![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 18, 2017, 3:44 PM IST
ಕೊಳಲು ಎಂದರೆ 8 ಮನೆ (ರಂಧ್ರ) ಇರಲೇಬೇಕು. ರಾಗ, ಶೃತಿಗೆ ತಾಳ ಹಾಕುವ ಕೊಳಲೇ ಹೆಚ್ಚು. ಇಲ್ಲೊಂದು ಕೊಳಲಿದೆ. ಐದು ಮನೆಯ ಕೊಳಲು. ಐದು ರಾಗ ನುಡಿಸಬಹುದು. ಹೆಸರು ಐದನಿ. ಊದ್ದುದ್ದದ ದೇಸೀ ಕೊಳಲು. ಇಡೀ ಕೊಳಲ ಪ್ರಪಂಚ ವಿಸ್ಮಯ ಗೊಳಿಸುವ ಕೊಳಲ ತಯಾರಕರು ಶಿರಸಿಯ ಎಂ.ವಿ ಹೆಗಡೆ, ಇದರ ನಿರ್ದೇಶಕರು ಹಂಸಲೇಖ.
ಕೊಳಲಿಗೆ ಎಷ್ಟು ಮನೆ? ಏಳು, ಎಂಟು ಅನ್ನೋದು ಜಗದ್ವಿಕ್ಯಾತ ನಿಯಮ. ಏಳು ಮನೆಗಳಿಂದಲೇ ನೂರಾರು ಸ್ವರಗಳು ಹುಟ್ಟುವುದು. ಆದರೆ ಐದು ರಾಗಕ್ಕೆ, ಐದು ಮನೆಯ ಕೊಳಲು ಇದೆಯಾ? ಇದೆ.
ಇದ್ದರೂ ಶುದ್ಧ ಸ್ವರಗಳಲ್ಲಿ ನುಡಿಸಬಹುದೇ? ಖಂಡಿತ.
ಹೀಗೆನ್ನುವ ರೀತಿ ಕೊಳಲು ತಯಾರು ಮಾಡಿರುವುದು ಶಿರಸಿಯ ಈ ಅಪ್ಪಾ ಮಗ. ಹೆಸರು ಮಂಜುನಾಥ ವೆಂಕಟರಮಣ ಹೆಗಡೆ ಮತ್ತು ಗುರುಪ್ರಸಾದ್.
ಈ ಕೊಳಲಿನ ಹೆಸರು ಐದನಿ ಅಂತ. ದುರ್ಗಾ, ರಾಗ್‌ಭೂಪಾಲಿ, ದಾನಿ, ಮಧುಮತ್ ಸಾರಂಗ, ಮಾಲ್‌ಕೌಂನ್ಸ್ -ಈ ಐದು ರಾಗಗಳ ಕೊಳಲು. ಈ ಹೆಸರು, ಐಡಿಯಾ ಕೊಟ್ಟೋರು ಹಂಸಲೇಖ.
“ನೀವು ನೋಡ್ರೀ.. ‘ ಅಂತ ಐದು ಕೊಳಲನ್ನು ಕೈಗಿಟ್ಟಾಗ ಐದು ಮನೆಗಳಿರುವ ಕೊಳಲು ತಯಾರು ಮಾಡುದೋ ಏನು ಮಹಾ? ಹೀಗನಿಸುತ್ತದೆ. ಆದರೆ ಇದರ ಹಿಂದಿರುವ ತಂತ್ರಗಾರಿಕೆ, ಚಾಕಚಕ್ಯತೆಯೇ ಬೇರೆ.
