2022 ಫಿಫಾ ವಿಶ್ವಕಪ್‌: ಕತಾರ್‌ ಮೈತುಂಬಾ ಸಮಸ್ಯೆಗಳು


Team Udayavani, Jul 21, 2018, 12:21 PM IST

9.jpg

ಕತಾರ್‌….ವಿಶ್ವದಲ್ಲೇ ಗರಿಷ್ಠ ತಲಾ ಆದಾಯ ಹೊಂದಿರುವ ದೇಶ, ವ್ಯಕ್ತಿಗಳಿಗೆ ಅತಿಹೆಚ್ಚು ಸೌಲಭ್ಯ ನೀಡಿದ್ದಕ್ಕಾಗಿ ವಿಶ್ವಸಂಸ್ಥೆಯಿಂದಲೇ ಗೌರವಿಸಲ್ಪಟ್ಟ ನಾಡು, ಅರಬ್‌ ರಾಷ್ಟ್ರಗಳ ಪೈಕಿ ಅತಿಶ್ರೀಮಂತರ ಬೀಡು, ಬರೀ ಹಣದಿಂದ, ತೈಲದಿಂದ, ಅನಿಲದಿಂದ ವಿಶ್ವವನ್ನೇ ಕುಣಿಸುತ್ತಿರುವ ಮಾಯಗಾರ!

ಇಂತಹ ದೇಶ 2022ರ ಫಿಫಾ ಫ‌ುಟ್‌ಬಾಲ್‌ ವಿಶ್ವಕಪ್‌ ಅನ್ನು ಆಯೋಜಿಸಲಿದೆ. ಇದಕ್ಕೂ ಮುನ್ನ ಫಿಫಾ ವಿಶ್ವಕಪ್‌ ಆಯೋಜಿಸಿರುವ ಅತಿ ಚಿಕ್ಕ ರಾಷ್ಟ್ರವೆಂದರೆ ಸ್ವಿಜರೆಲಂಡ್‌, ಅದು 1954ರಲ್ಲಿ. ಊಹಿಸಿ…2018ರಲ್ಲಿ ವಿಶ್ವದ ಬೃಹತ್‌ ದೇಶ ರಷ್ಯಾ ಫ‌ುಟ್‌ಬಾಲ್‌ ವಿಶ್ವಕಪ್‌ ನಡೆಸಿದೆ. 2022ರಲ್ಲಿ ವಿಶ್ವದ 32ನೇ ಪುಟ್ಟ ದೇಶ ಎನಿಸಿಕೊಂಡಿರುವ ಕತಾರ್‌ ನಡೆಸಲಿದೆ. ಕತಾರ್‌ ವಿಶ್ವಕಪ್‌ ಆಯೋಜನೆ ಅವಕಾಶ ಪಡೆದಾಗ ಹಲವಾರು ಅನುಮಾನಗಳು, ಪ್ರಶ್ನೆಗಳು, ತಕರಾರುಗಳು ಹುಟ್ಟಿಕೊಂಡವು. ಅದರಲ್ಲಿ ಒಂದು, ಬರೀ ಕರ್ನಾಟಕದ ಕಾಲು ಭಾಗವಿರುವ ಈ ದೇಶ ವಿಶ್ವಕಪ್‌ ನಡೆಸುವಷ್ಟು ವಿಸ್ತಾರ ಹೊಂದಿದೆಯೇ ಎನ್ನುವುದು.
ಇಷ್ಟು ಪುಟ್ಟ ರಾಷ್ಟ್ರಕ್ಕೆ ಸಾಧ್ಯವೇ? 

