4ನೇ ಇನಿಂಗ್ಸ್‌ನ 5 ವಿಕ್ರಮಗಳು


Team Udayavani, Feb 23, 2019, 1:05 AM IST

19.jpg

ಕ್ರಿಕೆಟ್‌ ಜಗತ್ತಿನ ಮೂಲ ಮಾದರಿ ಟೆಸ್ಟ್‌. ಈಗಲೂ ಸಾಂಪ್ರದಾಯಿಕರು, ದಿಗ್ಗಜರು ಟೆಸ್ಟ್‌ ಅನ್ನೇ ನಿಜವಾದ ಕ್ರಿಕೆಟ್‌ ಎನ್ನುತ್ತಾರೆ. 5 ದಿನಗಳು ನಡೆಯುವ ಈ ಪಂದ್ಯದಲ್ಲಿ, ಶಾರೀರಿಕ-ಮಾನಸಿಕ ಶಕ್ತಿಯನ್ನು ಉಳಿಸಿಕೊಳ್ಳುವುದೇ ನೈಜ ಸಾಮರ್ಥ್ಯ ಎನ್ನುತ್ತಾರೆ ಸಾಂಪ್ರದಾಯಿಕರು. ಅದು ಹೌದು ಕೂಡ. ಕ್ರಿಕೆಟ್‌ನ ಈ ಮಾದರಿಗೆ ಬೇಕಾಗಿರುವ ಆಟದ ಕ್ರಮವೇ ಬೇರೆ. ಇಲ್ಲಿ ನಾವು ಟಿ20 ಹಾಗೂ ಏಕದಿನದ ಶೈಲಿಯಲ್ಲಿ ಆಡಿ ಬಚಾವಾಗುವುದು ಬಹಳ ಕಷ್ಟ. ಇಂತಹ ಆಟದಲ್ಲಿ ನಾಲ್ಕನೇ ಇನಿಂಗ್ಸ್‌ ಎನ್ನುವುದು ಇನ್ನೂ ಕಷ್ಟ. ಇಲ್ಲಿ ಯಾವಾಗಲೂ ಗುರಿ ಬೆನ್ನತ್ತುವ ಸವಾಲಿರುತ್ತದೆ. ಓವರ್‌ಗಳ ಮಿತಿ, ಕೈಯಲ್ಲಿರುವ ವಿಕೆಟ್‌ಗಳ ಮಿತಿ, ಎದುರಾಳಿ ಬೌಲರ್‌ಗಳು, ಅಂಕಣ ವರ್ತಿಸುವ ರೀತಿ ಇವೆಲ್ಲವನ್ನೂ ನಿಭಾಯಿಸಿಕೊಂಡು 4ನೇ ಇನಿಂಗ್ಸ್‌ನಲ್ಲಿ ತಂಡವನ್ನು ಗೆಲ್ಲಿಸುವುದು ಸಾಮಾನ್ಯದ ಮಾತಲ್ಲ. ಅದರಲ್ಲೂ ಸೋಲುವುದು ಖಾತ್ರಿ ಎಂಬ ಸ್ಥಿತಿಯಿದ್ದಾಗ, ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲ್ಲಿಸುವುದಂತೂ ಅಸಾಮಾನ್ಯ ಸಾಧನೆ. ಇತ್ತೀಚೆಗೆ ಶ್ರೀಲಂಕಾದ ಕುಶಲ್‌ ಪೆರೆರ, ಆತಿಥೇಯ ದ.ಆಫ್ರಿಕಾ ವಿರುದ್ಧ 153 ರನ್‌ ಬಾರಿಸಿ, ತಂಡವನ್ನು ಗೆಲ್ಲಿಸಿದರು ಮಾತ್ರವಲ್ಲ, 4ನೇ ಇನಿಂಗ್ಸ್‌ನ ಸಾರ್ವಕಾಲಿಕ ಶ್ರೇಷ್ಠ ಶತಕಗಳಲ್ಲೊಂದನ್ನು ಬಾರಿಸಿದರು. ಈ ನೆನಪಲ್ಲಿ 4ನೇ ಇನಿಂಗ್ಸ್‌ನಲ್ಲಿ ದಾಖಲಾದ ಅದ್ಭುತ ಶತಕಗಳು ಇಲ್ಲಿವೆ.