ಸಾಮಾನ್ಯವಾಗಿ ಒಂದೊಂದು ರಾಗ, ಶೃತಿಗೆ ತಕ್ಕಂತೆ ಕೊಳಲು ನಿರ್ಮಾಣವಾಗುತ್ತದೆ. ಆದರೆ ಐದನಿಯಲ್ಲಿ ಆಗಿರುವುದೇ ಬೇರೆ. ಐದು ರಾಗಕ್ಕೆ ಒಂದೇ ಕೊಳಲು. ಊಂಚಳ್ಳಿ ಜಲಪಾತದ ಸುತ್ತಮುತ್ತ ಇರುವ ಬಿದಿರನ್ನೇ ಕೊಳಲಿಗೆ ಬಳಸಿದೆ. ಈ ಅಪ್ಪ-ಮಗನಿಗೆ ಬಿದಿರು ಮರವಾಗಿ ಕಾಣುವುದಿಲ್ಲ. ಸ್ವರವಾಗಿ ಕೇಳುತ್ತದೆ. ಕೈಯಲ್ಲಿ ಬಿದಿರು ಹಿಡಿದರೆ ಇದು ಯಾವ ಶೃತಿಗೆ ಹೊಂದುತ್ತದೆ ಅನ್ನೋದೇ ಲೆಕ್ಕ. ಮಂದ್ರಕ್ಕೆಲ್ಲ ದಪ್ಪನಾದ ಬಿದಿರು. ತಾರಕ ಸ್ಥಾಯಿಗೆಲ್ಲಾ ಸಣ್ಣ ಕೋಲಿನಂತ ಬಿದಿರು. ಅಂದರೆ- ಬಿದಿರು ಸ್ವರಗಳನ್ನು ಜೊತೆಗಿಟ್ಟುಕೊಂಡೇ ಹುಟ್ಟಿರುತ್ತವೆ.
ಕೊಳಲಲ್ಲಿ ರಾಗಮೋಹನ್-ನಲ್ಲಿ ಸಾರೇಗಪ ದಸಾ.. ಸಾರೇಗ- ಗ ಇಲ್ಲ ಅಂದರೂ ಕಷ್ಟ. ಪ್ರತಿ ಸ್ವರಕ್ಕೆ ತಕ್ಕಂತ ಸೈಜು ಇರುವ ಮನೆ ನಿರ್ಮಾಣ ಮಾಡಬೇಕು. ಡಯ ಮೀಟರ್‌ನಲ್ಲಿ ಸ್ವಲ್ಪ ಹೆಚ್ಚಾ ಕಡಿಮೆಯಾದರೂ ಕೊಳಲ ದನಿ ಒಡೆಯುತ್ತದೆ. ತೂತಿನ ಗಾತ್ರ ಇದೆಯಲ್ಲ, ಅದು ಮಂದ್ರಕ್ಕೂ ಒಂದೇ, ತಾರಕ ಸ್ಥಾಯಿಗೂ ಒಂದೇ. ಅದರ ಸೈಜಿನಲ್ಲಿ ವ್ಯತ್ಯಾಸ ಮಾಡುವ ಮೂಲಕ ಸ್ವರಗಳನ್ನು ಕೂಗುವ ಹಾಗೇ ಮಾಡುತ್ತಾರೆ.
ಆದರೆ ಐದನಿಯ ಕೊಳಲ ಐದು ರಾಗಗಳನ್ನು ಕೂಡಿಸುವುದು ಇದರ ಎರಡರಷ್ಟು ಕಷ್ಟ. ಬ್ಲೋವಿಂಗ್ ವೋಲ್ ಮತ್ತು ನಾಲ್ಕು ವೋಲ್‌ಗಳು ಇರುವ ಕೊಳಲು. ಇದು ಅಡ್ಡ ಕೊಳಲ್ಲ. ಉದ್ದ ಕೊಳಲು. ಹೀಗೇಕೆ? ಕೇಳಿದರೆ-
ಅಡ್ಡ ಕೊಳಲು ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಾಗಿ ಬಳಸುತ್ತಾರೆ. ಉದ್ದ ಕೊಳಲು ದೇಸಿ ಕೊಳಲು. ಬಹಳಷ್ಟು ಜನ ಇದರಲ್ಲಿ ಶೃತಿ ಹುಡುಕಲ್ಲ. ಬದಲಾಗಿ ಕೊಳಲು ಊದುವ ಹವ್ಯಾಸಕ್ಕೆ ಬಳಸುತ್ತಾರೆ. ಉದ್ದಕೊಳಲು ನುಡಿಸಲು ಯಾವುದೇ ಶಾಸ್ತ್ರಗಳು ಬೇಕಿಲ್ಲ. ಸುಲಭವಾಗಿ ನುಡಿಸಬಹುದು. ಹಂಸಲೇಖರು ದೇಸಿ ಸ್ಟೈಲ್‌ನಲ್ಲಿ ಇರಬೇಕು ಅಂದದ್ದಕ್ಕೆ ಊದ್ದುದ್ದ ಮಾಡಿದ್ದು ಅಂತಾರೆ ಗುರುಪ್ರಸಾದ್ ಹೆಗಡೆ.