ಹೌದು. ಒಂದು ದೇಶ ಫಿಫಾ ವಿಶ್ವಕಪ್‌ ಆಯೋಜಿಸುತ್ತದೆಂದರೆ ಅದು ಗಾತ್ರದಲ್ಲಿ ವಿಸ್ತಾರ ಹೊಂದಿರಬೇಕಾಗುತ್ತದೆ. ಕಾರಣ ವಿಶ್ವದ ಪ್ರಬಲ 32 ಫ‌ುಟ್‌ಬಾಲ್‌ ತಂಡಗಳು ಕಾಣಿಸಿಕೊಳ್ಳುತ್ತವೆ. ಈ ತಂಡಗಳಿಗೆಲ್ಲ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ನಿರಂತರ ಒಂದು ತಿಂಗಳು ಕೂಟ ನಡೆಯುವಾಗ ಅದಕ್ಕೆ ಹೋಟೆಲ್‌ಗ‌ಳು, ಅಭ್ಯಾಸಕ್ಕೆ ಮೈದಾನಗಳು, ತಂಡಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳು ಇರಬೇಕಾಗುತ್ತವೆ. ಕತಾರ್‌ನ ದಿನವಹಿ ಜೀವನಕ್ಕೆ ತೊಂದರೆಯಾಗದಂತೆ ಇದನ್ನೆಲ್ಲ ವ್ಯವಸ್ಥೆ ಮಾಡಬೇಕಾಗುತ್ತದೆ. ಅಲ್ಲದೇ ವಿಶ್ವದ ಮೂಲೆಮೂಲೆಯಿಂದ ಲಕ್ಷಾಂತರ ಪ್ರವಾಸಿಗರು ಆ ದೇಶಕ್ಕೆ ಏಕಕಾಲದಲ್ಲಿ ಬಂದಿಳಿಯುತ್ತಾರೆ. ಅವರಿಗೆಲ್ಲ ವಸತಿ ವ್ಯವಸ್ಥೆ, ಆಹಾರದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ನೂಕುನುಗ್ಗಲಾಗದಂತೆ, ಹಿಂಸಾಚಾರ ನಡೆಯದಂತೆ ತಡೆಯಲು ಅಲ್ಲಿನ ಪೊಲೀಸ್‌ ವ್ಯವಸ್ಥೆ ಸಜ್ಜಾಗಬೇಕಾಗುತ್ತದೆ. 

ಕತಾರ್‌ಗೆ ಈ ಸಾಮರ್ಥ್ಯವಿದೆಯೇ? ಗಾತ್ರದಲ್ಲಿ ಕರ್ನಾಟಕದ ಕಾಲುಭಾಗವಿರುವ ಕತಾರ್‌ಗೆ ಈ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ ಎನ್ನಬೇಕಾಗುತ್ತದೆ. ಅದೆಷ್ಟೇ ಶ್ರೀಮಂತ ರಾಷ್ಟ್ರವಾಗಿದ್ದರೂ ಅಲ್ಲಿನ ಜನಸಂಖ್ಯೆಯಿರುವುದೇ ಕೇವಲ 26 ಲಕ್ಷ. ಇದರಲ್ಲಿ ಬರೀ 3.13 ಲಕ್ಷ ಜನ ಮಾತ್ರ ಕತಾರ್‌ಗೆ ಸೇರಿದವರು. ಉಳಿದ 23 ಲಕ್ಷ ಜನ ವಿದೇಶೀಯರು, ಅಕ್ರಮವಾಗಿ ನೆಲೆಸಿರುವವರು, ಅಥವಾ ಇತರೆ ರಾಷ್ಟ್ರಗಳಿಂದ ಗಡೀಪಾರಾದವರು! ಹೀಗಿರುವಾಗ 5, 6 ಲಕ್ಷ ವಿದೇಶೀಯರನ್ನು ತನ್ನೊಳಗೆ ಕರೆದುಕೊಂಡು ಅವರನ್ನು ಸುರಕ್ಷಿತವಾಗಿ ಹಿಂತಿರುಗಿ ಕಳಿಸಬಲ್ಲ ಪೊಲೀಸ್‌ ಸಾಮರ್ಥ್ಯ ಕತಾರ್‌ನಲ್ಲಿ ಇರಲು ಸಾಧ್ಯವೇ? ಕನಿಷ್ಠ 2 ಲಕ್ಷ ಪೊಲೀಸರು ಇಂತಹ ಕೂಟ ನಡೆಯುವಾಗ ಅಗತ್ಯವಿರುತ್ತಾರೆ. ಕತಾರ್‌ನಲ್ಲಿರುವುದು 2006ರ ಲೆಕ್ಕಾಚಾರದ ಪ್ರಕಾರ ಬರೀ 2500 ಪೊಲೀಸರು!