ದ.ಆಫ್ರಿಕನ್ನರನ್ನು ಮಣಿಸಿತು ಜಯವರ್ಧನೆಯ 123 ರನ್‌
2006ರಲ್ಲಿ ಶ್ರೀಲಂಕಾ ಕ್ರಿಕೆಟ್‌ ಜಗತ್ತಿನ ಅತಿ ಬಲಿಷ್ಠ ತಂಡಗಳಲ್ಲೊಂದೆಂಬ ಖ್ಯಾತಿಯನ್ನು ಹೊಂದಿತ್ತು. ಆ ವೇಳೆ ಇನ್ನೊಂದು ಪ್ರಬಲ ತಂಡ ದ.ಆಫ್ರಿಕಾ, ಶ್ರೀಲಂಕಾಕ್ಕೆ ಪ್ರವಾಸ ಬಂದಿತ್ತು. ಕೊಲಂಬೊದಲ್ಲಿ ನಡೆದ ಆ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಸೆಡ್ಡು ಹೊಡೆದು ನಿಂತ ದ.ಆಫ್ರಿಕಾ, 4ನೇ ಇನಿಂಗ್ಸ್‌ನಲ್ಲಿ ಗೆಲ್ಲಲು 352 ರನ್‌ ಭಾರೀ ಸವಾಲು ನೀಡಿತು. ಇದನ್ನು ಬೆನ್ನತ್ತಿ ಹೊರಟ ಲಂಕಾಕ್ಕೆ ಸನತ್‌ ಜಯಸೂರ್ಯ (73 ರನ್‌) ಸ್ಫೋಟಕ ಬ್ಯಾಟಿಂಗ್‌ ಬಲ ತುಂಬಿತ್ತು. ತಂಡದ ಮೊತ್ತ 121 ರನ್‌ಗಳಾಗಿದ್ದಾಗ ಅವರು 3ನೇಯವರಾಗಿ ಔಟಾದ ನಂತರ ಶುರುವಾಗಿದ್ದು ಮಹೇಲಾ ಜಯವರ್ಧನೆ ಪರಾಕ್ರಮ. ಒಂದರ ನಂತರ ಒಂದು  ವಿಕೆಟ್‌ಗಳು ಉರುಳುತ್ತಲೇ ಹೋದರೂ, ಆಫ್ರಿಕಾ ಶಾನ್‌ ಪೊಲಾಕ್‌, ಮಖಾಯ ಎನ್‌ಟಿನಿ, ಡೇಲ್‌ಸ್ಟೇನ್‌ರಂತಹ ಪ್ರಬಲ ಬೌಲರ್‌ಗಳನ್ನು ತಾಳಿಕೊಂಡು ನಿಂತರು. ಇನ್ನೊಂದೇ ಒಂದು ವಿಕೆಟ್‌ಗಳು ಉಳಿದಿದ್ದಾಗ ತಂಡವನ್ನು ಗೆಲ್ಲಿಸಿದರು. ಮಹೇಲಾ ಗಳಿಕೆ 248 ಎಸೆತಕ್ಕೆ 123 ರನ್‌.

ಬ್ರಿಯಾನ್‌ ಲಾರಾ 153ಕ್ಕೆ ಸರಿಸಾಟಿಯೇ ಇಲ್ಲ
1999ರಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಗ್ಲೆನ್‌ ಮೆಕ್‌ಗ್ರಾತ್‌, ಜೇಸನ್‌ ಗಿಲೆಸ್ಪಿ, ಬ್ರೆಟ್‌, ಲೀ, ಶೇನ್‌ ವಾರ್ನ್ರಂತಹ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳು ತುಂಬಿಕೊಂಡಿದ್ದರು. ಆಗ ವೆಸ್ಟ್‌ ಇಂಡೀಸ್‌ ತಂಡ ತುಸು ದುರ್ಬಲವಾಗಿತ್ತು. ಬಾರ್ಬೆಡೋಸ್‌ನಲ್ಲಿ ನಡೆದ ಆ ಅಸಮಾನ್ಯ 3ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಸರಣಿ 1-1ರಿಂದ ಸಮಬಲಗೊಂಡಿತ್ತು. ಇಂತಹ ನಿರ್ಣಾಯಕ ಸ್ಥಿತಿಯಲ್ಲಿ 4ನೇ ಇನಿಂಗ್ಸ್‌ನಲ್ಲಿ ವಿಂಡೀಸ್‌ಗೆ ಸಿಕ್ಕಿದ್ದು 308 ರನ್‌ ಗೆಲುವಿನ ಗುರಿ. ನಾಯಕ ಬ್ರಿಯಾನ್‌ ಲಾರಾ ಕ್ರೀಸ್‌ಗೆ ಬರುವಾಗ 78 ರನ್‌ಗೆ 3 ವಿಕೆಟ್‌ ಹೋಗಿತ್ತು. 105 ರನ್‌ಗಳಾಗುವಾಗ ಪ್ರಮುಖ 5 ವಿಕೆಟ್‌ಗಳು ಉರುಳಿಯಾಗಿತ್ತು. ಇಲ್ಲಿಂದ ಏಕಾಂಗಿಯಾಗಿ ತಂಡವನ್ನು ಭುಜದ ಮೇಲೆ ಹೊತ್ತುಕೊಂಡ ಹೋದ ಲಾರಾ, ಜಿಮ್ಮಿ ಆ್ಯಡಮ್ಸ್‌ ಜೊತೆಗೂಡಿ 133 ರನ್‌ ಒಗ್ಗೂಡಿಸಿದರು. ಅಲ್ಲಿ ಆ್ಯಡಮ್ಸ್‌ ಕೊಡುಗೆ ಬರೀ 38 ರನ್‌. ಮುಂದೆ ಬ್ಯಾಟ್‌ ಬೀಸಲು ತಿಣುಕಾಡುವ ಬೌಲರ್‌ಗಳ ಜೊತೆ ಸೇರಿಕೊಂಡು, ಏಕಾಂಗಿ ಹೋರಾಡುತ್ತ ಹೋದ ಲಾರಾ ಇನ್ನೊಂದೇ ಒಂದು ವಿಕೆಟ್‌ ಉಳಿದಿರುವಾಗ ವಿಂಡೀಸನ್ನು ಗೆಲುವಿನ ಪೀಠದ ಮೇಲೆ ಕೂರಿಸಿದರು. ಲಾರಾ ಕೊಡುಗೆ 256 ಎಸೆತಕ್ಕೆ 153 ರನ್‌.

