ನಮ್ಮೆದುರು 24 ಗುರುಗಳಿದ್ದಾರೆ…


Team Udayavani, Feb 2, 2019, 12:35 AM IST

98.jpg

ಬದುಕಿನ ಪ್ರತಿಯೊಂದು ಘಟ್ಟವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಮತ್ತು ನಾವು ಅದರಿಂದ ಪ್ರೌಢರಾಗುತ್ತ ಹೋಗುತ್ತೇವೆ. ನಾವು ಒಡಾಡುವ ಈ ನೆಲವೂ ನಮಗೇ ಪಾಠ ಹೇಳುವ ಗುರುವೇ ಆಗಿದೆ! ಪೃಥ್ವಿ ಅಥವಾ ಭೂಮಿಯಿಂದಲೂ ನಾವು ಪಡೆಯಬೇಕಾದ ಜ್ಞಾನ ಅಥವಾ ತಿಳುವಳಿಕೆ ಸಾಕಷ್ಟಿವೆ.

ಜ್ಞಾನಾರ್ಜನೆಗೆ ಕೊನೆಯೆಂಬುದಿಲ್ಲ. ಹುಟ್ಟಿನಿಂದ ಸಾವಿನ ತನಕವೂ ನಾವು ಹೊಸತನ್ನು ಕಲಿಯುತ್ತಲೇ ಹೋಗುತ್ತೇವೆ. ಕೆಲವನ್ನು ನೋಡಿ, ಕೆಲವನ್ನು ಮಾಡಿ, ಕೆಲವನ್ನು ಓದಿ ಕಲಿಯುತ್ತೇವೆ. ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಪರಿಪೂರ್ಣ ಎನಿಸುವುದು. ಏಕೆಂದರೆ ಜ್ಞಾನಾರ್ಜನೆಯಲ್ಲಿ ಸಂಶಯಗಳು, ಪ್ರಶ್ನೆಗಳು ಉದ್ಭವಿಸುವುದು ಸಹಜ. ಅಲ್ಲದೆ, ಕೆಲವೊಂದು ಉದಾಹರಣೆ, ಸನ್ನಿವೇಶಗಳ ಮೂಲಕ ಕಲಿಯುವ ಅಗತ್ಯವಿರುವುದರಿಂದ ಗುರುವೊಬ್ಬನು ಇರಲೇಬೇಕು.

ದಾರಿ ತೋರಿಸಲು, ಕಲಿಸಲು ಗುರುವು ಜೊತೆಗಿದ್ದಾಗ,  ಸುಲಭವಾಗಿ ನಾವು ಜ್ಞಾನವನ್ನು ಹೊಂದಲು ಸಾಧ್ಯ. ಹೀಗೆ ಉನ್ನತ ಜ್ಞಾನಾರ್ಜನೆ ಮಾಡಿದ ಸಮರ್ಥ ಗುರುವಿನಿಂದ ಕಲಿಯುವ ವಿದ್ಯೆಯ ಜೊತೆಗೆ ಹಲವಷ್ಟು ಬದುಕಿನ ಪಾಠಗಳನ್ನೂ ಕಲಿಯಬೇಕು; ಕಲಿಯುತ್ತಲೇ ಇರಬೇಕು. ಇಂಥ ಕಲಿಕೆಯು ಬದುಕಿಗೆ ಮಾರ್ಗದರ್ಶಕವೂ, ಸಾಧನೆಗೆ ಶಕ್ತಿಯೂ ಆಗುತ್ತ ಹೋದಾಗ ಜೀವನವು ಪರಿಪೂರ್ಣತೆಯನ್ನು ಪಡೆಯುತ್ತದೆ.

ನಮ್ಮ ಸೂಕ್ಷ್ಮಮತಿಯಿಂದ ನೋಡಿ, ಅರಿತುಕೊಳ್ಳಬೇಕಾದ ಗುರುಗಳು ನಮ್ಮ ಸುತ್ತಮುತ್ತಲೇ ಇ¨ªಾರೆ. ಇಡೀ ಪ್ರಪಂಚವೇ ಅಂಥ ಗುರುಗಳಿರುವ ಬೀಡು. ಮದ್ಭಾಗವತದಲ್ಲಿ ಅಂಥ ಮುಖ್ಯ ಇಪ್ಪತ್ತನಾಲ್ಕು ಗುರುಗಳನ್ನು ಗುರುತಿಸಿ ಹೇಳಲಾಗಿದೆ. ಅವುಗಳೆಂದರೆ ಪೃಥ್ವಿ, ವಾಯು, ಆಕಾಶ, ಜಲ, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಟಾವು, ಸಮುದ್ರ, ಪತಂಗ, ದುಂಬಿ ಅಥವಾ ಜೇನುನೊಣ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳಾವೇಶ್ಯೆ, ಕುರುರಪಕ್ಷಿ$, ಮಗು, ಕುಮಾರೀ, ಬಾಣವನ್ನು ತಯಾರಿಸುವವನು, ಸರ್ಪ, ಜೇಡರಹುಳು, ಭೃಂಗಕೀಟ. ಇವು ನಮ್ಮೆದುರೇ ಕಾಣುವ ಇಪ್ಪತ್ತನಾಲ್ಕು ಗುರುಗಳು. ಇವುಗಳಿಂದ ಏನೇನು ಕಲಿಯಬಹುದು? ನಮ್ಮ ಬದುಕಿಗೆ ಇವುಗಳಿಂದ ಕಲಿತದ್ದು ಪ್ರಯೋಜನವಾದೀತೆ ಅಂದಿರಾ !? ಖಂಡಿತ ಪ್ರಯೋಜನವಾಗುತ್ತದೆ. ಇವುಗಳಿಂದ ಕಲಿಯಬೇಕಾದದ್ದು ನಾವು ಅಳವಡಿಸಿಕೊಳ್ಳಲೇ ಬೇಕಾದದ್ದು ಸಾಕಷ್ಟಿವೆ. ಅವನ್ನು ಒಂದೊಂದಾಗಿ ತಿಳಿಯೋಣ.

