ಕೊಡವರ ಕ್ರೀಡೋತ್ಸವ‌ಕ್ಕೆ ವಿಶ್ವ ಖ್ಯಾತಿ


Team Udayavani, May 26, 2018, 3:47 PM IST

20.jpg

90ರ ದಶಕದಲ್ಲಿ ಕೊಡಗಿನಲ್ಲಿಯೂ ಕ್ರಿಕೆಟ್‌ ಅಬ್ಬರ ಜೊರಾಯಿತು. ಕೊಡವರ ಮನೆಯ ಹುಡುಗರೆಲ್ಲ ಹಾಕಿ ಸ್ಟಿಕ್‌ ಬದಗಿಟ್ಟು ಕ್ರಿಕೆಟ್‌ ಬ್ಯಾಟ್‌ ಎತ್ತಿಕೊಂಡರು. ಈ ಬೆಳವಣಿಗೆಯಿಂದ ತಕ್ಷಣ ಎಚ್ಚೆತ್ತುಕೊಂಡ ಕೊಡಗಿನ ಹಿರಿಯರು ಹಾಕಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಶ್ರೀಕಾರ ಹಾಕಿದರು…

ಕೊಡಗಿನ ಕಾಫಿ, ಜೀವನದಿ ಕಾವೇರಿ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ತಿಮ್ಮಯ್ಯ ಹೇಗೆ ಜನಜನಿತವೋ ಹಾಗೆಯೇ ಕೊಡಗಿನ ಹಾಕಿ ಕೂಡ ಈಗ ವಿಶ್ವ ವಿಖ್ಯಾತ. ಕಣ್ಮರೆಯಾಗುವ ಅಂಚಿನಲ್ಲಿದ್ದ ಹಾಕಿ ಕ್ರೀಡೆಗೆ ಕೊಡವ ಕುಟುಂಬಗಳ ಮೂಲಕವೇ ಕಾಯಕಲ್ಪ ನೀಡಿದ ಚಿಂತನೆಯೇ ಕ್ರೀಡಾಲೋಕದ ಅದ್ಭುತ ಸಾಧನೆಯಾಗಿದೆ.

90ರ ದಶಕದಲ್ಲಿ ಇತರೆಡೆಗಳಂತೆ ಕೊಡಗಿನಲ್ಲಿಯೂ ಕ್ರಿಕೆಟ್‌ ಅಬ್ಬರ ಜೋರಾಗಿತ್ತು. ಕೊಡವ ಹುಡುಗರು ಹಾಕಿ ಸ್ಟಿಕ್‌ ಮೂಲೆಗಿಟ್ಟು ಕ್ರಿಕೆಟ್‌ ಬ್ಯಾಟ್‌ ಕೈಗೆತ್ತಿಕೊಳ್ಳತೊಡಗಿದರು. ಯುವ ಪೀಳಿಗೆಗೆ ಕ್ರಿಕೆಟ್‌ ಎಂಬುದು ಥ್ರಿಲ್‌ ಜೊತೆಗೆ ಹೊಸ ಗ್ಲಾಮರ್‌ ಆಟ ಎನಿಸತೊಡಗಿತು. ಹಾಕಿ ಆಟದ ಮೈದಾನಗಳು ಕ್ರಿಕೆಟ್‌ಗೆ ಜಾಗ ಬಿಟ್ಟು ಕೊಡುವಂತಾಯಿತು. ಹಾಕಿ ಪಂದ್ಯಾವಳಿ ಬದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್‌ ಟೂರ್ನಿ ನಡೆಯ ತೊಡಗಿತು.