ಇದರ ವಿಶೇಷ ಇಷ್ಟೇ ಅಲ್ಲ. ಉದ್ದ ಕೊಳಲಿನಲ್ಲಿ ಸ್ವರ ಕೂಡಿಸುವುದು ಸುಲಭವಲ್ಲ. ಬ್ಲೋವಿಂಗ್ ವೋಲ್ ಅನ್ನು ಅಡ್ಡ ಕೊಳಲಿನಲ್ಲಿ ಸುಲಭವಾಗಿ ಹೊಂದಿಸಬಹುದು. ಉದ್ದ ಕೊಳಲಿಗೆ ಬಹಳ ಕಷ್ಟ. ಅದರಲ್ಲೂ ಐದನಿಯಲ್ಲಿ. ನಾಲ್ಕು ಮನೆ (ರಂಧ್ರ) ಕೊಳಲಲ್ಲಿ ಬೆರಳ ಪೊಜಿಷನ್ ಬದಲಾಗುತ್ತದೆ. ಎರಡು ಬೆರಳಿಗೆ ಕೆಲಸ ಇರೋಲ್ಲ. ಬೆರಳುಗಳು ಪೊಜಿಷನ್‌ಗೆ ಬಂದು ಕೂರೋದಕ್ಕೆ ಬಹಳ ಕಷ್ಟವಾಗುತ್ತದೆ. ಹೀಗಿರಬೇಕಾದರೆ – ಐದು ರಾಗಕ್ಕೆ ಐದು ಮನೆ, ಒಂದೇ ಕೊಳಲು ಅಥವಾ ಐದು ಮನೆಯ ಐದು ಕೊಳಲು ಇರುವುದು ಸಂಗೀತ ಜಗತ್ತಿನಲ್ಲಿ ಪ್ರಥಮ ಪ್ರಯೋಗ.
ಇಷ್ಟಕ್ಕೆಲ್ಲಾ ಕಾರಣ ಎಂ.ಕೆ. ಹೆಗಡೆ. ಇವರೇನು ಸಾಮಾನ್ಯರೇನಲ್ಲ. ಹಿಂದೂಸ್ತಾನಿ ಸಂಗೀತ ಕಲಿಯಬೇಕು ಅಂತ ಗದಗ್ ಹೋದವರು, ಅಲ್ಲಿ ಸರಿಯಾದ ಕೊಳಲು ಸಿಗಲಿಲ್ಲ ಅಂತ ತಯಾರಿಕಾ ಕ್ಷೇತ್ರಕ್ಕೆ ಬಂದರು. ಈಗ ನೋಡಿ ಪ್ರವೀಣ್‌ಗೋಡ್ಖೀಂಡಿ , ಅವರ ತಂದೆ ವೆಂಕಟೇಶಗೋಡಿRಂಡಿ ಜೊತೆಗೆ ಆಕಾಶವಾಣಿಯ ಹೆಸರಾಂತ ವಾದಕರಿಗೆ ಕೊಳಲು ಮಾಡಿಕೊಟ್ಟಿದ್ದಾರೆ. ಮಾಡಿಕೊಡುತ್ತಲೇ ಇದ್ದಾರೆ. ಎಂ.ವಿ. ಹೆಗಡೆಗೆ ಈಗ 65ರ ವಯಸ್ಸು. ಒಳ್ಳೇ ಕೊಳಲು ತಯಾರಿಸುವ ಹುಕಿ ಜಾಸ್ತಿಯಾದ ಕೂಡಲೇ ಮಾಡುವ ಮೊದಲ ಕೆಲಸ ಊಂಚಳ್ಳಿ ಜಲಪಾತ ಸುತ್ತಮುತ್ತ ತಿರುಗುವುದು. ಒಳ್ಳೆ ಬಿದಿರು ಹುಡುಕಿ ಕೊಳಲು ತಯಾರು ಮಾಡುವುದು. ಇವರ ಮನೆಯಿಂದ ಕಾಡಿಗೆ ಹೋಗೋದು ಕೇವಲ 30ನಿಮಿಷ. ಆದರೆ ಹೊರ ಬರುವ ಹೊತ್ತಿಗೆ ಮೂರು ಗಂಟೆ ಬೇಕು. ಹೆಗಡೆಯವರಿಗೆ ಒಂದು ಸಲ ಕಾಡಿಗೆ ಹೋದರೆ ಎರಡು ದಿನ ರೆಸ್ಟ್ ಬೇಕು. “ಒಳ್ಳೇ Flute ಬೇಕು ಅಂದರೆ ಹೀಗೆ ಶ್ರಮಪಡಲೇಬೇಕು’ ಅಂತಾರೆ ಎಂ.ವಿ. ಹೆಗಡೆ.
” ಹಂಸಲೇಖ ಮೊದಲು ಐದು ರಾಗಕ್ಕೆ, ಐದು ಮನೆಯ ಕೊಳಲು ಮಾಡಿಕೊಡ್ತೀರ ಅಂದರು. ಇದು ಕೊಳಲಿನ ಹೊಸ ಭಾಷೆ . ನಮಗಂತೂ ಯಾವುದೇ ಐಡಿಯಾ ಇರಲಿಲ್ಲ. ಆಗಲೇ ಹಂಸಲೇಖ ಸುಮಾರು ಜನರ ಹತ್ತಿರ ಇದನ್ನು ಮಾಡಿಸಿ ನೋಡಿದ್ದರು. ಫಲತಾಂಶ ಶೂನ್ಯವಾಗಿತ್ತು. ಹದಿನೈದು ದಿನದಲ್ಲಿ ಶ್ಯಾಂಪಲ್ ತೋರಿಸಿದೆವು. ಖುಷಿಯಾದರು. ಆರಂಭದಲ್ಲಿ ಅಡ್ಡ ಕೊಳಲನ್ನು ಮಾಡಿದ್ದೆವು. ಅಡ್ಡ ಕೊಳಲು ಶಾಸ್ತ್ರೀಯಕ್ಕೆ ಮಾತ್ರ ಬಳಕೆಯಾಗುತ್ತದೆ. ಸ್ವರಗಳು ಕೂರಬೇಕಾದರೆ ವರ್ಷಾನುಗಟ್ಟಲೆ ಬೇಕು. ಅದಕ್ಕೆ ಹಂಸಲೇಖ ನೇರ ಕೊಳಲು ಮಾಡಲು ಹೇಳಿದರು. ಇದನ್ನೂ ಇನ್ನೂ ಚಾಲೆಂಜ್ ಕೆಲಸ. ಬ್ಯಾಂಬೋ ಅರ್ಧ ಕೆತ್ತಿ, ಶೇಪ್ ಮಾಡಿ ಸ್ವರ ಕೂಡಿಸೋದು ಸುಲಭವಾಗರಲಿಲ್ಲ. ಬ್ಯಾಂಬೋ ಸಿಕ್ಕಾಪಟ್ಟೆ ವೇಸ್ಟ್ ಆಯಿತು. ಆಮೇಲೆ ಒಂದೇ ಫೂÉಟ್‌ನ, ಐದು ಮನೆಗಳಲ್ಲಿ ಐದು ರಾಗ ನುಡಿಸುವ ಕೊಳಲು ತಯಾರು ಮಾಡಿದೆವು. ಇಷ್ಟವಾಯಿತು. ಪ್ರತಿ ರಾಗಕ್ಕೆ ಒಂದಂತೆ ಮಾಡಿಕೊಟ್ಟೆವು. ಇನ್ನೂ ಖುಷಿಯಾದರು ಎನ್ನುತ್ತಾರೆ ಎಂ.ವಿ. ಹೆಗಡೆ.