ಪ್ರವಾಸೋದ್ಯಮದ ಕಥೆಯೇನು?
ಬಹುತೇಕ ಮರಳುಗಾಡಾಗಿರುವ ಕತಾರ್‌ನಲ್ಲಿ ಪ್ರಾಕೃತಿಕವಾಗಿ ನೋಡಲು ಬಹಳಷ್ಟಿಲ್ಲ. ಆದರೆ ಮನುಷ್ಯ ನಿರ್ಮಿತ ಕಟ್ಟಡಗಳು, ಸಂಗ್ರಾಹಾಗಾರಗಳು ಇಂತಹವನ್ನೇ ನೋಡಬೇಕಾಗುತ್ತದೆ. ಕೇವಲ ಒಂದೆರಡು ದಿನದಲ್ಲಿ ಇಡೀ ಕತಾರನ್ನು ಸುತ್ತಬಹುದು. ಇದನ್ನು ಗಣಿಸಿದರೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಕತಾರ್‌ ಯಶಸ್ವಿಯಾಗಲಾರದು.

ಬಿಸಿಯುಗುಳುವ ನಾಡು
ಅರಬ್‌ ರಾಷ್ಟ್ರಗಳು ಸಾಮಾನ್ಯವಾಗಿ ಬಿಸಿಯುಗುಳುವ ನಾಡಾಗಿರುತ್ತವೆ. ಅದಕ್ಕೆ ಕತಾರ್‌ ಕೂಡ ಹೊರತಾಗಿಲ್ಲ. ಈ ರಾಷ್ಟ್ರಕ್ಕೆ ವಿಶ್ವಕಪ್‌ ಆಯೋಜನೆ ಅವಕಾಶ ನೀಡಿದ ನಂತರ ಅಂದಿನ ಫಿಫಾ ಅಧ್ಯಕ್ಷ ಸೆಪ್‌ ಬ್ಲಾಟರ್‌ ಕೂಡ ತಮ್ಮ ತೀರ್ಮಾನ ತಪ್ಪಾಯಿತು. ಅಲ್ಲಿನ ವಿಪರೀತ ಬಿಸಿಯಲ್ಲಿ ವಿಶ್ವಕಪ್‌ ಆಯೋಜನೆ ಕಷ್ಟ ಎಂದು ಹೇಳಿದ್ದರು. ಕತಾರ್‌ನಲ್ಲಿ ಸಾಮಾನ್ಯವಾಗಿ 35ರಿಂದ 42 ಡಿಗ್ರಿ ಸೆಂಟಿಗ್ರೇಡ್‌ನ‌ಷ್ಟು ಧಗೆಯಿರುತ್ತದೆ. ಅದರಲ್ಲೂ ವಿಶ್ವಕಪ್‌ ಸಾಮಾನ್ಯವಾಗಿ ನಡೆಯುವ ಜೂನ್‌, ಜುಲೈನಲ್ಲಿ ಉಷ್ಣತೆ ಪ್ರಮಾಣ ಗರಿಷ್ಠ ಮಟ್ಟದಲ್ಲಿರುತ್ತದೆ. ಇದನ್ನೆಲ್ಲ ನೋಡಿಯೇ ಇದೊಂದು ವಿಶ್ವಕಪ್‌ ಅನ್ನು ನವೆಂಬರ್‌, ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ! ಆದರೆ ಇದು ಯೂರೋಪ್‌ನ ವಿವಿಧ ಲೀಗ್‌ ವೇಳಾಪಟ್ಟಿಗೆ ಭಾರೀ ಹೊಡೆತ. ಅವೆಲ್ಲ ತಮ್ಮ ವೇಳಾಪಟ್ಟಿಯನ್ನೇ ಬದಲಿಸಿಕೊಳ್ಳಬೇಕಾದ ಒತ್ತಡ ಸಿಲುಕಿ ಈಗಾಗಲೇ ವಿರೋಧ ಶುರು ಮಾಡಿವೆ. ವಿಪರೀತ ಧಗೆಯ ಕಾರಣ ಪೂರ್ಣ ಮೈದಾನಗಳಿಗೆ ಹವಾನಿಯಂತ್ರಕ ಅಳವಡಿಸಲು ಕತಾರ್‌ ವ್ಯವಸ್ಥಾಪಕರು ತೀರ್ಮಾನಿಸಿದ್ದಾರೆ. ಆಟಗಾರರು ಬಚಾವಾಗುತ್ತಾರೆ. ಆದರೆ ಪ್ರವಾಸಿಗರು?

ಮೈದಾನಗಳ ಕೊರತೆ
ಯಾವುದೇ ಫಿಫಾ ವಿಶ್ವಕಪ್‌ ನಡೆಸಲು ಕನಿಷ್ಠ 12 ಮೈದಾನಗಳಿರಬೇಕಾಗುತ್ತದೆ. ಆದರೆ ಕತಾರ್‌ನಲ್ಲಿ ಸದ್ಯ ಸಿದ್ಧವಾಗಿರುವುದು ಬರೀ 5 ಮಾತ್ರ. ಇನ್ನು 4 ಮೈದಾನ ಮಾತ್ರ ನಿರ್ಮಾಣಗೊಳ್ಳುವ ಸಾಧ್ಯತೆಯಿದೆ. 12 ಮೈದಾನ ನಿರ್ಮಾಣ ವಿಪರೀತ ದುಬಾರಿಯಾಗಿರುವುದರಿಂದ, ತನಗೆ 9 ಮೈದಾನಗಳಲ್ಲಿ ಮಾತ್ರ ಕೂಟ ನಡೆಸಲು ಅವಕಾಶ ಕೊಡಬೇಕೆಂದು ಕತಾರ್‌ ಸಂಘಟಕರು ಫಿಫಾವನ್ನು ಕೇಳಿಕೊಂಡಿದ್ದಾರೆ. 32 ತಂಡಗಳನ್ನು 9 ಮೈದಾನಗಳಲ್ಲಿ ಹಂಚಿ ಆಡಿಸುವುದು ಕಷ್ಟವಲ್ಲ. ಆದರೆ ಅವುಗಳಿಗೆ ಅಭ್ಯಾಸ ಮಾಡಲು ಎಲ್ಲಿ ಸ್ಥಳಾವಕಾಶ ಮಾಡಿಕೊಡುತ್ತಾರೆ? ರಷ್ಯಾದಂತಹ ರಾಷ್ಟ್ರಗಳಲ್ಲಿ ಅಭ್ಯಾಸಕ್ಕೆ ಪ್ರತ್ಯೇಕ ಮೈದಾನ ಕೊಡಬಲ್ಲಷ್ಟು ಸ್ಥಳಾವಕಾಶವಿರುತ್ತದೆ. ಈ ಕೊರತೆಯೂ ಕತಾರನ್ನು 2022ರಲ್ಲಿ ಕಾಡುವ ಸಾಧ್ಯತೆಯಿದೆ.

