ಮಂಚದ ಕೆಳಗೆ ಯಾರಲ್ಲಿ?

Team Udayavani, Nov 2, 2017, 1:44 PM IST

02-29.jpg

ಒಂದು ದಿನ ಗುಂಡಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಎದುರಿನಿಂದ ಒಬ್ಟಾತ ಬರುತ್ತಿದ್ದ. ಅವನ ಮುಖದಲ್ಲಿ ಚಿಂತೆ ಕಾಣಿಸುತ್ತಿತ್ತು. ನಸ್ರುದ್ದೀನ್‌ ಸುಮ್ಮನಿರಲಾರದೆ ಅವನನ್ನು ನಿಲ್ಲಿಸಿ ಕೇಳಿಯೇಬಿಟ್ಟ “ಏನಪ್ಪಾ ನಿನ್ನ ಚಿಂತೆ? ಅದ್ಯಾಕೆ ಮುಖ ಇಂಗು ತಿಂದ ಮಂಗನಂತಾಗಿದೆ?’ ಅಂತ. ಅದಕ್ಕೆ ಆ ವ್ಯಕ್ತಿ, “ಏನು ಹೇಳ್ಳೋದು… ತುಂಬಾ ದಿನದಿಂದ ನನಗೊಂದು ಕೆಟ್ಟ ಕನಸು ಬೀಳುತ್ತಿದೆ. ನನ್ನ ಮಂಚದ ಅಡಿ ಯಾರೋ ಅಡಗಿ ಕುಳಿತಂತೆ ಕನಸು. ಎದ್ದು ನೋಡಿದರೆ ಅಲ್ಲಿ ಯಾರೂ ಇರುವುದಿಲ್ಲ. ರಾತ್ರಿಯಿಡೀ ನಿದ್ರೆ ಇಲ್ಲದೆ ನೆಮ್ಮದಿ ಹಾಳಾಗಿಹೋಗಿದೆ. ಇಲ್ಯಾರೋ ಒಬ್ಬರು ನೂರು ನಾಣ್ಯಗಳನ್ನು ಕೊಟ್ಟರೆ ಇಂಥ ಸಮಸ್ಯೆಗಳನ್ನೆಲ್ಲ ಪರಿಹರಿಸುತ್ತಾರಂತೆ. ಅವರಲ್ಲಿಗೇ ಹೋಗುತ್ತಿದ್ದೇನೆ. ಆದರೂ ನೂರು ನಾಣ್ಯ ಬಹಳ ಜಾಸ್ತಿಯಾಯ್ತು’ ಅಂತ ಗೊಣಗಿದ. ಸಮಸ್ಯೆ ಕೇಳಿದ ಗುಂಡಪ್ಪ “ತಮ್ಮಾ, ಕೇವಲ ಇಪ್ಪತ್ತು ನಾಣ್ಯಗಳಿಗೆ ನಿನ್ನ ಸಮಸ್ಯೆಗೆ ಪರಿಹಾರ ನೀಡುತ್ತೇನೆ’ ಎಂದ. ಆ ವ್ಯಕ್ತಿ ತಕ್ಷಣ ಜೇಬಿನಿಂದ ನಾಣ್ಯಗಳನ್ನು ತೆಗೆದು ಗುಂಡಪ್ಪನಿಗಿತ್ತ. ಹಣವನ್ನು ಕಿಸೆಗಿಳಿಸಿ ಗುಂಡಪ್ಪ, “ನೀನು ಇವತ್ತಿನಿಂದ ಚಾಪೆ ಹಾಸಿಕೊಂಡು ನೆಲದ ಮೇಲೆ ಮಲಗು ತಮ್ಮಾ, ಅದ್ಯಾರು ನುಸುಳುತ್ತಾರೆ ನೋಡಿಯೇ ಬಿಡೋಣ!’ ಎಂದು ಕೈಬೀಸಿಕೊಂಡು ಹೋದ.

