ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು!


Team Udayavani, Feb 15, 2018, 12:15 PM IST

rubber-ball.jpg

ಚಿತ್ರವಿಚಿತ್ರ ದಾಖಲೆಗಳನ್ನು ಮಾಡುತ್ತಾ ವಿಶ್ವದಾಖಲೆಗೆ ಪಾತ್ರರಾಗುವ ಅನೇಕ ಸಾಹಸಿಗರನ್ನು ನೋಡುತ್ತಿರುತೆ ¤àವೆ, ಅವರ ಬಗ್ಗೆ ಕೇಳುತ್ತಿರುತ್ತೇವೆ. ಅಂಥ ದಾಖಲೆಗಳ ಪಟ್ಟಿಗೆ ಹೊಸದೊಂದು ದಾಖಲೆ ಸೇರ್ಪಡೆಯಾಗಿದೆ. 

ಉದ್ದಕ್ಕೆ-ದಪ್ಪಕ್ಕೆ ಮೀಸೆ ಬಿಡುವುದು, ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳೋದು, ಗಿರಿಜಾ ಮೀಸೆಯಿಂದ ಟ್ರಕ್‌ ಎಳೆಯೋದು, ಉದ್ದದ ಬಾವುಟ ಹಾರಿಸೋದು, ದೊಡ್ಡ ಚಪಾತಿ ಮಾಡೋದು….ಹೀಗೆ ಜನ ಚಿತ್ರ-ವಿಚಿತ್ರ ರೀತಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸುತ್ತಾರೆ. ಈಗ ಅಂಥ ದಾಖಲೆಗಳ ಪಟ್ಟಿಗೆ ಮತ್ತೂಂದು ಸಾಹಸಗಾಥೆ ಸೇರ್ಪಡೆಯಾಗಿದೆ. ಫ್ಲೋರಿಡಾದ ಲ್ಯಾಂಡರ್‌ಹಿಲ್‌ ಎಂಬಲ್ಲಿನ ಚಿಕ್ಕ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಜೋಯಲ್‌ ಕೀರು ಎಂಬಾತ ಹೊಸದೊಂದು ದಾಖಲೆ ಸೃಷ್ಟಿಸಿ “ದಾಖಲೆ ವೀರ’ ಅನಿಸಿಕೊಂಡಿದ್ದಾನೆ. 

ಈತನ ಸಾಧನೆಯಾದರೂ ಏನು ಅಂತ ಯೋಚಿಸ್ತಾ ಇದ್ದೀರ? ಜೋಯಲ್‌ ಒಂದು ರಬ್ಬರ್‌ ಚೆಂಡು ತಯಾರಿಸಿದ್ದಾನೆ. ಅಷ್ಟೇನಾ, ಅಂತ ಮೂಗು ಮುರಿಯಬೇಡಿ. ಅದು ಸಾಧಾರಣ ರಬ್ಬರ್‌ ಚೆಂಡಲ್ಲ ಅನ್ನೋದೇ ಅದರ ವಿಶೇಷ. ಆ ಚೆಂಡು ತಯಾರಾಗಿರೋದು ರಬ್ಬರ್‌ನಿಂದ ಅಲ್ಲ, ಬದಲಿಗೆ ರಬ್ಬರ್‌ ಬ್ಯಾಂಡ್‌ಗಳಿಂದ. ಸುಮಾರು 1,75,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಆತ ಈ ರಬ್ಬರ್‌ ಚೆಂಡನ್ನು ತಯಾರಿಸಿದ್ದಾನೆ. ಅದು ಸುಮಾರು  8 ಅಡಿ (2.4ಮೀ)ಎತ್ತರ ಹಾಗೂ 25 ಅಡಿ 4 ಇಂಚು (6.7 ಮೀ) ವ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲ, ಆ ಚೆಂಡಿನ ತೂಕ ಎಷ್ಟು ಗೊತ್ತಾ? ಬರೋಬ್ಬರಿ 4,097 ಕೆ.ಜಿ  (9,032 ಪೌಂಡ್‌) 

ದಾಖಲೆ ಬರೆದ ಚೆಂಡು:
ಈ ರಬ್ಬರ್‌ ಚೆಂಡು 2008ರಲ್ಲಿಯೇ “ಜಗತ್ತಿನ ಅತಿ ದೊಡ್ಡ ಮಾನವ ನಿರ್ಮಿತ ರಬ್ಬರ್‌ ಚೆಂಡು’ ಎಂಬ  ಕೀರ್ತಿಗೆ 
ಭಾಜನವಾಯಿತಲ್ಲದೇ, ವಿಶ್ವದಾಖಲೆಯೊಂದಿಗೆ ಗಿನ್ನಿಸ್‌ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿತು. ಜೋಯಲ್‌ ಕೀರು ತನ್ನ ಕೆಲಸದ ನಂತರದ ಬಿಡುವಿನ ವೇಳೆಯನ್ನು ಈ ಚೆಂಡು ತಯಾರಿಕೆಗಾಗಿ ವ್ಯಯಿಸಿದ್ದಲ್ಲದೆ, 2005ರ ನವೆಂಬರ್‌ನಿಂದ 2006ರ ನವೆಂಬರ್‌ವರೆಗೆ ಪೂರ್ಣ ಪ್ರಮಾಣದಲ್ಲಿ ಚೆಂಡು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ಅಬ್ಬಬ್ಟಾ, ದಾಖಲೆಗಾಗಿ ಜನ ಎಷ್ಟೆಲ್ಲಾ ಕಷ್ಟ ಪಡ್ತಾರೆ ಅಲ್ವಾ?

ಈ ಹಿಂದೆ 1999ರಲ್ಲಿ ಡೆಲಾವೇರ್‌ ಜಾನ್‌ಬೈನ್‌ ಎಂಬಲ್ಲಿ ಸ್ಟೀವ್‌ ಮಿಲ್ಟನ್‌ ಎಂಬಾತ ಸುಮಾರು 85,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಚೆಂಡೊಂದನ್ನು ತಯಾರಿಸಿದ್ದ. 1600 ಕಿಲೋಗ್ರಾಂ ತೂಕದ ಆ ಚೆಂಡು ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು ಎಂಬ  ವಿಶ್ವದಾಖಲೆಗೆ ಪಾತ್ರವಾಗಿತ್ತು. ಆ ದಾಖಲೆಯನ್ನು ಜೋಯಲ್‌ ಮುರಿದಿದ್ದಷ್ಟೇ ಅಲ್ಲ, ಹಳೆಯದ್ದಕ್ಕಿಂತ ಸರಿಸುಮಾರು ಮೂರುಪಟ್ಟು ತೂಕದ, ಅದಕ್ಕಿಂತ ದುಪ್ಪಟ್ಟು ಜಾಸ್ತಿ ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ದಾಖಲೆಯ ಚೆಂಡನ್ನು ನಿರ್ಮಿಸಿದ್ದಾನೆ. 

-ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.