ಈ ಪ್ರಾಣಿಗಳಿಗೆ ಎರಡು ತಲೆಗಳು ಏಕಿವೆ?
Team Udayavani, Mar 1, 2018, 2:45 PM IST
ಒಂದರ ಜೊತೆ ಇನ್ನೊಂದು ಉಚಿತ ಎನ್ನುವ ಆಫರ್ ಪ್ರಕೃತಿಯಲ್ಲಿಲ್ಲ. “ಹೇರ್ ಸ್ಟ್ರೀಕ್’ ಅಂತ ಒಂದು ಚಿಟ್ಟೆಯ ಪ್ರಭೇದ. ಅದಕ್ಕೆ ಎರಡು ತಲೆ. ಒಂದು ಒರಿಜಿನಲ್, ಇನ್ನೊಂದು ಡೂಪ್ಲಿಕೇಟ್. ಇದೇನಪ್ಪಾ ವಿಚಿತ್ರ ಎಂದು ತಲೆ ಕೆರೆದುಕೊಳ್ಳಬೇಡಿ. ತಲೆ ಹಾಳಾದರೆ ನಮಗೆ, ನಿಮಗೆ ಇರುವುದು ಒಂದೇ ತಲೆ ನೆನಪಿರಲಿ. “ಉಂಗುರ ಕತ್ತಿನ ಹಾವು’ ಅಂತ ಒಂದು ಹಾವಿನ ಪ್ರಭೇದ. ಇದರ ವಿಶೇಷತೆಯೇನೆಂದರೆ, ದೇಹದ ಅರ್ಧ ಭಾಗ ಕಪ್ಪು ಬಣ್ಣವಾದರೆ, ಉಳಿದರ್ಧ ಭಾಗ ಕಿತ್ತಳೆ ಬಣ್ಣದಲ್ಲಿದೆ.
ಇದರ ಬಾಲವೂ ತಲೆಯ ಆಕಾರದಲ್ಲೇ ಇದೆ. ಪ್ರಾಣಿ ಪ್ರಪಂಚದಲ್ಲಿ ಈ ರೀತಿ ಒರಿಜಿನಲ್, ಡೂಪ್ಲಿಕೇಟ್ ಭಾಗಗಳು ಯಾಕಿವೆ ಗೊತ್ತೆ? ಶತ್ರುಗಳನ್ನು ವಂಚಿಸಲು! ಹಿಂದೆ ಬೇಟೆಗೆ ಹೊರಡುವಾಗ ಬೇಟೆಗಾರರು ತಲೆಯ ಹಿಂದೆ ಮನುಷ್ಯರ
ಮುಖವಾಡ ಧರಿಸಿ ಹೋಗುತ್ತಿದ್ದರು. ಏಕೆಂದರೆ ಹುಲಿ ಅಥವಾ ಯಾವುದೇ ಕ್ರೂರ ಪ್ರಾಣಿಗಳು ಹಿಂದಿನಿಂದ ದಾಳಿ ಮಾಡದಿರಲಿ ಎಂದು. ಈ ವಿಧಾನದ ಅಸಲೀಯತ್ತು ನಿಜವೆಂದು ಬಹಳಷ್ಟು ಸಲ ಸಾಬೀತೂ ಆಗಿದೆ. ಈ ಉಪಾಯ
ಪ್ರಕೃತಿಯಲ್ಲೇ ಇದೆಯೆನ್ನುವುದಕ್ಕೆ, “ಹೇರ್ ಸ್ಟ್ರೀಕ್ ಚಿಟ್ಟೆ’ ಮತ್ತು “ಉಂಗುರ ಕತ್ತಿನ ಹಾವು’ ಸಾಕ್ಷಿ. ಇವುಗಳ ಡೂಪ್ಲಿಕೇಟ್ ತಲೆಗಳನ್ನು ನಿಜವೆಂದು ಭ್ರಮಿಸಿ ಶತ್ರುಗಳು ಹೊಂಚು ಹಾಕಿದರೆ ತಪ್ಪಿಸಿಕೊಳ್ಳುವುದು ಇವುಗಳಿಗೆ ಅತ್ಯಂತ ಸುಲಭ. ಇದೇ ಎರಡು ತಲೆಯಿರುವುದರ ಹಿಂದಿನ ರಹಸ್ಯ ಮತ್ತು ಅದರಿಂದ ಆಗುವ ಉಪಯೋಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.