ಗುಣಗಾನದಿಂದಾದ ನಷ್ಟ
ಗುಂಡಪ್ಪನ ಬಳಿ ಕತ್ತೆಯೊಂದಿತ್ತು. ಹೂಜಾನಿಗೆ ಅದರ ಮೇಲೆ ಅಸಡ್ಡೆ. ಈ ಸೋಮಾರಿ ಕತ್ತೆಯನ್ನು ಸಾಕುವುದಕ್ಕಿಂತ ಮಾರುವುದು ಲೇಸು ಅಂದುಕೊಂಡು ಅದನ್ನು ಸಂತೆಗೆ ಹೊಡೆದುಕೊಂಡು ಹೋದ. ಅಲ್ಲಿ ವ್ಯಾಪಾರಿಯೊಬ್ಬನಿಗೆ 3000 ರೂ.ಗಳಿಗೆ ಕತ್ತೆಯನ್ನು ಮಾರಿದ. ಆ ವ್ಯಾಪಾರಿ ಕತ್ತೆಯನ್ನು ಹರಾಜಿಗೆ ಇಟ್ಟು, ಕತ್ತೆಯ ಗುಣಗಳನ್ನು ಹಾಡಿ ಹೊಗಳತೊಡಗಿದ. “ಇದು ಅಂತಿಂಥ ಕತ್ತೆಯಲ್ಲ. ಕತ್ತೆಗಳಲ್ಲೇ ಅತ್ಯುತ್ತಮ ಕತ್ತೆ. ಇದರ ಬಲಿಷ್ಠವಾದ ಕಾಲುಗಳನ್ನು ನೋಡಿ. ಇದು ಮೂರು ಕತ್ತೆಗಳ ಕೆಲಸವನ್ನು ಮಾಡುತ್ತದೆ’. ಕತ್ತೆಯ ಗುಣಗಾನ ಗುಂಡಪ್ಪನ ಕಿವಿಗೆ ಬಿತ್ತು! ಅರೇ, ನನ್ನ ಸೋಮಾರಿ ಕತ್ತೆ ಇಷ್ಟೊಂದು ಶ್ರೇಷ್ಠವೇ ಎಂದು ಆತ ಚಕಿತನಾದ. ಹರಾಜಿನಲ್ಲಿ ಕತ್ತೆ ಎಷ್ಟು ಬೆಲೆಗೆ ಹೋಗಬಹುದೆಂದು ಅಲ್ಲಿಯೇ ನಿಂತು ಕುತೂಹಲದಿಂದ ಗಮನಿಸತೊಡಗಿದ. ಜನರೆಲ್ಲ ಕತ್ತೆಯನ್ನು ಮೆಚ್ಚಿದರು. ಒಬ್ಬ “4,000′ ಎಂದು ಕೂಗಿದ, ಇನ್ನೊಬ್ಬ “5,000′ ಎಂದ, ಮತ್ತೂಬ್ಬ “5,500’…ಹೀಗೆ ಕತ್ತೆಯ ಬೆಲೆ ಏರತೊಡಗಿತು. ಗುಂಡಪ್ಪ ನಿಂತಲ್ಲೇ ಚಡಪಡಿಸಿದ. ಇಷ್ಟು ಒಳ್ಳೆಯ ಕತ್ತೆಯನ್ನು ಮಾರಿಬಿಟ್ಟೆನಲ್ಲ ಎಂದು ಪಶ್ಚಾತ್ತಾಪಪಟ್ಟ. ಇನ್ನೇನು 6000 ರೂ.ಗಳಿಗೆ ಕತ್ತೆ ಮಾರಾಟವಾಗುವುದರಲ್ಲಿತ್ತು. ಆಗ ಗುಂಡಪ್ಪನೇ “7,000 ರೂ.’ ಎಂದು ಜೋರಾಗಿ ಕೂಗಿ, ದುಡ್ಡು ತೆತ್ತು ಕತ್ತೆಯನ್ನು ವಾಪಸ್‌ ಕರೆದುಕೊಂಡು ಹೊರಟ!

ಪ್ರಿಯಾ

ಟಾಪ್ ನ್ಯೂಸ್

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.