ವಿವಾದಗಳ್ಳೋ, ವಿವಾದಗಳು
2010ರಲ್ಲಿ ಕತಾರ್‌ ಬಹುಮತದಿಂದ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವಕಪ್‌ ಆತಿಥ್ಯ ಪಡೆದುಕೊಂಡಿತು. ಅಲ್ಲಿಂದ ಶುರುವಾದ ವಿವಾದ ಫಿಫಾ ಅಂದಿನ ಅಧ್ಯಕ್ಷ ಸೆಪ್‌ಬ್ಲಾಟರ್‌ ಪದಚ್ಯುತಿಯಲ್ಲಿ ಮುಕ್ತಾಯವಾಯಿತು. ಅಮೆರಿಕ, ಸ್ವಿಜರೆಲಂಡ್‌, ಇಂಗ್ಲೆಂಡ್‌ಗಳು ವ್ಯಾಪಕ ತನಿಖೆ ನಡೆಸಿ ಕತಾರ್‌ಗೆ ಆತಿಥ್ಯ ನೀಡಲು ಲಂಚ ಪಡೆಯಲಾಗಿದೆ, ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಮೇತ ಆರೋಪಿಸಿದವು. ಆಫ್ರಿಕಾ ದೇಶಗಳ ಹಲವು ನಾಯಕರ ತಲೆದಂಡವಾಯಿತು. ಅಷ್ಟು ಮಾತ್ರ ಸಾಲದೆಂಬಂತೆ ಕತಾರ್‌ ಸಂಘಟನಾ ಸಮಿತಿಯ ಸದಸ್ಯೆಯೊಬ್ಟಾಕೆ ಆಫ್ರಿಕಾ ಫ‌ುಟ್‌ಬಾಲ್‌ ಸಂಸ್ಥೆಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದರು. ಕಡೆಗೆ ಆಕೆ ತನ್ನ ಹೇಳಿಕೆಯನ್ನು ಹಿಂಪಡೆದರು. ಈ ಬಗ್ಗೆ ಫಿಫಾ ತನಿಖೆ ನಡೆಸಿ, ಕತಾರ್‌ ಯಾವ ತಪ್ಪೂ ಮಾಡಿಲ್ಲ ಎಂದು ಹೇಳಿತು. ಆದರೂ ಇದನ್ನು ನಂಬಲು ಅಮೆರಿಕ, ಇಂಗ್ಲೆಂಡ್‌ ಸಿದ್ಧವಿಲ್ಲ. ಫಿಫಾ ತನಿಖೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿವೆ. ಒಂದು ಹಂತದಲ್ಲಿ ಕತಾರ್‌ ಆತಿಥ್ಯ ಕಳೆದುಕೊಳ್ಳಲಿದೆ ಎಂಬ ಭೀತಿಯುಂಟಾಗಿತ್ತು. ಇದನ್ನೆಲ್ಲ ಮೀರಿ ಕತಾರ್‌ ಆತಿಥ್ಯ ಉಳಿಸಿಕೊಂಡಿದೆ.

ಕಾರ್ಮಿಕರ ಸಾವು
ಇದರ ಮಧ್ಯೆಯೇ ಕತಾರ್‌ನಲ್ಲಿ ಮೈದಾನ ನಿರ್ಮಾಣದ ವೇಳೆ ಮಾನವಸಂಪನ್ಮೂಲದ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಲಾಯಿತು. 2010ರ ನಂತರ 522 ನೇಪಾಳಿ, 700 ಭಾರತೀಯ ಕಾರ್ಮಿಕರು ಮೃತಪಟ್ಟರು. ಅಲ್ಲದೇ ಪ್ರತಿವರ್ಷ ಅಲ್ಲಿ ಸರಾಸರಿ 250 ಭಾರತೀಯ ಕಾರ್ಮಿಕರು ಸಾಯುತ್ತಿದ್ದಾರೆಂದು ಇಂಗ್ಲೆಂಡ್‌ನ‌ ಗಾರ್ಡಿಯನ್‌ ಪತ್ರಿಕೆ ಆರೋಪಿಸಿತು. ಕಾರ್ಮಿಕರ ದಾಖಲೆಗಳನ್ನು ಆ ದೇಶ ಹಿಡಿದುಕೊಂಡಿದೆ, ವಿಪರೀತ ದುಡಿಸುತ್ತಿದೆ, ಸಮಯಕ್ಕೆ ಸರಿಯಾಗಿ ಹಣ ಕೊಡುತ್ತಿಲ್ಲವೆಂದು ಮಾಧ್ಯಮಗಳು ಆರೋಪಿಸಿದವು. ಈ ಎಲ್ಲ ಆರೋಪಗಳನ್ನು ಜೀರ್ಣ ಮಾಡಿಕೊಂಡೇ ಕತಾರ್‌ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿದೆ.

