ಪ್ರಾಣಿ ಪ್ರಪಂಚದ ಟ್ರಾಫಿಕ್ ನಿಯಮಗಳ ಪ್ರಚಾರ ರಾಯಭಾರಿ ಯಾರು?
Team Udayavani, Apr 5, 2018, 11:31 AM IST
ರಸ್ತೆಯ ಇಕ್ಕೆಲಗಳಲ್ಲಿ “ನಿಧಾನವಾಗಿ ಚಲಿಸಿ’ ಬೋರ್ಡು ಹಾಕಿರುತ್ತಾರೆ. ಸಾಲದ್ದಕ್ಕೆ ಸರಕಾರ, ಸಿನಿಮಾ ಸೆಲೆಬ್ರಿಟಿಗಳ ಚಿತ್ರಗಳ ಜೊತೆಗೆ ಮತ್ತ ದೇ ಹಳೆಯ ಸಂದೇಶ ಬಳಸಿ, ಅವರೇ ಸ್ವತಃ ಸಂದೇಶ ಹೇಳುತ್ತಿರುವಂತೆಯೂ ಬೋರ್ಡ್‌ಗಳನ್ನು ನಿಲ್ಲಿಸಿರುತ್ತಾರೆ. ನಿಧಾನವಾಗಿ ಯೋಚಿಸಿದರೆ ತಿಳಿಯುವುದೇನೆಂದರೆ “ನಿಧಾನವಾಗಿ ಚಲಿಸಿ’ ಜಾಹೀರಾತಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಸೂಕ್ತ ಅಭ್ಯರ್ಥಿಯೆಂದರೆ “ಬಸವನ ಹುಳು’, ಏನಂತೀರಾ? ಸ್ಪೀಡ್ ಕಾರುಗಳ ಶೋಕಿ ಉಳ್ಳ, ರಸ್ತೆ ನಿಯಮ ಉಲ್ಲಂ ಸಿ ದಂಡ ತೆರುವ, ಮತ್ತೂ ಕೆಲವೊಮ್ಮೆ “ಆ್ಯಕ್ಸಿಡೆಂಟ್’ ಮಾಡಿ ಜೈಲು ಸೇರುವ, ಸೇರಿ ಹೊರಗೆ ಬರುವ ಅನೇಕರಿಗಿಂತ ಅವ್ಯಾವುದನ್ನೂ ಮಾಡದ ಬಸವನ ಹುಳು ಒಳ್ಳೆಯದಲ್ಲವೇ!
ಎಂಥ ತುರ್ತು ಪರಿಸ್ಥಿತಿಯಿದ್ದರೂ ಬಸವನ ಹುಳುವಿನ ಅವಸರವಿಲ್ಲದ ನಿರುಮ್ಮಳ ನಡಿಗೆ ನಮಗೆಲ್ಲರಿಗೂ ಮಾದರಿ. ಆದರೆ ಇವುಗಳ ಅತಿ ನಿಧಾನವೇ ಅವುಗಳ ಜೀವಕ್ಕೆ ಸಂಚಕಾರ ತರುತ್ತಿರುವುದು ವಿಪರ್ಯಾಸ. ರಸ್ತೆ ದಾಟಲು ಗಂಟೆಗಳಷ್ಟು ಸಮಯ ತೆಗೆದುಕೊಳ್ಳುವ ಬಸವನಹುಳುಗಳು ಪೂರ್ತಿಯಾಗಿ ರಸ್ತೆ ದಾಟುವ ಮುನ್ನವೇ ವಾಹನಗಳಿಗೆ ಸಿಕ್ಕಿ ಸಾಯುವುದು ತಿಳಿದಿರುವುದೇ. ರೋಡಿನಿಂದ ಯಾವುದೇ ಪ್ರಾಣಿ ಅಡ್ಡ ಬಂದರೂ ಗಾಡಿ ನಿಲ್ಲಿಸಬಹುದು. ಜಿಂಕೆ ಮುಂತಾದ ಕಾಡು ಪ್ರಾಣಿಗಳು ಅಡ್ಡ ಬಂದರೆ ಕಾನೂನು ಪ್ರಕಾರ ನಿಲ್ಲಿಸಲೇಬೇಕು. ಅದರ ಮೇಲೆ ಹಾಯ್ದರೆ ಫಾರೆಸ್ಟ್ ಗಾರ್ಡ್ ಬಿಡ. ಬೆಕ್ಕು ಅಡ್ಡ ಬಂದರಂತೂ ಶಾಸ್ತ್ರ ಪ್ರಕಾರವಾಗಿ ನಿಲ್ಲಿಸಬೇಕು. ಇಲ್ಲವಾದರೆ ಶನಿ ದೇವ ಬಿಡ. ಆದರೆ ಬಸವನಹುಳುಗಳಿಗೆ ಈ ಸವಲತ್ತುಗಳಿಲ್ಲ. ರಸ್ತೆ ಮಧ್ಯೆ ಬಸವನಹುಳು ಎಲ್ಲಿದೆಯೆಂದು ಭೂತಗನ್ನಡಿ ಇಟ್ಟುಕೊಂಡು ಗಾಡಿ ಓಡಿಸಲಾದೀತೇ? ಇದರಿಂದ ತಿಳಿದು ಬರುವುದೇನೆಂದರೆ ಅತಿ ನಿಧಾನವೂ ಒಳ್ಳೆಯದಲ್ಲ ಎನ್ನುವುದು. ಇದಕ್ಕೆ ಪರಿಹಾರವೆಂದರೆ ಬಸವನಹುಳುಗಳಿಗೂ ಹೆಲ್ಮೆಟ್ ಕಡ್ಡಾಯ ಮಾಡುವುದು ಅಥವಾ “ಝೀಬ್ರಾ ಕ್ರಾಸಿಂಗ್’ನಂತೆ ಬಸವನಹುಳುಗಳಿಗೆಂದೇ ಪ್ರತ್ಯೇಕವಾಗಿ “ಸ್ನೇಲ್ ಕ್ರಾಸಿಂಗ್’ ನಿರ್ಮಿಸಬೇಕಷ್ಟೇ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.