 ಈ ಬೆಳವಣಿಗೆಯಿಂದ ಎಚ್ಚೆತ್ತೂಕೊಂಡವರು ವೀರಾಜಪೇಟೆ ಬಳಿಯ ಕರಡ ಗ್ರಾಮದ ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರು. ಹೀಗೇ ಬಿಟ್ಟರೆ ಕೊಡಗಿನಲ್ಲಿ ಹಾಕಿಗೆ ಉಳಿಗಾಲ ಇಲ್ಲ ಎಂದೆಣಿಸಿ ಹಾಕಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಹೊಸ ಚಿಂತನೆಗೆ ನಾಂದಿ ಹಾಡಿದರು. ಆ ಚಿಂತನೆಯೇ ಕೊಡವ ಕುಟುಂಬಗಳ ನಡುವೆಯೇ ಹಾಕಿ ಪಂದ್ಯಾವಳಿಯ ಆಯೋಜನೆ.

ಕರಡ ಗ್ರಾಮದ ಪುಟ್ಟ ಮೈದಾನದಲ್ಲಿ ಮೊದಲ ಕೌಟುಂಬಿಕ ಪಂದ್ಯಾವಳಿ ಆಯೋಜಿಸಿದಾಗ 60 ಕುಟುಂಬಗಳು ನೋಂದಾಯಿಸಲ್ಪಟ್ಟವು. ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಿಸಲು ಕನಿಷ್ಠ 60 ರಿಂದ 70 ಲಕ್ಷ ರೂ. ವೆಚ್ಚವಾಗುತ್ತದೆ. ಇಷ್ಟೊಂದು ಹಣ ಸಂಗ್ರಹಿಸುವುದು ಹೇಗೆ ಎಂಬ ಚಿಂತೆ ಆಯೋಜಕ ಕುಟುಂಬಗಳಲ್ಲಿ ಕಾಣತೊಡಗಿತು. 

 ಆದರೆ ತರುವಾಯ ಕೊಡವ ಕೌಟುಂಬಿಕ ಹಾಕಿ ಉತ್ಸವ ಬ್ರಾಂಡ್‌ ಇಮೇಜ್‌ ಪಡೆಯಿತು. ಪ್ರಾಯೋಜಕರು ಸಾಲು ಸಾಲಾಗಿ ಕೊಡವ ಹಾಕಿ ಉತ್ಸವಕ್ಕೆ ಸಿಗತೊಡಗಿದರು. ಹೀಗಾಗಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಕಡಿಮೆಯಿಲ್ಲ ಎಂಬಂತೆ ಮೈದಾನ ರೂಪಗೊಂಡಿತು. ಸುಸಜ್ಜಿತ ಗ್ಯಾಲರಿ, ಅದರ ಸುತ್ತ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ಹುಟ್ಟಿಕೊಂಡವು.

ಲಿಮ್ಕಾ ದಾಖಲೆ ಸೇರಿದ ಕ್ರೀಡಾಕೂಟ

ಒಂದು ಜಿಲ್ಲೆಯಲ್ಲಿ, ಒಂದೇ ಜನಾಂಗದವರು, ಒಂದೇ ಆಟವನ್ನು ಒಂದು ತಿಂಗಳಿನಷ್ಟು ಕಾಲ ಒಂದೇ ಕಡೆ ಆಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈಗಾಗಲೇ ಅತ್ಯಧಿಕ ತಂಡಗಳು ಪಾಲ್ಗೊಳ್ಳುವ ಹಾಕಿ ಎಂಬ ಲಿಮ್ಕಾ ರಾಷ್ಟ್ರೀಯ ದಾಖಲೆಗೆ ಕಾರಣವಾಗಿರುವ ಕೊಡವ ಕೌಟುಂಬಿಕ ಹಾಕಿ ಗಿನ್ನಿಸ್‌ ವಿಶ್ವದಾಖಲೆಗೂ ಸೇರುವ ವರ್ಷಗಳು ದೂರವಿಲ್ಲ. ಪಂಜಾಬ್‌ ಮತ್ತು ಕೊಡಗು ಜಿಲ್ಲೆಗೆ ಅನೇಕ ವಿಚಾರಗಳಲ್ಲಿ ಸಾಮ್ಯತೆಯಿದೆ. ದೇಶದ ಸೇನಾ ಪಡೆಗೆ ಅತ್ಯಧಿಕ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಪಂಜಾಬ್‌ ಅಂತೆಯೇ ಅತಿ ಹೆಚ್ಚು ಹಾಕಿ ಪಟುಗಳನ್ನು ನೀಡಿದ ರಾಜ್ಯವಾಗಿಯೂ ಗುರುತಿಸಿಕೊಂಡಿತ್ತು. ಪಂಜಾಬ್‌ ಜನತೆಯ ಶಿಸ್ತು. ವ್ಯವಸ್ಥಿತ ಜೀವನ ಕ್ರಮವನ್ನು ಕೊಡಗಿನ ಜನರಲ್ಲಿಯೂ ಕಾಣಬಹುದಾಗಿತ್ತು. ಈಗ ಕೊಡವ ಕೌಟುಂಬಿಕ ಹಾಕಿ ಆಟದ ಮೂಲಕ ಕೊಡಗು ಜಿಲ್ಲೆ ಅತ್ಯಧಿಕ ಹಾಕಿ ಆಟಗಾರನ್ನು ಹೊಂದಿದ ನಾಡಾಗಿ ಖ್ಯಾತಿ ಪಡೆದಿದೆ. 

