12 ಐಪಿಎಲ್‌ನಲ್ಲಿ 18 ಹ್ಯಾಟ್ರಿಕ್ ವಿಕೆಟ್!
ವೇಗಿ ಬಾಲಾಜಿಯಿಂದ ಕರನ್‌ವರೆಗಿನ ಸಾಧನೆ
Team Udayavani, Apr 6, 2019, 6:00 AM IST
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ನಮ್ಮ ಬೆಂಗಳೂರು (ಆರ್‌ಸಿಬಿ) ತಂಡ ಕಳಪೆ ನಿರ್ವಹಣೆ ನೀಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸತತ ಸೋಲುಗಳನ್ನೇ ಮನೆಯನ್ನಾಗಿ ಮಾಡಿಕೊಂಡಿರುವ ಆರ್‌ಸಿಬಿಗೆ ಇನ್ನೂ ಅದೃಷ್ಟವೆಂಬುದು ಮರೀಚಿಕೆಯಾಗಿಯೇ ಉಳಿದಿದೆ. ಕೊಹ್ಲಿ ಪಡೆಯೀಗ ಸಂಪೂರ್ಣವಾಗಿ ದಿಕ್ಕು ತಪ್ಪಿದೆ. ಬೆನ್ನಲ್ಲೇ ಅಭಿಮಾನಿಗಳಿಂದ ವ್ಯಾಪಕ ಟೀಕೆಗಳೂ ವ್ಯಕ್ತವಾಗಿದೆ.
ಇದೆಲ್ಲದರ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಯಾಮ್ ಕರಣ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಭಾರೀ ಸುದ್ದಿಯಾಗಿದ್ದಾರೆ. ಐಪಿಎಲ್‌ನಲ್ಲಿ ಇಂತಹ ಸಾಧನೆ ಮಾಡಿದ 6ನೇ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. ಇದು 12ನೇ ಆವೃತ್ತಿ ಐಪಿಎಲ್‌ನ ಮೊದಲ ಹ್ಯಾಟ್ರಿಕ್, ಒಟ್ಟಾರೆ ಐಪಿಎಲ್‌ನ 18ನೇ ಹ್ಯಾಟ್ರಿಕ್ ಎನ್ನುವುದು ವಿಶೇಷ. ಈ ನಿಟ್ಟಿನಲ್ಲಿ ಇನ್ನೂ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಕರನ್ ಸಾಧನೆ, ಒಟ್ಟಾರೆ 18 ಹ್ಯಾಟ್ರಿಕ್ ವೀರರ ಪಟ್ಟಿಯನ್ನು ನೀಡಲಾಗಿದೆ.
ಹ್ಯಾಟ್ರಿಕ್‌ನಲ್ಲಿ ಭಾರತೀಯರದ್ದೇ ಮೇಲುಗೈ: ದಾಖಲಾಗಿರುವ ಒಟ್ಟಾರೆ ಹ್ಯಾಟ್ರಿಕ್‌ನಲ್ಲಿ ವಿದೇಶಿ ಕ್ರಿಕೆಟಿಗರಿಗಿಂತ ಭಾರತೀಯರ ಪಾರಮ್ಯವೇ ಹೆಚ್ಚು. ಲಕ್ಷೀಪತಿ ಬಾಲಾಜಿ ಐಪಿಎಲ್‌ನ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್ ಆಗಿದ್ದಾರೆ. ಇನ್ನು ಅಮಿತ್ ಮಿಶ್ರಾ (3 ಸಲ) ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರರಾದರೆ ಯುವರಾಜ್ ಸಿಂಗ್ 2ನೇ ಸಲ ಹ್ಯಾಟ್ರಿಕ್ ಪಡೆದ 2ನೇ ಅತ್ಯಂತ ಯಶಸ್ವಿ ಬೌಲರ್, ರೋಹಿತ್ ಶರ್ಮ, ಪ್ರವೀಣ್ ಕುಮಾರ್, ಅಜಿತ್ ಚಾಂಡೀಲ, ಪ್ರವೀಣ್ ತಾಂಬೆ, ಅಕ್ಷರ್ ಪಟೇಲ್, ಜೈದೇವ್ ಉನಾಡ್ಕತ್ ತಲಾ ಒಂದೊಂದು ಸಲ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದಾರೆ.