ಗ್ರೀನಿಜ್‌ 214: ಹೀಗೂ ಆಡಲು ಸಾಧ್ಯವೇ?
ಟೆಸ್ಟ್‌ ಕ್ರಿಕೆಟನ್ನು ಏಕದಿನ, ಟಿ20 ಮಾದರಿಯಲ್ಲಿ 1984ರಲ್ಲಿಯೇ ಆಡಿ ತೋರಿಸಿದ್ದು ವೆಸ್ಟ್‌ ಇಂಡೀಸ್‌ನ ದಂತಕಥೆ ಗಾರ್ಡನ್‌ ಗ್ರೀನಿಜ್‌. ಆತಿಥೇಯ ಇಂಗ್ಲೆಂಡ್‌ ತಂಡ ಕ್ರಿಕೆಟ್‌ನ ಕಾಶಿ ಎನಿಸಿಕೊಂಡ ಲಾರ್ಡ್ಸ್ನಲ್ಲಿ ವೆಸ್ಟ್‌ ಇಂಡೀಸ್‌ಗೆ ಗೆಲ್ಲಲು 342 ರನ್‌ ಗುರಿ ನೀಡಿತ್ತು. ಅದೂ ಕೇವಲ 78 ಓವರ್‌ಗಳಲ್ಲಿ. ಇಂತಹ ಹೊತ್ತಿನಲ್ಲಿ ಇನಿಂಗ್ಸ್‌ ಆರಂಭಿಸಿದ ವಿಂಡೀಸ್‌ ತನ್ನ ಮೊದಲ ವಿಕೆಟನ್ನು ರನೌಟ್‌ ರೂಪದಲ್ಲಿ ಕಳೆದುಕೊಂಡಿತ್ತು. ಹೇನ್ಸ್‌ ಔಟಾದರೂ, ಮತ್ತೂಂದು ತುದಿಯಲ್ಲಿದ್ದ ಗ್ರೀನಿಜ್‌ ಹೆದರಲಿಲ್ಲ. ಇಂಗ್ಲೆಂಡ್‌ ಬೌಲಿಂಗ್‌ ದಂತಕಥೆಗಳನ್ನು ಚಚ್ಚತೊಡಗಿದ ಅವರು, ಇನ್ನೊಂದು  ವಿಕೆಟ್‌ ಪತನಕ್ಕೆ ಅವಕಾಶಕೊಡದೇ, 68 ಓವರ್‌ಗಳಲ್ಲೇ ತಂಡವನ್ನು ಗೆಲ್ಲಿಸಿಬಿಟ್ಟರು. 242  ಎಸೆತದಲ್ಲಿ ಅವರು 214 ಬಾರಿಸಿದ್ದರು. ಅದರಲ್ಲಿ 29 ಬೌಂಡರಿ, 2 ಸಿಕ್ಸರ್‌ ಸೇರಿದ್ದವು. ಈ ಪಂದ್ಯ ಮುಗಿದ ಮೇಲೆ ಕೇಳಿ ಬಂದ ಉದ್ಗಾರ: ಹೀಗೂ ಆಡಲು ಸಾಧ್ಯವೇ?