ಕೊಳಲು ಕೂಡ ಒಂಥರ ಅವಕಾಶವಾದಿ, ವಾತಾರವಣ ಬದಲಾದಂತೆ ಹಿಗ್ಗೊàದು, ಕುಗ್ಗೊàದು ಮಾಡುತ್ತದೆ. ಹೀಗೆ ಮಾಡಿದರೆ ಶೃತಿಬದಲಾವಣೆಯಾಗುತ್ತದೆ. ಶಿರಸಿಯಲ್ಲಿ ಇದ್ದಾಗೆ ಒಂಥರ, ಬೆಂಗಳೂರಿಗೆ ಬಂದರೆ ಇನ್ನೊಂದು ಥರ ನುಡಿಯುತ್ತದೆ. ಆದರೆ ಎಂ. ವಿ ಹೆಗಡೆ ಇಂಥ ಸೂಕ್ಷ್ಮಗಳನ್ನು ಗಮನಿಸಿ ಕೊಳಲು ತಯಾರು ಮಾಡೋದೇ ಇವರ ವಿಶೇಷ.
ಐದನಿ ಹುಟ್ಟಿದ್ದು
ಐದು ಮನೆಯಲ್ಲಿ, ಐದು ರಾಗವನ್ನು, ಒಂದೇ ಕೊಳಲಲ್ಲಿ ನುಡಿಸಬಹುದು ಅಂತ ಐಡಿಯಾ ಮಾಡಿದ್ದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ. ಆರಂಭದಲ್ಲಿ ಇವರ ಈ ಯೋಚನೆ ಕೇಳಿಯೇ ಎಷ್ಟೋ ಜನ ಕೈ ತೊಳೆದು ಕೊಂಡು ಹೋದರು. ಆದರೆ ಇವರ ಬಿಡಲಿಲ್ಲ. ಹುಟ್ಟಿದ್ದು ಹೇಗೆ? ಇಲ್ಲಿ ಹೇಳಿದ್ದಾರೆ.
“ಐದನಿ ಅನ್ನೋದು ಬುಡಕಟ್ಟಿನ ಅಂದರೆ ದೇಸಿ ಸಂಗೀತ. ಬುಡಕಟ್ಟು ಜನಾಗಂದವರು ಊದುವ ಕೊಳಲು ಕೂಡ ಐದು ಮನೆಯದ್ದೆ. ಅಂದರೆ ಐದನಿ. ಐದು ಸ್ವರದಿಂದಲೇ ಲೋಕ ಮೆಚ್ಚಿಸಿದ್ದು. ಒಂದು ಕಥೆ ಗೊತ್ತಾ?
ಹಿಂದೆ ಕರಿಯರು ತಮ್ಮ ಕೋಪವನ್ನು ತೋರಿಸುತ್ತಿದ್ದದ್ದು ಇಂತದೇ ಸಂಗೀತದಿಂದ.
ಈಗ ನೋಡಿ, ಅದು ಜಾಸ್ ಮ್ಯೂಸಿಕ್ ಆಗಿ ಬಿಳಿಯರು ಕೂಡ ತಲೆದೂಗುವಂತೆ ಮಾಡಿದೆ.
ನನ್ನ ತಲೆಯಲ್ಲಿ ಐದನಿ ಹುಟ್ಟಿದ್ದು ಗಡೇ ವಾದ್ಯ ಬಾರಿಸುವವರನ್ನು ನೋಡಿದ ಮೇಲೆ. ಅವರನ್ನು ಕರೆಸೋದು, ನುಡಿಸೋದು, ಅದನ್ನು ಕೇಳ್ಳೋದು ಹೀಗೆ ಮಾಡುತ್ತಿದ್ದೆ.
