ದುಡ್ಡೆಲಿ ಹೋಯ್ತು ?
ಗಿಲಿ ಗಿಲಿ ಮ್ಯಾಜಿಕ್
Team Udayavani, Jun 13, 2019, 5:00 AM IST
ಜಾದೂಗಾರ ತನ್ನ ಅಂಗೈ ಮೇಲೆ ಒಂದು ನಾಣ್ಯವನ್ನು ಇಟ್ಟು ಅದನ್ನು ಕರವಸ್ತ್ರದಿಂದ ಮುಚ್ಚುತ್ತಾನೆ. ಪ್ರೇಕ್ಷಕರು ಅದನ್ನು ಪರೀಕ್ಷಿಸಿ ನಾಣ್ಯ ಕೈ ಮೇಲೆಯೇ ಇದೆ ಎಂದು ದೃಢ ಪಡಿಸುತ್ತಾರೆ. ಜಾದೂಗಾರನು ಕರವಸ್ತ್ರವನ್ನು ತೆಗೆಯುತ್ತಿದ್ದಂತೆಯೇ ನಾಣ್ಯ ಮಾಯವಾಗಿರುತ್ತದೆ.
ತಂತ್ರ:
ಇದೊಂದು ಅತಿ ಸರಳ ಮ್ಯಾಜಿಕ್. ಇದನ್ನು ಮಾಡಬೇಕಾದರೆ ನಿಮ್ಮ ಸಹಾಯಕರೊಬ್ಬರನ್ನು ಪ್ರೇಕ್ಷಕರ ನಡುವೆ ಮೊದಲೇ ಕೂರಿಸಬೇಕು. ಆತ ನಿಮ್ಮವನೇ ಎಂದು ಯಾರಿಗೂ ಗೊತ್ತಾಗದಂತೆ ಜಾಗೃತೆ ವಹಿಸಬೇಕು. ವೇದಿಕೆಗೆ ಮೂರು ನಾಲ್ಕು ಮಂದಿ ಪ್ರೇಕ್ಷಕರನ್ನು ಕರೆಯಿರಿ. ಅದರಲ್ಲಿ ನಿಮ್ಮ ಸಹಾಯಕರೂ ಒಬ್ಬರಾಗಿರಲಿ. ಇವರಿಗೆ ಕಾಣಿಸುವಂತೆ ನಾಣ್ಯವನ್ನು ಅಂಗೈ ಮೇಲೆ ಇಟ್ಟು ಕರವಸ್ತ್ರವನ್ನು ಮುಚ್ಚಿ. ಒಬ್ಬೊಬ್ಬರನ್ನೇ ಕರೆದು ನಾಣ್ಯವು ಅಂಗೈಯಲ್ಲೇ ಇದೆಯಾ ಎಂದು ಕರವಸ್ತ್ರದೊಳಗೆ ಕೈ ಹಾಕಿ ಖಚಿತಪಡಿಸಿಕೊಳ್ಳುವಂತೆ ಹೇಳಿ. ಕೊನೆಗೆ ನಿಮ್ಮ ಸಹಾಯಕನು ಕೈ ಹಾಕಿ ಪರೀಕ್ಷಿಸುವವನಂತೆ ನಟಿಸಿ ನಾಣ್ಯವನ್ನು ಅಲ್ಲಿಂದ ತೆಗೆದು ರಹಸ್ಯವಾಗಿ ಜೇಬಿಗೆ ಇಳಿಸುತ್ತಾನೆ. ಈಗ ಕರವಸ್ತ್ರವನ್ನು ನಿಧಾನವಾಗಿ ತೆಗೆದಾಗ ನಾಣ್ಯ ಮಾಯವಾಗಿರುತ್ತದೆ.
ನಿರೂಪಣೆ: ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.