ಜಿಲ್ಲೆಯಲ್ಲಿ ಸುಮಾರು 800ರಿಂದ ಒಂದು ಸಾವಿರದಷ್ಟು ಕೊಡವ ಮನೆತನಗಳಿವೆ. ಮುಂದಿನ ದಿನಗಳಲ್ಲಿ ಹಾಕಿ ಉತ್ಸವದಲ್ಲಿ ಭಾಗವಹಿಸುವ ಕೊಡವ ಕುಟುಂಬಗಳ ತಂಡದ ಸಂಖ್ಯೆ ಏರುಮುಖದಲ್ಲೇ ಸಾಗುವಂತಾಗಿದೆ. ಅಲ್ಲದೆ ಕ್ರೀಡಾ ಸ್ಫೂರ್ತಿ ಮುಂದುವರಿದು ದಾಖಲೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಶಾಶ್ವತ ಅನುದಾನ ಬೇಕು
ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವಕ್ಕೆ ರಾಜ್ಯ ಸರಕಾರ ಪ್ರತಿವರ್ಷ ಅನುದಾನವನ್ನು ನೀಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರ ಈ ಉತ್ಸವಕ್ಕೆ ತನ್ನ ಬಜೆಟ್‌ನಲ್ಲಿ ಶಾಶ್ವತವಾಗಿ ಕನಿಷ್ಠ 50 ಲಕ್ಷ ರೂ.ಗಳನ್ನು ಮೀಸಲಿಡುವ ಅಗತ್ಯವಿದೆ ಎಂದು ಆಯೋಜಕರು ಅಭಿಪ್ರಾಯಪಡುತ್ತಾರೆ.

ಕುಲ್ಲೇಟಿರ ಕಪ್‌ ಹಾಕಿ ಉತ್ಸವ
ಕೊಡವ ಕುಟುಂಬಗಳ ನಡುವಿನ 22ನೇ ವರ್ಷದ ಹಾಕಿ ಉತ್ಸವ “ಕುಲ್ಲೇಟಿರ ಕಪ್‌ ಹಾಕಿ ಪಂದ್ಯಾವಳಿ’ಯನ್ನು ಕುಲ್ಲೇಟಿರ ಕುಟುಂಬಸ್ಥರ ನೇತೃತ್ವದಲ್ಲಿ ನಾಪೋಕ್ಲುವಿನ ಸರ್ಕಾರಿ ಪ್ರೌಢ ಶಾಲೆಯ ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಕೊಡವ ಹಾಕಿ ಅಕಾಡೆಮಿ, ಹಾಕಿ ಕೊಡಗು ಮತ್ತು ಹಾಕಿ ಕೊಡಗು ತೀರ್ಪುಗಾರರ ಸಂಘದ ಸಹಯೋಗದಲ್ಲಿ ಈ ಪಂದ್ಯಾವಳಿ ನಡೆಯಿತು.