ಆಗ ಐದನಿ ಹೊಳಪು ಜಾಸ್ತಿಯಾಯಿತು. ಆಮೇಲೆ ನೋಡಿದರೆ ಜಾನ್ ಫೈತ್‌ಪ್ಲಿತ್ ಅನ್ನೋ ಭಾಷಾಜ್ಞಾನಿ ಬುಡಕಟ್ಟು ಜನಾಂಗದ ಲಾವಣಿ ಕೇಳಿ, ನೋಟ್ಸ್ ಮಾಡಿ ಹಾಡಿದ್ದ. ಅದೂ ಕೂಡ ಐದನಿಯಲ್ಲೇ ಇತ್ತು. ಐದನಿ ದೇಸಿ ಸಂಗೀತದ ಅಡಿಪಾಯ. ನಮ್ಮ ದೇಸಿ ಸಂಗೀತದಲ್ಲಿ ಐದನಿ ಪರಿಚಯ ಮಾಡಬೇಕು, ಅದನ್ನು ಕೊಳಲಿನ ಮೂಲಕವೇ ಆಗಬೇಕು ಅಂತ ಸುಮಾರು ಜನರನ್ನು ಕೇಳಿದೆ. ಯಾರೂ ಐದು ಮನೆಯ ಕೊಳಲು ಮಾಡಲು ಮುಂದೆ ಬರಲಿಲ್ಲ. ನಾನಾ ಕಾರಣ ಹೇಳಿದರು. ಮಾಡಿಕೊಟ್ಟರು ಮನಸ್ಸಿಗೆ ಒಪ್ಪಲಿಲ್ಲ. ಕೊನೆಗೆ ಸಿಕ್ಕಿದ್ದು ಶಿರಸಿಯ ಎಂ.ವಿ ಹೆಗಡೆ, ಗುರುಪ್ರಸಾದ್ ಅನ್ನೋ ಅಪ್ಪಾ ಮಗ.
“ಸ್ವಾಮೀ, ನನಗೆ ಐದು ಮನೆ ಕೊಳಲು ಮಾಡಿಕೊಡಿ ಅಂದಾಗ ತಲೆ ಅಡ್ಡಡ್ಡಹಾಕಿದರು. ಆಮೇಲೆ ಮಾಡಿ ಕೊಡ್ತೀನಿ ಅಂದರು. ಕೊನೆಗೆ ಮಾಡಿಯೇ ಬಿಟ್ಟರು. ಐದು ಸ್ವರಕ್ಕೆ ಐದು ಕೊಳಲು ಮಾಡಿದ್ದಾರೆ. ತಯಾರಿಕೆಯೇ ಬಹಳ ಕಷ್ಟ. ನುಡಿಸೋದು ಇನ್ನೂ ಕಷ್ಟ.
ನಮ್ಮ ಐದನಿ ಎಂಬ ದೇಸಿ ಜಾಸ್‌ಮ್ಯೂಸಿಕ್ ಅನ್ನು ಪ್ರಚಾರ ಮಾಡುವ ಸಲುವಾಗಿ, ಕರ್ನಾಟಕ ಸಂಗೀತದ ತಾಕತ್ತನ್ನು ಪಡೆದು ಕೊಂಡು, ಹಿಂದೂಸ್ತಾನಿ ಮಹತ್ವವನ್ನು ಒಗ್ಗೂಡಿಸಿಕೊಂಡು ಬೆಳೆಯಬೇಕು ಅನ್ನೋ ನಿಟ್ಟಿನಲ್ಲಿ ನನ್ನ ದೇಸಿ ಸಂಗೀತಶಾಲೆಯ ಮೂಲಕ ಇಡೀ ವರ್ಷ ಐದನಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ ‘ ಅಂತಾರೆ ಹಂಸಲೇಖ.
ಕೊಳಲು ಹೇಗೆ ತಯಾರಾಗುತ್ತದೆ?