ವಿಷಕಂಠನಾದ ಕತಾರ್‌
2017ರಲ್ಲಿ ಕತಾರ್‌ ಅಕ್ಷರಶಃ ಒಬ್ಬಂಟಿಯಾಯಿತು. ಆ ದೇಶ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಈಜಿಪ್ಟ್, ಬಹೆÅàನ್‌, ಈಜಿಪ್ಟ್ಗಳು ಕತಾರ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡು ದಿಗ್ಬಂಧನ ಹೇರಿದವು. ಕತಾರ್‌ಗೆ ದಿನವಹಿ ಆಹಾರಧಾನ್ಯಗಳು ಬರುವ ದಾರಿಗಳು ಬಂದಾದವು. ಕಡೆಗೆ ಅದು ಪ್ರತಿದಿನ ವಿಮಾನದಿಂದ ಆಹಾರ ಧಾನ್ಯವನ್ನು ತನ್ನ ನಾಗರಿಕರಿಗೆ ಪೂರೈಸುವ ದುಸ್ಥಿತಿ ಎದುರಾಯಿತು. ಇಷ್ಟಾದರೂ ಕತಾರ್‌ ಇವನ್ನೆಲ್ಲ ಸಹಿಸಿಕೊಂಡಿದೆ. ಹೇಗೆ ಗೊತ್ತಾ?  ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಗ್ರಹವಿರುವುದು ಕತಾರ್‌ನಲ್ಲೇ, ಜಗತ್ತಿನಲ್ಲಿ ಅತಿಹೆಚ್ಚು ಅನಿಲ ಗಣಿಗಳಿರುವುದೂ ಇಲ್ಲೇ! ಹಾಗಾಗಿ ಇಲ್ಲಿ ಹಣಕ್ಕೆ ಕೊರತೆಯಿಲ್ಲ. ಜನಸಂಖ್ಯೆಯೂ ಕಡಿಮೆಯಿರುವುದರಿಂದ ಇಲ್ಲಿನ ಜನರಿಗೆ ಬಡತನ ಎಂದರೇನೆಂದು ಗೊತ್ತಿಲ್ಲ. ಜಗತ್ತಿನಲ್ಲೇ ಅತಿಹೆಚ್ಚು ತಲಾ ಆದಾಯ ಹೊಂದಿರುವ ರಾಷ್ಟ್ರ ಇದೇ. ಪುಟ್ಟ ರಾಷ್ಟ್ರವಾದರೂ ಒಟ್ಟು ದೇಶೀಯ ಉತ್ಪನ್ನದಲ್ಲಿ ವಿಶ್ವದಲ್ಲೇ 51ನೇ ಸ್ಥಾನ ಹೊಂದಿದೆ. ತನ್ನ ಹಣ ಬಲದಿಂದಲೇ ತನಗೆ ಎದುರಾಗಿ ನಿಂತಿರುವ ಎಲ್ಲ ಸವಾಲುಗಳಿಗೆ ಕತಾರ್‌ ಎದೆಯೊಡ್ಡಿಕೊಂಡಿದೆ. ತೈಲಬಾವಿಗಳಿಂದ ಹಣವನ್ನು ಮೊಗೆದು ಮೊಗೆದು 2022ರ ವಿಶ್ವಕಪ್ಪನ್ನೂ ಯಶಸ್ವಿಯಾಗಿಸುವ ನಂಬಿಕೆಯಲ್ಲಿದೆ.

-ನಿರೂಪ

ಟಾಪ್ ನ್ಯೂಸ್

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2024: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

13-

Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

12-bng

Bengaluru: ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು

11-fir

Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್‌ ದಾಖಲು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.