4ನೇ ಇನಿಂಗ್ಸ್‌ ಕಳಂಕ ಕಳೆದುಕೊಂಡ ತೆಂಡುಲ್ಕರ್‌ 
ನಾಲ್ಕನೇ ಇನಿಂಗ್ಸ್‌ನಲ್ಲಿ ಅಂದರೆ ಗುರಿ ಬೆನ್ನತ್ತುವಾಗೆಲ್ಲ ಸಚಿನ್‌ ತೆಂಡುಲ್ಕರ್‌ ವಿಫ‌ಲವಾಗುತ್ತಾರೆ ಎಂಬ ಅಪಖ್ಯಾತಿಯಿತ್ತು. ಅದನ್ನು ನಿವಾರಿಸಿದ್ದು 2008ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ಬಾರಿಸಿದ ಆ 103 ರನ್‌. ಇಂಗ್ಲೆಂಡ್‌, ಭಾರತಕ್ಕೆ 387 ರನ್‌ ಗಳಿಸುವ ಬೃಹತ್‌ ಗುರಿಯನ್ನೇ ನೀಡಿತ್ತು. ಅದರ ಬೆನ್ನತ್ತಿ ಹೊರಟ ಭಾರತದ ಕೆಲಸವನ್ನು ಸಚಿನ್‌ ತೆಂಡುಲ್ಕರ್‌ ಸಲೀಸು ಮಾಡಿದರು. ಅವರು ಯುವರಾಜ್‌ ಸಿಂಗ್‌ ಜೊತೆಗೆ ಸೇರಿಕೊಂಡು 5ನೇ ವಿಕೆಟ್‌ಗೆ 163 ರನ್‌ ಸೇರಿಸಿದರು. ಭಾರತ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಇಲ್ಲಿ ತೆಂಡುಲ್ಕರ್‌ 196 ಎಸೆತ ಎದುರಿಸಿ 103 ರನ್‌ ಬಾರಿಸಿದರು. ಇದು ತೆಂಡುಲ್ಕರ್‌ ಟೆಸ್ಟ್‌ ಜೀವನದ 41ನೇ ಶತಕ. ಅವರ ಕ್ರಿಕೆಟ್‌ ಜೀವನದ ಶ್ರೇಷ್ಠ ಶತಕಗಳಲ್ಲೊಂದು ಎಂಬ ಹೆಗ್ಗಳಿಕೆಯೂ ಇದೆ.

ಶ್ರೀಲಂಕಾಕ್ಕೆ ಘಾತಕವಾದ ಲಕ್ಷ್ಮಣ್‌ 103 ರನ್‌
ವೆಂಗಿಪುರಪ್ಪು ವೆಂಕಟಸಾಯಿ ಲಕ್ಷ್ಮಣ್‌, ನಿಸ್ಸಂಶಯವಾಗಿ ಟೆಸ್ಟ್‌ ಕ್ರಿಕೆಟ್‌ ಕಂಡ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬರು. ಆದ್ದರಿಂದಲೇ ಅವರನ್ನು ವೆರಿವೆರಿ ಸ್ಪೆಷಲ್‌ ಎಂದು ಕರೆಯಲಾಗುತ್ತದೆ. ಅವರು ಬಾರಿಸಿದ 281 ರನ್‌, ಅರ್ಧಶತಮಾನದಲ್ಲಿ ದಾಖಲಾದ ಶ್ರೇಷ್ಠ ಇನಿಂಗ್ಸ್‌ ಎಂಬ ಹೆಗ್ಗಳಿಕೆ ಹೊಂದಿದೆ. ಭಾರತವನ್ನು ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ದಡ ಹತ್ತಿಸಿದ ಧೀರ ಅವರು. 2010ರಲ್ಲಿ ಕೊಲಂಬೊದಲ್ಲೂ ಅಂತಹದ್ದೇ ಇನ್ನೊಂದು ಇನಿಂಗ್ಸ್‌ ಆಡಿದರು. ಭಾರತಕ್ಕೆ ಶ್ರೀಲಂಕಾ ನೀಡಿದ್ದು 257 ರನ್‌ ಗಳಿಸುವ ಗುರಿ. ತಂಡದ 4 ವಿಕೆಟ್‌ 62 ರನ್‌ಗೆ ಉರುಳಿಹೋಗಿತ್ತು. ಆಗ ತೆಂಡುಲ್ಕರ್‌ ಜೊತೆಗೂಡಿ ಇನಿಂಗÕನ್ನು ವಿವಿಎಸ್‌ ಬೆಳೆಸಿದರು. ಇಬ್ಬರ ನಡುವೆ 109 ರನ್‌  ಜೊತೆಯಾಟ ದಾಖಲಾಯಿತು. ಭಾರತ 5 ವಿಕೆಟ್‌ ಜಯ ಸಾಧಿಸಿತು. ಇಲ್ಲಿ ವಿವಿಎಸ್‌ ಕೊಡುಗೆ, 149 ಎಸೆತದಲ್ಲಿ 103 ರನ್‌.

 

ಟಾಪ್ ನ್ಯೂಸ್

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.