ಮಖಾಯ್ ಮೊದಲ ವಿದೇಶಿ ಬೌಲರ್: ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಬೌಲರ್ ಮಖಾಯ್ ಎನ್‌ಟಿನಿ ಮೊದಲ ಬೌಲರ್ ಆಗಿದ್ದಾರೆ. 2008ರಲ್ಲಿ ಈ ಸಾಧನೆಯನ್ನು ಚೆನ್ನೈ ತಂಡದ ಪರ ಎನ್‌ಟನಿ ಮಾಡಿದ್ದರು. 2013ರಲ್ಲಿ ಕೆಕೆಆರ್ ತಂಡದ ಪರ ಸುನಿಲ್ ನಾರಾಯಣ್, 2014ರಲ್ಲಿ ರಾಜಸ್ಥಾನ್ ಪರ ಶೇನ್ ವಾಟ್ಸನ್, 2017ರಲ್ಲಿ ಆರ್‌ಸಿಬಿ ಪರ ಸ್ಯಾಮ್ಯುಯೆಲ್ ಬದ್ರಿ, ಅದೇ ವರ್ಷ ಪುಣೆ ಸೂಪರ್‌ಜೈಂಟ್ಸ್ ಪರ ಆ್ಯಂಡ್ರೊ ಟೈ ಹ್ಯಾಟ್ರಿಕ್ ಮಾಡಿ ಮೆರೆದಿದ್ದರು. ಇದೀಗ ಸ್ಯಾಮ್ ಕರನ್ ಪಂಜಾಬ್ ಪರ ಹ್ಯಾಟ್ರಿಕ್‌ಗೆçದಿದ್ದಾರೆ. ಒಟ್ಟಾರೆ 6ನೇ ವಿದೇಶಿ ಕ್ರಿಕೆಟಿಗ ಕರನ್ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
ಪ್ರೀತಿ ಹುಡುಗನ ಮೊದಲ ಹ್ಯಾಟ್ರಿಕ್
ಸ್ಯಾಮ್ ಕರನ್ ತಾವಾಡಿದ ಮೊದಲ ಐಪಿಎಲ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. 20 ವರ್ಷಕ್ಕೆ ಹ್ಯಾಟ್ರಿಕ್ ಮಾಡಿದ ಅತೀ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ. ಅಲ್‌ರೌಂಡರ್ ಕರ್ರನ್ ಸಾಹಸದಿಂದ ಐಪಿಎಲ್‌ನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಇಂಗ್ಲೆಂಡ್ ಕ್ರಿಕೆಟಿಗನ ಪೂರ್ಣ ಹೆಸರು ಸ್ಯಾಮ್ಯುಯಲ್ ಮ್ಯಾಥ್ಯೂ ಕರನ್. ಆಲ್‌ರೌಂಡರ್ ಪಾತ್ರ ನಿರ್ವಹಿಸುವ ಸಾಮರ್ಥ್ಯವಿದೆ. ಕರನ್ 9 ಟೆಸ್ಟ್, 2 ಏಕದಿನ ಪಂದ್ಯವನ್ನಾಡಿದ್ದಾರೆ. ಇನ್ನಷ್ಟೆ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಬೇಕಿದೆ.
ಹ್ಯಾಟ್ರಿಕ್ ವೀರರ ಪಟ್ಟಿ
ಆಟಗಾರ ವಿರುದ್ಧ
ಲಕ್ಷ್ಮೀಪತಿ ಬಾಲಾಜಿ (ಸಿಎಸ್‌ಕೆ) ಪಂಜಾಬ್ (2008)
ಅಮಿತ್ ಮಿಶ್ರಾ (ಡೆಲ್ಲಿ) ಡೆಕ್ಕನ್ (2008)
ಮಖಾಯ್ ಎನ್‌ಟನಿ (ಸಿಎಸ್‌ಕೆ) ಕೆಕೆಆರ್ (2008)
ಯುವರಾಜ್ ಸಿಂಗ್ (ಪಂಜಾಬ್) ಆರ್‌ಸಿಬಿ (2009)
ರೋಹಿತ್ ಶರ್ಮ (ಡೆಕ್ಕನ್) ಮುಂಬೈ (2009)
ಯುವರಾಜ್ ಸಿಂಗ್ (ಪಂಜಾಬ್) ಡೆಕ್ಕನ್ (2009)
ಪ್ರವೀಣ್ ಕುಮಾರ್ (ಆರ್‌ಸಿಬಿ) ರಾಜಸ್ಥಾನ್(2010)
ಅಮಿತ್ ಮಿಶ್ರಾ (ಡೆಕ್ಕನ್) ಪಂಜಾಬ್(2011)
ಅಜಿತ್ ಚಾಂಡೇಲ (ರಾಜಸ್ಥಾನ್) ಪುಣೆ (2012)
ಸುನಿಲ್ ನಾರಾಯಣ್ (ಕೆಕೆಆರ್) ಪಂಜಾಬ್ (2013)
ಅಮಿತ್ ಮಿಶ್ರಾ (ಹೈದ್ರಾಬಾದ್) ಪುಣೆ (2013)
ಪ್ರವೀಣ್ ತಾಂಬೆ (ರಾಜಸ್ಥಾನ್) ಕೆಕೆಆರ್ (2014)
ಶೇನ್ ವಾಟ್ಸನ್ (ರಾಜಸ್ಥಾನ್) ಹೈದ್ರಾಬಾದ್ (2014)
ಅಕ್ಷರ್ ಪಟೇಲ್ (ಪಂಜಾಬ್) ಗುಜರಾತ್ (2016)
ಸ್ಯಾಮ್ಯುಯೆಲ್ ಬದ್ರಿ (ಆರ್‌ಸಿಬಿ) ಮುಂಬೈ (2017)
ಆ್ಯಂಡ್ರೊ ಟೈ (ಗುಜರಾತ್) ಸೂಪರ್‌ಜೈಂಟ್ಸ್ (2017)
ಜೈದೇವ್ (ಸೂಪರ್‌ಜೈಂಟ್ಸ್) ಹೈದ್ರಾಬಾದ್(2017)
ಸ್ಯಾಮ್ ಕರನ್(ಪಂಜಾಬ್) ಡೆಲ್ಲಿ (2019)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.