ಮಂಜುನಾಥ ವೆಂಕಟರಮಣ ಹೆಗಡೆ ಅಸ್ಸಾಂ ಹಾಗೂ ಊಂಚಳ್ಳಿ ಜಲಪಾತದ ಸುತ್ತ ಮುತ್ತ ಇರುವ ಬಿದಿರನ್ನೇ ಕೊಳಲಾಗಿಸುತ್ತಾರೆ. ಬಿದಿರು ತಂದಾಕ್ಷಣ ಕೊಳಲಾಗೋಲ್ಲ. ಯಾವ ಬಿದಿರು, ಯಾವ ಶೃತಿಗೆ ಅನ್ನೋದನ್ನು ಕಣ್ಣೋಟದಲ್ಲಿ ತೀರ್ಮಾನಿಸಬೇಕು. ತಂದ ಮೇಲೆ ಕುಟ್ಟೆ ಹುಳ ಹೊಡೆಯದಂತೆ ವರ್ಲೆ ಅನ್ನೋ ದೇಸಿ ಔಷಧದಲ್ಲಿ ಮೂರು ದಿನ ನೆನೆ ಹಾಕುತ್ತಾರೆ. ಇದು ನುಡಿಸಾಣಿಕೆ ಮಾಡುವಾಗ ಹೊಟ್ಟೆಗೆ ಹೋದರೂ ಆರೋಗ್ಯಕ್ಕೆ ತೊಂದರೆ ಇಲ್ಲ. ನೆನೆದ ಬಿದಿರನ್ನು ಮೂರು ತಿಂಗಳು ಬಿಸಿಲಿಗೆ ಒಣ ಹಾಕುತ್ತಾರೆ. ಆಮೇಲೆ ಸೈಜು, ಶೃತಿಗೆ ತಕ್ಕಂತೆ ಬಿದಿರನ್ನು ಕಟ್ ಮಾಡಿ, ಕಬ್ಬಿಣದ ರಾಡ್ ಮೂಲಕ ವೋಲ್ (ಮನೆ) ಮಾಡಿ ಕೊಳಲ ರೂಪಕ್ಕೆ ತರುತ್ತಾರೆ. ಹೊಟ್ಟೆ ಒಳಗೆ ಶೃತಿಗನುಗುಣವಾಗಿ ವೋಲ್ ಮಾಡುವುದು ದೊಡ್ಡ ಚಾಲೆಂಜ್. ಚಿಕ್ಕ ವೋಲು ಟ್ಯೂನ್‌ಗೆ ತಕ್ಕಂತೆ ದೊಡ್ಡ ಹೋಲು.
ವೋಲ್ ಅಂತರ ಕಡಿಮೆ ಆಗಬಾರದು. ಗಾತ್ರ ದೊಡ್ಡದಾಗಬಾರದು. ವ್ಯತ್ಯಾಸವಾದರೆ ಶೃತಿಗೂ ತೊಂದರೆ. ಇದರಲ್ಲೂ ಕೆಳ ಹಾಗೂ ಮೇಲ್ ಮನೆಗಳು ಸರಿಯಾಗಿ ಟ್ಯೂನ್ ಆಗಿರಬೇಕು. ಹಿಂದೆ ತಾನ್‌ಪುರು ಕೂಗುತ್ತಿರಬೇಕು. ಅದಕ್ಕೆ ಹೊಂದುವಂತೆ ಟ್ಯೂನ್ ಮಾಡಬೇಕು. 420 ತರಂಗಾಂತರದಲ್ಲಿ ಇವೆಲ್ಲವೂ ನಡೆಯುತ್ತದೆ. ಈ ಸ್ವರ ಕೂಡಿಸುವ ಕೆಲಸಕ್ಕೆ ಮೂರು, ನಾಲ್ಕು ದಿನ ಹಿಡಿಯುತ್ತದೆ. ಬೇಸ್ ಶೃತಿಗಳೆಲ್ಲಾ ದಪ್ಪ, ಉದ್ದುದ್ದ ಗಾತ್ರದ ಕೊಳಲು. ಟಾಪ್ ಶೃತಿಗಳದೆಲ್ಲ ಸಣ್ಣಗಿರುತ್ತದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.