‌ ಮುರಿದಿದ್ದಾರೆ.

ಇವರನ್ನು ಜಗತ್ತಿಗೆ ಪರಿಚಯಿಸಿದ್ದು ಅದೇ ಗ್ರಾಮದ ಒಬ್ಬ ಮರದ ವ್ಯಾಪಾರಿ. ಅವರು ತಮಗೆ ಪರಿಚಯವಿದ್ದ ಮಾಧ್ಯಮ ಮಿತ್ರರಿಗೆ ಚಂದ್ರ ಅವರ ಬಗ್ಗೆ ಹೇಳಿದ್ದರು. ನಂತರವೇ ಸ್ಥಳೀಯ ಮಾಧ್ಯಮಗಳು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಸುದ್ದಿ ಬಿತ್ತರಗೊಂಡು ಚಂದ್ರ ಬಹಾದ್ದೂರ್‌ ಅವರು ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಪಡೆದರು.

ಅವರಿಗೆ ಚಿಕ್ಕಂದಿನಿಂದಲೂ ಪ್ರಪಂಚವನ್ನು ಸುತ್ತಬೇಕೆನ್ನುವ ಆಸೆ. ಪ್ರಖ್ಯಾತಿಯನ್ನು ಹೊಂದಿದ ಮೇಲೆ ಅವರ ಆಸೆ ತನ್ನಿಂದ ತಾನೇ ಕೈಗೂಡಿತ್ತು. ಪ್ರಪಂಚದ ಅನೇಕ ದೇಶಗಳವರು ಚಂದ್ರ ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದವು. ಅವರನ್ನು ನೋಡಲು ಜನ ಮುಗಿಬಿದ್ದರು. ಇವನಿಗೆ ಮೂವರು ಸೋದರರು ಮತ್ತು ಇಬ್ಬರು ಸೋದರಿಯರು ಇದ್ದು, ಅವರೆಲ್ಲರೂ ನಾಲ್ಕು ಅಡಿ ಎತ್ತರವಿದ್ದಾರೆ. 2015ರಲ್ಲಿ ಚಂದ್ರ ಅವರು ಅಮೆರಿಕಾದಲ್ಲಿ ಕೊನೆಯುಸಿರಳಾದಾಗ ಅವರಿಗೆ 75 ವರ್ಷ ವಯಸ್ಸು.

ಅಪೂರ್ವ ಸಂಗಮ 
ವಿಶ್ವ ಗಿನ್ನಿಸ್‌ ಪುಸ್ತಕದ ಹತ್ತನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಜಗತ್ತಿನ ಅತಿ ಎತ್ತರದ ವ್ಯಕ್ತಿ ಸುಲ್ತಾನ್‌ ಮತ್ತು ಅತಿ ಕುಳ್ಳಗಿನ ಚಂದ್ರ ಬಹಾದ್ದೂರ್‌ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಅಂದು ಇಬ್ಬರೂ ಜೊತೆಯಾಗಿ ನಿಂತು ಕ್ಯಾಮೆರಾಗಳಿಗೆ ಪೋಸು ನೀಡಿದ್ದರು. ಅದನ್ನು ನೋಡುವುದೇ ಸೊಗಸು.

– ದಂಡಿನಶಿವರ ಮಂಜುನಾಥ್‌

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.