 ಎಲ್ಲಾ ಕೊಡವ ಕುಟುಂಬಗಳು ಒಂದೆಡೆ ಸೇರಿ ಒಗ್ಗಟ್ಟನ್ನು ಪ್ರದರ್ಶಿಸುವ ಹಾಕಿ ಉತ್ಸವದಲ್ಲಿ ಕೊಡವ ಸಂಸ್ಕೃತಿ, ಆಚಾರ-ವಿಚಾರ ಮತ್ತು ಪರಂಪರೆಗಳನ್ನು ಅನಾವರಣಗೊಳಿಸುವ ಅಪರೂಪದ ಕ್ಷಣ ಸೃಷ್ಟಿಯಾಗಿತ್ತು. ಈ ಹಿಂದೆ 1998 ರ ಕೋಡೀರ ಕಪ್‌, 1999ರ ಬಲ್ಲಚಂಡ ಕಪ್‌ ಹಾಗೂ 2002 ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರ ಕಪ್‌ ಪಂದ್ಯಾವಳಿಗಳಲ್ಲಿ ಕುಲ್ಲೇಟಿರ ಕುಟುಂಬ ವಿಜಯ ಸಾಧಿಸಿದ್ದು, 2018 ರಲ್ಲಿ ಕುಲ್ಲೇಟಿರ ಕಪ್‌ ಕುಟುಂಬವೇ ಹಾಕಿ ಹಬ್ಬವನ್ನು ನಡೆಸಿರುವುದು ವಿಶೇಷ.

ದಾಖಲೆಯ 334  ತಂಡಗಳು
ಕೊಡವ ಹಾಕಿ ಉತ್ಸವದಲ್ಲಿ ದಾಖಲೆಯ ಕುಟುಂಬ ತಂಡ ಪಾಲ್ಗೊಂಡಿರುವ ಕೀರ್ತಿ ಕುಲ್ಲೇಟಿರ ಕಪ್‌ ಹಾಕಿ ಉತ್ಸವಕ್ಕೆ ಸಲ್ಲುತ್ತದೆ. ಅತಿಥೇಯ ಕುಲ್ಲೇಟಿರ ಸೇರಿದಂತೆ 334 ಕುಟುಂಬ ತಂಡಗಳು ಪಾಲ್ಗೊಂಡಿದ್ದು ವಿಶೇಷ. 6 ಕುಟುಂಬ ತಂಡಗಳು ಗೈರಾದ ಹಿನ್ನೆಲೆಯಲ್ಲಿ 328 ಕುಟುಂಬ ತಂಡಗಳು ಆಟವಾಡಿದ್ದ ಹೆಗ್ಗಳಿಕೆ 22ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವಕ್ಕೆ ಸಲ್ಲುತ್ತದೆ.

ಕೊಡವ ಹಾಕಿ ಉತ್ಸವ ಪ್ರಾರಂಭಿಸಿದ್ದ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರಿಗೆ ಪ್ರತಿಯೊಬ್ಬ ಕೊಡವರು ಕೃತಜ್ಞತೆ ಸಲ್ಲಿಸಬೇಕು. ಕೊಡಗಿನ ಆಟಗಾರರು ರಾಷ್ಟ್ರೀಯ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದು ಕೊಡಗಿಗೆ ಹೆಗ್ಗಳಿಕೆಯಾಗಿದೆ. ಹಾಕಿ ಉತ್ಸವ ಆಯೋಜಿಸುತ್ತಿರುವುದರಿಂದ ಕೊಡಗಿನಲ್ಲಿ ಹಾಕಿ ಪುನಶ್ಚೇತನ ಕಂಡಿದೆ. ಕುಲ್ಲೇಟಿರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕುಲ್ಲೇಟಿರ ಕಪ್‌ ಹಾಕಿ ಉತ್ಸವಕ್ಕೆ ಮಾಡಿದ್ದ ವ್ಯವಸ್ಥೆ ಚನ್ನಾಗಿದೆ
-ಎಂ.ಸೋಮಯ್ಯ, ಅಂತಾರಾಷ್ಟ್ರೀಯ ಹಾಕಿ ಆಟಗಾರ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.