ಎಲ್ಲಾ ಮಾಯ ಕಡ್ಡಿಯೂ ಮಾಯ!
Team Udayavani, Mar 28, 2019, 6:00 AM IST
ಮನೆಯಲ್ಲಿ ತುರ್ತಾಗಿ ಕಾಫಿ ಮಾಡಬೇಕಿರುತ್ತದೆ. ಅಡುಗೆ ಮನೆಗೆ ದಾಪುಗಾಲಿಕ್ಕುವ ಅಮ್ಮ ಒಲೆ ಮೇಲೆ ಹಾಲಿಟ್ಟು ಇನ್ನೇನು ಗ್ಯಾಸ್ ಹಚ್ಚಲು ಬೆಂಕಿ ಪೆಟ್ಟಿಗೆ ತೆರೆಯುತ್ತಾಳೆ. ಅದರಲ್ಲೊಂದು ಕಡ್ಡಿಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅಷ್ಟರಲ್ಲಿ ಮಗರ ರಾಯ ಬಂದು ಅದೇನೋ ಮ್ಯಾಜಿಕ್ ಮಾಡುತ್ತಾನೆ. ಬೆಂಕಿ ಪೆಟ್ಟಿಗೆ ತೆರೆದರೆ ಅದರಲ್ಲಿ ಒಂದೂ ಕಡ್ಡಿಗಳಿರುವುದಿಲ್ಲ!
ಜಾದೂಗಾರ ಕಡ್ಡಿ ತುಂಬಿದ ಒಂದು ಬೆಂಕಿ ಪೊಟ್ಟಣವನ್ನು ತೋರಿಸುತ್ತಾನೆ. ಹೋಕಸ್ ಪೋಕಸ್, ಅಬ್ರಕ ಡಬ್ರ… ಎನ್ನುತ್ತಾ ಪುನಃ ಅದನ್ನು ತೋರಿಸಿದಾಗ ಕಡ್ಡಿಗಳೆಲ್ಲಾ ಮಂಗ ಮಾಯ! ಮನೆಯಲ್ಲಿ ಅಮ್ಮಂದಿರಿಗೆ ಕಾಟ ಕೊಡಲು ಇದೊಳ್ಳೆ ಉಪಾಯ ಎಂದು ಯೋಚಿಸುತ್ತಿರುವಿರಾ? ಅರೆ… ಬೆಂಕಿ ಪೊಟ್ಟಣದಿಂದಲೂ ಕಡ್ಡಿ ಮಾಯವಾಗುವುದಾದರೆ ಗ್ಯಾಸ್ ಹಚ್ಚುವ ಅಮ್ಮಂದಿರ ಪಡಿಪಾಟಲು ಎಷ್ಟು ಮಜಾ ಇರಬಹುದೆಂದು ಊಹೆ ಮಾಡುತ್ತಿರುವಿರಾ? ಆದರೆ ಕಾಟ ಕೊಡುವುದಕ್ಕೆ ಬದಲಾಗಿ ಅಮ್ಮಂದಿರ ಮುಂದೆ ಈ ಮ್ಯಾಜಿಕ್ ಪ್ರದರ್ಶಿಸಿ. ಖಂಡಿತ ಖುಷಿ ಪಡುತ್ತಾರೆ.
ಬೇಕಾದ ವಸ್ತುಗಳು:
ಒಂದು ಬೆಂಕಿ ಪೊಟ್ಟಣ ಮತ್ತು ಅದರ ಲೇಬಲ್‌ನಂತೆಯೇ ಇರುವ ಇನ್ನೊಂದು ಲೇಬಲ್.
ತಂತ್ರ:
ಬೆಂಕಿ ಪೊಟ್ಟಣದ ಕಡ್ಡಿಗಳನ್ನೆಲ್ಲ ಖಾಲಿ ಮಾಡಿ. ಡ್ರಾಯರಿನ ಹಿಂಭಾಗಕ್ಕೆ ಕೆಲವು ಕಡ್ಡಿಗಳನ್ನು ಅಂಟಿಸಿ (ಚಿತ್ರ 1). ಡ್ರಾಯರನ್ನು ಪುನಃ ಪೊಟ್ಟಣದ ಒಳಗೆ ತಳ್ಳಿ. ಪೊಟ್ಟಣದ ಬೆನ್ನಿಗೆ ಇನ್ನೊಂದು ಲೇಬಲನ್ನು ಅಂಟಿಸಿ. ಈಗ ಐಟಂ ರೆಡಿ. ಪ್ರೇಕ್ಷಕರಿಗೆ ಕಡ್ಡಿ ಇರುವ ಕಡೆಯ ಡ್ರಾಯರನ್ನು ಅರ್ಧಕ್ಕೆ ತೆರೆದು ತೋರಿಸಿ (ಚಿತ್ರ 2). ಅದನ್ನು ಮುಚ್ಚಿ “ಹೋಕಸ್ ಪೋಕಸ್, ಅಬ್ರಕ ಡಬ್ರ..’ ಅನ್ನುತ್ತಿರಬೇಕಾದರೆ ಪೊಟ್ಟಣವನ್ನು ಉಲ್ಟಾ ಮಾಡಿ. ಈಗ ತೆರೆದು ತೋರಿಸಿದರೆ ಕಡ್ಡಿಗಳೆಲ್ಲಾ ಮಾಯವಾಗಿರುತ್ತದೆ. (ಚಿತ್ರ 3)
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.