ಪೃಥ್ವಿಯಿಂದ ಪಡೆಯಬೇಕಾದ ಜ್ಞಾನ
ಬದುಕಿನ ಪ್ರತಿಯೊಂದು ಘಟ್ಟವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಮತ್ತು ನಾವು ಅದರಿಂದ ಪ್ರೌಢರಾಗುತ್ತ ಹೋಗುತ್ತೇವೆ. ನಾವು ಒಡಾಡುವ ಈ ನೆಲವೂ ನಮಗೇ ಪಾಠ ಹೇಳುವ ಗುರುವೇ ಆಗಿದೆ! ಪೃಥ್ವಿ ಅಥವಾ ಭೂಮಿಯಿಂದಲೂ ನಾವು ಪಡೆಯಬೇಕಾದ ಜ್ಞಾನ ಅಥವಾ ತಿಳುವಳಿಕೆ ಸಾಕಷ್ಟಿವೆ. ಭೂಮಿ ಎಂಬುದು ಕ್ಷಮೆಯ ಪ್ರತಿರೂಪವಿದ್ದಂತೆ. ಈ ಭೂಮಿಯಷ್ಟು ಕ್ಷಮಾಗುಣವುಳ್ಳದ್ದು ಇನ್ನೊಂದಿಲ್ಲ. ನಾವು ಭೂಮಿಯನ್ನು ಹೇಗೆ ಬಳಸಿಕೊಂಡರೂ ಅದು ಕೋಪಿಸಿಕೊಳ್ಳುವುದಿಲ್ಲ. ಮತ್ತು ಭೂಮಿಯ ಸಮಸ್ತ ಕ್ರಿಯೆಗಳು ಪರರ ಉಪಕಾರಕ್ಕಾಗಿಯೇ ಇರುತ್ತವೆ.

ಈ ಬಗೆಯ ಕ್ಷಮಾಗುಣವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಪರರಿಂದ ಉಂಟಾಗುವ ಕಷ್ಟವನ್ನು ಸಹಿಸಿಕೊಂಡು ವಿಚಲಿತನಾಗದೆ ವ್ಯವಹರಿಸುವ ಬುದ್ಧಿಯನ್ನು ಬಲವಾಗಿ ಬೆಳೆಸಿಕೊಳ್ಳಬೇಕು. ತಾನು ಮಾಡುವ ಕರ್ಮದಿಂದ ಪರರಿಗೆ ಉಪಕಾರವಾಗುವಂತೆ ಕಾರ್ಯನಿರತನಾಗಬೇಕು. ನಿಂದನೆಗೆ ತಲೆಕೆಡಿಸಿಕೊಳ್ಳದೆ, ಸದಾಚಾರದಲ್ಲಿ ತೊಡಗಿಕೊಳ್ಳಬೇಕು. ಭೂಮಿಯು ಹೇಗೆ ಮಳೆಗೆ, ಬೆಳೆಗೆ, ಹಸಿರಿಗೆ, ಜೀವಿಗೆ ಅನುಕೂಲವಾಗುವಂತೆ ತನ್ನನ್ನು ತಾನು ತೊಡಗಿಸಿಕೊಳ್ಳುವುದೋ ಅಂಥ ಮನಸ್ಸನ್ನು ಈ ಭೂಮಿಯನ್ನು ನೋಡಿ ನಮ್ಮಲ್ಲಿ ನಾವು ಬೆಳಸಿಕೊಳ್ಳಬೇಕು. ಭೂಮಿ ಮತ್ತು ಭೂಮಿಯಲ್ಲಿರುವ ವೃಕ್ಷ$ಪರ್ವತಾದಿಗಳೂ ಪರೋಪಕಾರಕ್ಕಾಗಿಯೇ ಇವೆ. ವೃಕ್ಷ$ಕೊಡುವ ಫ‌ಲ, ಹೂವು, ಎಲೆ, ಕಟ್ಟಿಗೆ, ಹಸಿರು ಎಲ್ಲವೂ ಪರರಿಗಾಗಿಯೇ. ಅಂತೆಯೇ ಪರ್ವತವೂ ಕೂಡ ಅದೆಷ್ಟೋ ಪಕ್ಷಿ$ ಸಂಕುಲಕ್ಕೆ, ಪ್ರಾಣಿವರ್ಗಕ್ಕೆ ಆಶ್ರಯ ತಾಣವಾಗಿದೆ.

ಈ ಭೂಮಿಯು ಕ್ಷಮಾಗುಣ, ಪರೋಪಕಾರ ಮತ್ತು ಪ್ರತ್ಯುಪಕಾರವನ್ನು ಬಯಸದೇ ಇರುವ ಗುಣದಂಥ ಸುಜ್ಞಾನವನ್ನು ಕೊಡುತ್ತದೆ. ಅದನ್ನು ಅರಿತುಕೊಳ್ಳುವ ರೂಢಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಹಾಗಾಗಿ ಭೂಮಿಯೂ ಒಂದು ಗುರು.

..ಮುಂದುವರಿಯುವುದು.

ವಿಷ್ಣು ಭಟ್ಟ ಹೊಸ್ಮನೆ 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.